ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶ್ಲೀಲ ವೆಬ್ ಸೈಟ್ ನಿಷೇಧಕ್ಕೆ ಮುಂದಾದ ಸರ್ಕಾರ

|
Google Oneindia Kannada News

ನವದೆಹಲಿ, ನ.12: ಅಶ್ಲೀಲ ವೆಬ್ ಸೈಟ್ ನಿಷೇಧ ಕುರಿತು ಅನೇಕ ಚರ್ಚೆಗಳು ಜಾರಿಯಲ್ಲಿರುವ ಬೆನ್ನಲ್ಲೆ ಕೇಂದ್ರ ಸರ್ಕಾರ ಇಂಟರ್ ನೆಟ್ ಪೂರೈಕೆದಾರ ಸಂಸ್ಥೆಗಳಿಗೆ ಸೂಚನೆಯೊಂದನ್ನು ನೀಡಿದೆ.

ಸೆಕ್ಸ್ ನಂಥ ವಿಚಾರಗಳನ್ನು ನಿರಂತರವಾಗಿ ಜನರ ಮನಸ್ಸಿನಲ್ಲಿ ಬಿತ್ತುತ್ತಿರುವ ಅಶ್ಲೀಲ ವೆಬ್ ಸೈಟ್ ಗಳ ಮೇಲೆ ಸೂಕ್ತ ನಿರ್ಬಂಧ ಹೇರಿ, ಈ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ಪಾಲ್ಗೊಳ್ಳಿ ಎಂದು ಇಂಟರ್ ನೆಟ್ ಪೂರೈಕೆದಾರ ಸಂಸ್ಥೆಗಳಿಗೆ ಆದೇಶ ಮಾಡಿದೆ.[ಅಶ್ಲೀಲ ವೆಬ್ ಸೈಟ್ ತಡೆ ಅಸಾಧ್ಯ: ಐಎಸ್ ಪಿಎಐ]

shavishanr prasad

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ನೇತೃತ್ವದಲ್ಲಿ ನಡೆದ ಸಭೆ ಇಂಥ ತೀರ್ಮಾನ ಕೈಗೊಂಡಿದೆ. ಸಂಪೂರ್ಣವಾಗಿ ನಿಷೇಧ ಸದ್ಯಕ್ಕೆ ಅಸಾಧ್ಯವಾಗಿದ್ದರೂ ಮಕ್ಕಳ ಅಶ್ಲೀಲ ಚಿತ್ರ, ವಿಡಿಯೋ ಪ್ರದರ್ಶನಕ್ಕಾದರೂ ತಡೆ ಹಾಕಿ, ಜತೆಗೆ ಇಂಥ ಸೈಟ್ ಪ್ರವೇಶಿಸಿದಾಗ ಇಂಟರ್ ನೆಟ್ ವೇಗಕ್ಕೆ ಕಡಿವಾಣ ಹಾಕಿ. ನಿಮ್ಮ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿ ಎಂದು ಆದೇಶದಲ್ಲಿ ತಿಳಿಸಿದೆ.

ಟೆಲಿಕಾಂ ಮತ್ತು ಐಟಿ ಕ್ಷೇತ್ರಗಳೆರಡೂ ಒಂದಾಗಿ ಕೆಲಸ ಮಾಡಬೇಕು. ಈ ಬಗ್ಗೆ ಹಿಂದೆ ಒಮ್ಮೆ ಚರ್ಚಿಸಲಾಗಿದ್ದು ಸೂಕ್ತ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಅಶ್ಲೀಲ ಸೈಟ್ ಗಳನ್ನು ಬಂದ್ ಮಾಡಲು ಹಲವಾರು ಸಮಸ್ಯೆಗಳಿವೆ ಎಂಬುದು ಅರಿವಿಗೆ ಬಂದಿದೆ. ಆದರೆ ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ ಎಂದು ಹೇಳಿದೆ.

ಇಂಟರ್ ನೆಟ್ ಪೂರೈಸುವ ಕೆಲವು ಪ್ರಮುಖ ಕಂಪನಿಗಳ ಪಟ್ಟಿ
ಭಾರತದಲ್ಲಿ ಸುಮಾರು 150ಕ್ಕೂ ಹೆಚ್ಚು ಇಂಟರ್ ನೆಟ್ ಪೂರೈಕೆದಾರ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಅವುಗಳಲ್ಲಿ ಪ್ರಮುಖವಾಗಿ ಕೆಳಗಿನವುಗಳನ್ನು ಹೆಸರಿಸಬಹುದು.
* ಭಾರತ ಸಂಚಾರ ನಿಗಮ ನಿಯಮಿತ(ಬಿಎಸ್ ಎನ್ ಎಲ್)
* ಏರ್ ಟೆಲ್ ಭಾರ್ತಿ ಟೆಲಿವೆಂಚರ್ಸ್
* ರಿಲಾಯನ್ಸ್ ಕಮ್ಯೂನಿಕೇಶನ್ಸ್
* ಎಚ್ ಸಿ ಎಲ್ ಲಿಮಿಟೆಡ್
* ಟಾಟಾ ಟಿಲಿಸರ್ವಿಸ್
* ಎಚ್ ಎಫ್ ಸಿಎಲ್
* ಐ ಪಾಥ್ ಇಂಡಿಯಾ
* ಐಡಿಯಾ
* ಎಂಟಿಎನ್ಎಲ್
* ಯು ಟೆಲಿಕಾಮ್
* ಏಷ್ಯಾ ನೆಟ್ ಕಮ್ಯೂನಿಕೆಷನ್

English summary
Government of India determined to ban all types of pornography websites. Government have asked various Internet Service Providers (ISPs) to create a blueprint, upgrade their infrastructure and implement a nation-wide ban on porn related websites. Indian government have also sought Internet and Mobile Association of India (IAMAI) for assistance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X