• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರನೇ ಬಾರಿ ಇಡಿ ನಿರ್ದೇಶಕರ ಅಧಿಕಾರಾವಧಿ ವಿಸ್ತರಣೆ

|
Google Oneindia Kannada News

ನವದೆಹಲಿ, ನವೆಂಬರ್‌ 18: ಜಾರಿ ನಿರ್ದೇಶನಾಲಯದ ನಿರ್ದೇಶಕರಾದ ಎಸ್‌ಕೆ ಮಿಶ್ರಾ ಅವರ ಅಧಿಕಾರಾವಧಿಯನ್ನು ಮೂರನೇ ಬಾರಿಗೆ ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ. ಅವರು ಈ ಹುದ್ದೆಯಲ್ಲಿ ಮುಂದಿನ ಐದು ವರ್ಷಗಳ ಕಾಲ ಇರುತ್ತಾರೆ.

2020ರಲ್ಲಿ ಎಸ್‌ಕೆ ಮಿಶ್ರಾ ಅವರು ಸೇವೆಯಲ್ಲಿ ಒಂದು ವರ್ಷದ ವಿಸ್ತರಣೆಯನ್ನು ಪಡೆದ ಮೊದಲಿಗರೆನಿಸಿದರು. ಇಡಿ ತನಿಖಾ ಸಂಸ್ಥೆಯ ಅಧಿಕಾರಾವಧಿಯನ್ನು ವಿಸ್ತರಿಸಲು ಸರ್ಕಾರವು ಕಾರ್ಯಕಾರಿ ಆದೇಶವನ್ನು ಅಂಗೀಕರಿಸಿದ ಕೆಲವು ದಿನಗಳ ನಂತರ ಇದು ಎರಡನೇ ವಿಸ್ತರಣೆ ಕ್ರಮವಾಗಿದೆ. ವಿಸ್ತರಣೆಯ ಮೊದಲು ಕೇಂದ್ರದ ಸ್ವತಂತ್ರ ತನಿಖಾ ಸಂಸ್ಥೆಗಳ ಮುಖ್ಯಸ್ಥರು ಎರಡು ವರ್ಷಗಳ ಅಧಿಕಾರಾವಧೀಯನ್ನು ಹೊಂದಿರುತ್ತಿದ್ದರು. ಆದರೆ ಸುಗ್ರಿವಾಜ್ಞೆಯು ಅವರಿಗೆ ಐದು ವರ್ಷಗಳವರೆಗೆ ಹುದ್ದೆಯನ್ನು ವಿಸ್ತರಿಸಲು ಸಾಧ್ಯವಾಗಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ: ಕೊನೆಗೂ ಸಿಕ್ತು ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಜಾಮೀನುಅಕ್ರಮ ಹಣ ವರ್ಗಾವಣೆ ಪ್ರಕರಣ: ಕೊನೆಗೂ ಸಿಕ್ತು ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಜಾಮೀನು

ಸುಗ್ರಿವಾಜ್ಞೆಯ ಮರುದಿನವೇ ನಿವೃತ್ತಿಯಾಗಲಿದ್ದ ಎಸ್‌ಕೆ ಮಿಶ್ರಾ ಅವರಿಗೆ ನವೆಂಬರ್‌ 18, 2022ರವರೆಗೆ ವಿಸ್ತರಣೆಯನ್ನು ನೀಡಲಾಗಿತ್ತು. ನವೆಂಬರ್‌ 13, 20220ರಂದು ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಣೆಯನ್ನು ಮೊದಲ ಬಾರಿ ವಿಸ್ತರಣೆಯನ್ನು ಸುಪ್ರಿಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಆದರೆ ನ್ಯಾಯಾಧೀಶರು ಮಧ್ಯಪ್ರವೇಶೀಸಲು ನಿರಾಕರಿಸಿದರು. ಸಿವಿಸಿ ಕಾಯ್ದೆಯು ಅಧಿಕಾರಾವಧಿಯನ್ನು ಎರಡು ವರ್ಷಗಳಿಗೆ ಸೀಮಿತಗೊಳಿಸುವುದಿಲ್ಲ. ಹಾಗಾಗಿ ಈಗ ನಡೆಯುತ್ತಿರುವ ಪ್ರಕರಣಗಳನ್ನು ಮುಕ್ತಾಯಗೊಳಿಸಲು ವಿಸ್ತರಣೆಯನ್ನು ನೀಡಬಹುದು ಎಂದು ನ್ಯಾಯಮೂರ್ತಿ ಹೇಳಿದರು.

ತನಿಖಾ ಸಂಸ್ಥೆಯ ಮುಖ್ಯಸ್ಥರ ಅಧಿಕಾರಾವಧಿಯನ್ನು ವಿಸ್ತರಿಸುವ ಕೇಂದ್ರ ಸರ್ಕಾರದ ನಿರ್ಧಾರವು ಪ್ರತಿಪಕ್ಷಗಳಿಂದ ಭಾರಿ ಟೀಕೆಯನ್ನು ಎದುರಿಸಬೇಕಾಯಿತು. ಕಾಂಗ್ರೆಸ್‌ ಮತ್ತು ತೃಣಮೂಲ ಕಾಂಗ್ರೆಸ್‌ ಸೇರಿದಂತೆ ಹಲವು ಪಕ್ಷಗಳು ಸರ್ಕಾರದ ಆಮಿಷಗಳಿಗೆ ಮಣಿದ ಅಧಿಕಾರಿಗಳಿಗೆ ಬಹುಮಾನ ನೀಡುವ ಕುತಂತ್ರವಾಗಿದೆ ಎಂದು ಟೀಕೆ ಮಾಡಿದರು.

ಜಾರ್ಖಂಡ್‌ನ ಕಾಂಗ್ರೆಸ್ ಶಾಸಕರ ಬಳಿ 100 ಕೋಟಿ ಲೆಕ್ಕ ರಹಿತ ಹಣ ಪತ್ತೆಜಾರ್ಖಂಡ್‌ನ ಕಾಂಗ್ರೆಸ್ ಶಾಸಕರ ಬಳಿ 100 ಕೋಟಿ ಲೆಕ್ಕ ರಹಿತ ಹಣ ಪತ್ತೆ

ಕೇಂದ್ರ ಸರ್ಕಾರವು ಇಡಿ ಹಾಗೂ ಕೇಂದ್ರ ತನಿಖಾ ಸಂಸ್ಥೆಯ ಇತರರಿಂದ ಅಧಿಕಾರವನ್ನು ಕಸಿದುಕೊಳ್ಳಲು ಹಾಗೂ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಲು ಸಹಾಯಕರಂತೆ ಬಳಸಿಕೊಳ್ಳುತ್ತಿದೆ. ಅಲ್ಲದೆ ಈಗ ಅವರಿಗೆ ಬಹುಮಾನವನ್ನು ನೀಡಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಕಪ್ಪುಹಣವನ್ನು ತಡೆಯಲು ಇಡಿ ದೇಶದಲ್ಲಿ ಎರಡು ಪ್ರಮುಖ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. 1.ಕ್ರಿಮಿನಲ್ ಮನಿ ಲಾಂಡರಿಂಗ್‌ ಕಾಯ್ದೆ ಹಾಗೂ 2. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ. ಇಡಿ ಸಂಸ್ಥೆಯ ನಿರ್ದೇಶಕರ ಹುದ್ದೆಯು ಕೇಂದ್ರ ಸರ್ಕಾರದಲ್ಲಿ ಹೆಚ್ಚುವರಿ ಕಾರ್ಯದರ್ಶಿ ಶ್ರೇಣಿಯ ಹುದ್ದೆಯಾಗಿದೆ.

English summary
The central government has extended the tenure of Enforcement Directorate Director SK Mishra for the third time. He will remain in this post for the next five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X