ರಾಮಮಂದಿರ ನಿರ್ಮಾಣಕ್ಕಾಗಿ ಕಾನೂನಿನ ಅಗತ್ಯವಿದೆ: ಭಾಗವತ್

ನಾಗ್ಪುರ, ಅಕ್ಟೋಬರ್ 18: ರಾಮಮಂದಿರ ನಿರ್ಮಾಣಕ್ಕಾಗಿ ಕಾನೂನಿನ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್(ಮುಖ್ಯಸ್ಥ) ಮೋಹನ್ ಭಾಗವತ್ ಹೇಳಿದರು.

ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಜಯದಶಮಿ ಸಮಾರಂಭದಲ್ಲಿ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.

"ರಾಮ ಜನ್ಮಭೂಮಿಯಲ್ಲಿ ಮೊದಲೂ ದೇವಾಲಯವಿತ್ತು ಎಂಬುದಕ್ಕೆ ಹಲವು ಪುರಾವೆಗಳು ಸಿಕ್ಕರೂ, ಇಂದಿಗೂ ಅಯೋಧ್ಯೆಯ ಜಮೀನನ್ನೇ ಸರಿಯಾಗಿ ಹಂಚಿಕೆ ಮಾಡಲಾಗಿಲ್ಲ. ರಾಜಕೀಯದ ಹಸ್ತಕ್ಷೇಪವಿಲ್ಲದೆ ಇದ್ದಿದ್ದರೆ ಎಂದೂ ಈ ರಾಮಮಂದಿರ ನಿರ್ಮಾಣವಾಗುತ್ತಿತ್ತು. ಹೊಸ ಕಾನೂನನ್ನು ತರುವ ಮೂಲಕ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂಬುದು ನಮ್ಮ ಆಸೆ" ಎಂದು ಭಾಗವತ್ ಹೇಳಿದರು.

Government should clear path for Ram temple construction through law: Mohan Bhagwat

ರಾಮಮಂದಿರ ನಿರ್ಮಾಣ ಅಸ್ಮಿತೆಯ ಹೆಗ್ಗುರುತು. ಇದು ದೇಶದ ಏಕತೆಗೆ ಅತ್ಯಗತ್ಯ ಎಂದರು.

ಕೆಲವು ಮೂಲಭೂತವಾದಿಗಳಲಿ ಈ ವಿಷಯವನ್ನಿಟ್ಟುಕೊಂಡು ರಾಜಕೀಯ ಆಟ ಆಡುತ್ತಿವೆ. ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿವೆ. ಈ ರಾಜಕೀಯದಿಂದಾಗಿಯೇ ರಾಮಮಂದಿರ ನಿರ್ಮಾಣ ವಿಳಂಬವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಆದ್ದರಿಂದಲೇ ಕಾನೂನಿನ ಮೂಲಕವೇ ದೇವಾಲಯ ನಿರ್ಮಾಣವಾಗಬೇಕಿದೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+