Identity Card: ಭಾರತೀಯರಿಗೆ ಭರ್ಜರಿ ಗುಡ್ ನ್ಯೂಸ್, ಕೇಂದ್ರ ಸರ್ಕಾರದಿಂದ ಗುರುತಿನ ಚೀಟಿ ಕ್ರಾಂತಿ!
ಭಾರತ ವೇಗವಾಗಿ ಬೆಳೆಯುತ್ತಾ ಇದ್ದು, ಜನಸಂಖ್ಯೆ ಕೂಡ ಡಬಲ್ ಆಗುತ್ತಿದೆ. ಕಳೆದ 30 ವರ್ಷಗಳಲ್ಲಿ ನಮ್ಮ ದೇಶದ ಜನಸಂಖ್ಯೆ ಭಾರಿ ವೇಗದಿಂದ ಬೆಳೆಯುತ್ತಿರುವ ಕಾರಣ ಭದ್ರತೆ ನಿಭಾಯಿಸುವುದು ಕೂಡ ವರ್ಷದಿಂದ ವರ್ಷಕ್ಕೆ ಸಂಕೀರ್ಣವಾಗುತ್ತಿದೆ. ಅದರಲ್ಲೂ ಭಾರತೀಯ ನಾಗರಿಕರನ್ನ ಗುರುತಿಸುವುದು & ಆಂತರಿಕವಾಗಿ ಭದ್ರತೆ ಕಾಪಾಡುವುದು ಕೂಡ ಸವಾಲಿನ ಕೆಲಸವಾಗುತ್ತಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಹಲವಾರು ನಿಯಮ ಜಾರಿಗೊಳಿಸಿದ್ದರೂ ಭವಿಷ್ಯದಲ್ಲಿ ಪರಿಸ್ಥಿತಿ ಹಿಡಿತಕ್ಕೆ ಸಿಗುವುದು ಕಷ್ಟವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇದೀಗ ಭಾರತೀಯ ನಾಗರಿಕರಿಗೆ ಕೇಂದ್ರ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ!
ಹೌದು, ಕೇಂದ್ರ ಸರ್ಕಾರ ಪ್ರತಿ ಭಾರತೀಯ ಪ್ರಜೆಯನ್ನ ಕಡ್ಡಾಯವಾಗಿ ನೋಂದಾಯಿಸಿ ರಾಷ್ಟ್ರ ಯೋಜಿತ ಗುರುತಿನ ಕಾರ್ಡ್ ನೀಡಲು 1955ರ ನಾಗರಿಕತ್ವ ಕಾಯ್ದೆ ಒದಗಿಸಿಕೊಟ್ಟಿದೆ ಎಂದು ಇದೀಗ ಲೋಕಸಭೆಯಲ್ಲಿ ಮಾಹಿತಿ ನೀಡಲಾಗಿದೆ. ಅಂದಹಾಗೆ ತೃಣಮೂಲ ಕಾಂಗ್ರೆಸ್‌ನ ಸದಸ್ಯರೊಬ್ಬರು ಕೋರ್ಟ್ ಆದೇಶ ಅನ್ವಯ ಭಾರತೀಯ ನಾಗರಿಕನಿಗೆ ಗುರುತಿನ ಚೀಟಿಯಾಗಿ ಅಂಗೀಕರಿಸಲ್ಪಟ್ಟ ಕಾರ್ಡ್ ವಿವರದ ಬಗ್ಗೆ ಪ್ರಶ್ನೆ ಕೇಳಿದ್ದರು. ಇನ್ನು ಈ ಪ್ರಶ್ನೆಗೆ ಉತ್ತರವನ್ನ ನೀಡಲಾಗಿದೆ. ಭಾರತೀಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಕೇಂದ್ರ ಸರ್ಕಾರದಿಂದ ಗುರುತಿನ ಚೀಟಿ ವಿಚಾರದಲ್ಲಿ ಕ್ರಾಂತಿ ಆಗಿದೆ.

1955 ನಾಗರಿಕತ್ವ ಕಾಯ್ದೆ ಪ್ರಸ್ತಾಪ
ಅಷ್ಟಕ್ಕೂ ಗೃಹ ವ್ಯವಹಾರಗಳ ರಾಜ್ಯ ಸಚಿವರಾದ ಬಂಡಿ ಸಂಜಯ್ ಕುಮಾರ್ ಅವರು ಇದೀಗ ಲಿಖಿತವಾಗಿ ಉತ್ತರ ನೀಡಿ, ತೃಣಮೂಲ ಕಾಂಗ್ರೆಸ್‌ನ ಸದಸ್ಯರೊಬ್ಬರು ಭಾರತೀಯ ನಾಗರಿಕನಿಗೆ ಗುರುತಿನ ಚೀಟಿಯಾಗಿ ಅಂಗೀಕರಿಸಲ್ಪಟ್ಟ ಕಾರ್ಡ್ ವಿವರದ ಬಗ್ಗೆ ಕೇಳಿದ್ದ ಪ್ರಶ್ನೆಗೆ ಮಾಹಿತಿ ನೀಡಿದ್ದಾರೆ. 1955 ನಾಗರಿಕತ್ವ ಕಾಯ್ದೆ (2004ರ ಐತಿಹಾಸಿಕ ತಿದ್ದುಪಡಿಯೊಂದಿಗೆ) ಪ್ರತಿ ಭಾರತೀಯ ನಾಗರಿಕರನ್ನ ಕೇಂದ್ರ ಸರ್ಕಾರ ಕಡ್ಡಾಯವಾಗಿ ನೋಂದಣಿಗೊಳಿಸಿ, ಅವರ ರಾಷ್ಟ್ರ ಗುರುತಿನ ಕಾರ್ಡ್ ನೀಡಲು ಬದ್ಧವಾಗಿರುತ್ತದೆ. ಭಾರತೀಯ ನಾಗರಿಕರ ನೋಂದಣಿ ಅಥವಾ ರಾಷ್ಟ್ರೀಯ ನಾಗರಿಕರ ನೋಂದಣಿಯಲ್ಲಿ ಇರುವವರು ಈ ಕಾರ್ಡ್ ಪಡೆಯಲು ಅರ್ಹತೆ ಹೊಂದಿರುತ್ತಾರೆ ಎಂದು ಮಾಹಿತಿ ನೀಡಲಾಗಿದೆ.
ಕೇಂದ್ರ ಸರ್ಕಾರದಿಂದ ಹೊಸ ಕ್ರಾಂತಿ
ಒಟ್ನಲ್ಲಿ ಈ ಮೂಲಕ ಕೇಂದ್ರ ಸರ್ಕಾರ ರಾಷ್ಟ್ರೀಯ ಗುರುತಿನ ಚೀಟಿ ವಿಚಾರದಲ್ಲಿ ಕ್ರಾಂತಿಗೆ ಮುಂದಾಗಿ, ಆ ಮೂಲಕ ದೇಶದ ಪ್ರಜೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಮತ್ತೊಂದು ಕಡೆಯಲ್ಲಿ ವಿರೋಧ ಪಕ್ಷಗಳು ಈ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ದೊಡ್ಡ ಕಿರಿಕ್ ಶುರು ಮಾಡಿದ್ದವು. ಅದಕ್ಕೆಲ್ಲಾ ಈಗ ಬ್ರೇಕ್ ಬಿದ್ದಂತೆ ಆಗಿದ್ದು, ಲೋಕಸಭೆಯಲ್ಲಿ ಕೂಡ ಈ ವಿಚಾರವಾಗಿ ದೊಡ್ಡ ಚರ್ಚೆ ನಡೆದಿತ್ತು. ಹೀಗೆ ಎಲ್ಲಾ ಕಡೆಯೂ ರಾಷ್ಟ್ರೀಯ ಗುರುತಿನ ಚೀಟಿ ವಿಚಾರ ಭಾರಿ ಸಂಚಲನ ಸೃಷ್ಟಿ ಮಾಡಿತ್ತು.












Click it and Unblock the Notifications