Tirupati Darshan: ತಿರುಪತಿ ಭಕ್ತರಿಗೆ ಗುಡ್ ನ್ಯೂಸ್.. 2 ಗಂಟೆಯಲ್ಲಿ ಸುಲಭವಾಗಿ ಶ್ರೀವಾರಿ ದರ್ಶನ ಮಾಡುವ ಚಾನ್ಸ್!
ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪ ದೇವಾಲಯಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ತಿರುಪತಿಯಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಭಕ್ತರು ಸರದಿ ಸಾಲಿನಲ್ಲಿ ನಿಂತು ಶ್ರೀವಾರಿ ದರ್ಶನ ಪಡೆಯುತ್ತಿದ್ದಾರೆ.
ತಿರುಪತಿಯಲ್ಲಿ ಹಠಾತ್ ಜನಸಂದಣಿ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ದೇವಾಸ್ಥಾನದ ಆಡಳಿತ ಮಂಡಳಿ ಭಕ್ತರ ಸಂಖ್ಯೆಯನ್ನು ಹೆಚ್ಚಿಸಲು ದರ್ಶನದ ಸಮಯವನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಇತ್ತೀಚೆಗೆ ಮಧ್ಯವರ್ತಿಗಳಿಂದಾಗಿ ಭಕ್ತರು ಮೋಸ ಹೋಗುತ್ತಿದ್ದಾರೆ. 300 ರೂಪಾಯಿಯ ವಿಶೇಷ ಪ್ರವೇಶ ಟಿಕೆಟ್ ಅನ್ನು ಮಧ್ಯವರ್ತಿಗಳಿಂದ ಹೆಚ್ಚಿನ ಹಣಕ್ಕೆ ಪಡೆದ ಭಕ್ತರು ಏಕಾಏಕಿ ತಿರುಪತಿಗೆ ಆಗಮಿಸಿದಾಗ ಉಳಿದ ಭಕ್ತರಿಗೆ ಇದು ತೊಂದರೆಯನ್ನುಂಟು ಮಾಡುತ್ತದೆ.

ಇಂತಹ ಮಧ್ಯವರ್ತಿಗಳ ಮೇಲೆ ನಿಗಾ ಇಡಲು ಟಿಟಿಡಿ ನಿರ್ಧರಿಸಿದೆ. ಇದರಿಂದಾಗಿ ಭಕ್ತರು ಸುಲಭವಾಗಿ 300 ರೂಪಾಯಿ ವಿಶೇಷ ಪ್ರವೇಶ ಟಿಕೆಟ್‌ನೊಂದಿಗೆ 2 ರಿಂದ 3 ಗಂಟೆಗಳ ಒಳಗೆ ದರ್ಶನ ಪಡೆಯಬಹುದು.
ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಡಿಡಿಟಿಯಲ್ಲಿ ಹೊಸ ಬದಲಾವಣೆಗಳು ಆಗುತ್ತಿವೆ. ಐಎಎಸ್ ಅಧಿಕಾರಿ ಶ್ಯಾಮಲಾ ರಾವ್ ಅವರನ್ನೂ ಇಒ ಆಗಿ ನೇಮಿಸಲಾಗಿದೆ. ನೂತನ ಇಒ ತಿರುಮಲದಲ್ಲಿ ಸಾಕಷ್ಟು ಬದಲಾವಣೆಯನ್ನು ತರುತ್ತಿದ್ದಾರೆ. ಅವರು ನಿರಂತರವಾಗಿ ಪರೀಕ್ಷೆ ಹಾಗೂ ತಪಾಸಣೆ ನಡೆಸುತ್ತಿದ್ದಾರೆ.
ಅಲ್ಲದೆ ತಿರುಪತಿಗೆ ಆಗಮಿಸುವ ಭಕ್ತರು ಮೆಟ್ಟಿಲು ಮುಲಕ ತೆರಳು ಸಾಗುವಾಗ ಕಾಡುಪ್ರಾಣಿಗಳ ದಾಳಿಗಳಾಗಿದೆ. ಇದರಿಂದಾಗಿ ವನ್ಯಜೀವಿಗಳಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ದೇವಸ್ಥಾನವೂ ಕ್ರಮ ಕೈಗೊಂಡಿದೆ. ಇನ್ನು ಭದ್ರತೆ ಹೆಚ್ಚಿಸಿರುವುದರಿಂದ ಭಕ್ತರು ಸಂತಸ ಪಡುವಂತಾಗಿದೆ.

ಇಂದು ವಿಐಪಿ ದರ್ಶನ ರದ್ದು:-
ತಿರುಮಲ ಶ್ರೀವಾರಿ ದರ್ಶನಕ್ಕೆ ತೆರಳುವ ಭಕ್ತರಿಗೆ ಮಹತ್ವದ ಸೂಚನೆಯೊಂದನ್ನು ಟಿಟಿಡಿ ನೀಡಿದೆ. ಜುಲೈ ತಿಂಗಳಲ್ಲಿ ಎರಡು ದಿನಗಳ ಕಾಲ ವಿಐಪಿ ದರ್ಶನವನ್ನು ಟಿಟಿಡಿ ರದ್ದುಗೊಳಿಸಿದೆ.
ಜುಲೈ 9 ರಂದು ಶ್ರೀವಾರಿ ದೇವಸ್ಥಾನದಲ್ಲಿ ಕೋಯಿಲ್ ಆಳ್ವಾರ್ ತಿರುಮಂಜನ ನಡೆಯಲಿದೆ. ಜುಲೈ 16ರಂದು ಸಾಲಕಟ್ಲ ಅಣಿವಾರ ಆಸ್ಥಾನಂ ಉತ್ಸವವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜುಲೈ 9 ಮತ್ತು ಜುಲೈ 16ರ ವಿಐಪಿ ದರ್ಶನವನ್ನು ಟಿಟಿಡಿ ರದ್ದುಗೊಳಿಸಿದೆ. ಈ ಎರಡು ದಿನ ಶಿಫಾರಸು ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ. ಭಕ್ತರು ಇದನ್ನು ಗಮನಿಸಿ ದರ್ಶನಕ್ಕೆ ಬರಬೇಕು ಎಂದು ಟಿಟಿಡಿ ಸೂಚಿಸಿದೆ.
ಶ್ರೀವಾರಿ ದೇವಸ್ಥಾನದಲ್ಲಿ ವರ್ಷದಲ್ಲಿ ನಾಲ್ಕು ಬಾರಿ ಕೊಯಿಲ್ ಆಳ್ವಾರ್ ತಿರುಮಂಜನವನ್ನು ನಡೆಸಲಾಗುತ್ತದೆ. ಯುಗಾದಿ ಹಬ್ಬ, ಅಣಿವಾರ ಆಸ್ಥಾನ, ಬ್ರಹ್ಮೋತ್ಸವ ಮತ್ತು ವೈಕುಂಠ ಏಕಾದಶಿಯಂತಹ ಹಬ್ಬಗಳ ಹಿಂದಿನ ದಿನ ದೇವಾಲಯದ ಶುದ್ಧೀಕರಣ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಇದನ್ನು ಕೊಯಿಲ್ ಆಳ್ವಾರ್ ತಿರುಮಂಜನ ಎಂದು ಕರೆಯಲಾಗುತ್ತದೆ.
ಜುಲೈ 6ರಂದು ಅಣಿವಾರ ಆಸ್ಥಾನಂ ಹಿನ್ನೆಲೆಯಲ್ಲಿ ಕೋಯಿಲ್ ಆಳ್ವಾರ್ ತಿರುಮಂಜನ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀವಾರಿ ದೇವಸ್ಥಾನದಲ್ಲಿ ಬೆಳಿಗ್ಗೆ ಆರು ಗಂಟೆಗೆ ತಿರುಮಂಜನಂ ಆರಂಭವಾಗಿ ಮಧ್ಯಾಹ್ನದವರೆಗೆ ಸುಮಾರು ಐದು ಗಂಟೆಗಳ ಕಾಲ ನಡೆಯುತ್ತದೆ. ತಿರುಮಂಜನದ ನಂತರ ಅರ್ಚಕರು ಶ್ರೀವಾರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇದರ ನಂತರ ಮಧ್ಯಾಹ್ನ 12 ಗಂಟೆಯಿಂದ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಟಿಟಿಡಿ ವಿಐಪಿ ದರ್ಶನಗಳನ್ನು ರದ್ದುಗೊಳಿಸಿದೆ.












Click it and Unblock the Notifications