Pay commission: ಫಿಟ್‌ಮೆಂಟ್ ಹೆಚ್ಚಳ ಸೇರಿ ಕೇಂದ್ರ ಸರ್ಕಾರಿ ನೌಕರರ ನಿರೀಕ್ಷೆಗಳು, ಕಾರ್ಯ ಸಾಧ್ಯತೆಗಳ ಪಟ್ಟಿ
ಬೆಂಗಳೂರು, ಜುಲೈ 16: ಕೇಂದ್ರ ಸರ್ಕಾರಿ ನೌಕರರಿರು ಏಳನೇ ವೇತನ ಆಯೋಗದಡಿ ತುಟ್ಟಿಭತ್ಯೆ ಹೆಚ್ಚಳ ಪಡೆದುಕೊಂಡಿದ್ದಾರೆ. ಇದರ ಮಧ್ಯೆ ನೌಕರರಿಗೆ ಕೇಂದ್ರ ಸರ್ಕಾರವು 8ನೇ ವೇತನ ಆಯೋಗದಡಿ ಹೆಚ್ಚಿನ ವೇತನ, ಭತ್ಯೆಗಳು ಮತ್ತು ಪಿಂಚಣಿಗಳಲ್ಲಿ ದೊಡ್ಡ ಬದಲಾವಣೆಗಳನ್ನು ಘೋಷಿಸುವ ಸಾಧ್ಯತೆ ಇದೆ.
8ನೇ ವೇತನ ಆಯೋಗವು 2026ರ ಜನವರಿ 1ರಿಂದ ಜಾರಿಗೆ ಬರಲಿದೆ. ವೇತನ ಆಯೋಗಗಳ ನಡುವೆ 10 ವರ್ಷಗಳ ಅಂತರವಿರುತ್ತದೆ. ಅದರಂತೆ 7ನೇ ವೇತನ ಆಯೋಗದ ಅವಧಿ 2025ಕ್ಕೆ ಡಿಸೆಂಬರ್ 31ಕ್ಕೆ ಅಂತ್ಯಗೊಳ್ಳಲಿದೆ.

ಪ್ರಧಾನಿ ನೇತೃತ್ವದ ಸರ್ಕಾರವು 8 ನೇ ವೇತನ ಆಯೋಗದ ಸಂವಿಧಾನ ಜಾರಿ ಬಗ್ಗೆ ಚರ್ಚೆ ನಡೆಸಿದೆ. ಅದರ ಜಾರಿ ಬಗ್ಗೆ ಘೋಷಣೆ ಮಾಡಲಿದೆ ಎಂದು ಕೇಂದ್ರ ಸರ್ಕಾರಿ ನೌಕರರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಲ್ಲದೇ ಫಿಟ್‌ಮೆಂಟ್ ಅಂಶ ಹೆಚ್ಚಳವಾಗುವ ಸಾಧ್ಯತೆ ಇದೆ.
ಫಿಟ್‌ಮೆಂಟ್ ಅಂಶ 3.68 ಕ್ಕೆ ಹೆಚ್ಚಳ ಸಂಭವ
ವೇತನ ಆಯೋಗವು ಸಾಮಾನ್ಯವಾಗಿ ತನ್ನ ವರದಿಯನ್ನು ಪೂರ್ಣಗೊಳಿಸಲು 12-18 ತಿಂಗಳು ತೆಗೆದುಕೊಳ್ಳುತ್ತದೆ. ಉದ್ಯೋಗಿಗಳ ಆರ್ಥಿಕ ಅಂಶಗಳು ಮತ್ತು ಅವಶ್ಯಕತೆ ಗಮನಿಸಿಕೊಂಡು, ವೇತನ ಮತ್ತು ಪಿಂಚಣಿಯನ್ನು ಲೆಕ್ಕಾಚಾರ ಮಾಡಲು ಫಿಟ್‌ಮೆಂಟ್ ಅಂಶವನ್ನು ಪ್ರಸ್ತುತ 2.57 ರಿಂದ ಕನಿಷ್ಠ 3.68 ಕ್ಕೆ ಹೆಚ್ಚಳವಾಗಲಿದೆ.
ಏರಿಕೆ ಆಗುವ 3.68 ರ ವರ್ಧಿತ ಫಿಟ್‌ಮೆಂಟ್ ಅಂಶದೊಂದಿಗೆ, ಎಲ್ಲಾ 18 ಪೇ ಮ್ಯಾಟ್ರಿಕ್ಸ್ ಹಂತಗಳಡಿ ನೌಕರರ ಮೂಲ ವೇತನಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಉದಾಹರಣೆಗೆ, ಪೇ ಮ್ಯಾಟ್ರಿಕ್ಸ್ ಹಂತ 1ರಲ್ಲಿ, ಮೂಲ ವೇತನವು 7ನೇ ಆಯೋಗ ಅಡಿಯಲ್ಲಿ ರೂ 18,000 ಆಗಿತ್ತು. ಇದು 8ನೇ ವೇತನ ಆಯೋಗದಡಿ ರೂ 21,600 ಕ್ಕೆ ಹೆಚ್ಚಾಗಬಹುದು. ಪೇ ಮ್ಯಾಟ್ರಿಕ್ಸ್ ಲೆವೆಲ್ 18 ರಲ್ಲಿ, ಅತ್ಯಧಿಕ ದರದಲ್ಲಿ ಮೂಲ ವೇತನವು ರೂ 2.50 ಲಕ್ಷದಿಂದ ರೂ 3 ಲಕ್ಷಕ್ಕೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಡಿಎ, ಸಾರಿಗೆ ಭತ್ಯ, ಮನೆ ಬಾಡಿಗೆ ಭತ್ಯೆ ಪರಿಷ್ಕರಣೆ?
ವೇತನ ಪರಿಷ್ಕರಣೆ ಜೊತೆಗೆ 8 ನೇ ವೇತನ ಆಯೋಗ ಅಡಿಯಲ್ಲಿ ಹಣದುಬ್ಬರ ಮತ್ತು ಜೀವನ ವೆಚ್ಚಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಮನೆ ಬಾಡಿಗೆ ಭತ್ಯೆ (HRA), ಸಾರಿಗೆ ಭತ್ಯೆ ಮತ್ತು ತುಟ್ಟಿ ಭತ್ಯೆ (DA) ನಂತಹ ಉದ್ಯೋಗಿಗಳ ಭತ್ಯೆಗಳನ್ನು ಪರಿಷ್ಕರಣೆಗೊಳ್ಳುವ ಸಾಧ್ಯತೆ ಇದೆ.
ನಿರೀಕ್ಷೆಗಳು ಮತ್ತು ಬೇಡಿಕೆಗಳಿಗೆ ವ್ಯತಿರಿಕ್ತವಾಗಿ 8ನೇ ವೇತನ ಆಯೋಗದ ರಚನೆಯ ಬಗ್ಗೆ ಭಾರತ ಸರ್ಕಾರ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ಆಯೋಗವು ಲಕ್ಷಾಂತರ ಪಿಂಚಣಿದಾರರು ಮತ್ತು ಕೇಂದ್ರ ಸರ್ಕಾರಿ ನೌಕರರ ಕಳವಳ ನಿವಾರಿಸುವ ವಿಶ್ವಾಸ ನೀಡಲಿದೆ.












Click it and Unblock the Notifications