ಬೇಸಿಗೆ ರಜೆಗೂ ಮುನ್ನ ಶಾಲಾ ಮಕ್ಕಳಿಗೊಂಡು ಸಂತಸದ ಸುದ್ದಿ
School Holiday: ಬೇಸಿಗೆಗೂ ಮುನ್ನವೇ ಬಿಸಿಲಿನ ಪ್ರಯಾಣ ಹೆಚ್ಛಾಗುತ್ತಲೇ ಇದೆ. ಇದರಿಂದ ಬೆದರಿಂದ ಜನ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಈಗಾಗಲೇ ಚಳಿಗಾಲದಲ್ಲಿ ರಣಭೀಕರ ಚಳಿ ಹಿನ್ನೆಲೆ ಹಲವು ರಾಜ್ಯಗಳಲ್ಲಿ ಶಾಲೆಗಳಿಗೆ ಘೋಷಣೆ ಮಾಡಲಾಗಿತ್ತು. ಹಾಗೆಯೇ ಇದೀಗ ಬೇಸಿಗೆ ರಜೆಗೂ ಮುನ್ನವೇ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್‌ವೊಂದು ಸಿಗುವ ಸಾಧ್ಯತೆಯಿದೆ.
ಸಾಮಾನ್ಯವಾಗಿ ರಜೆ ಸಿಕ್ಕರೆ ಸಾಕು ವಿದ್ಯಾರ್ಥಿಗಳು ಹಾಲು ಕುಡಿದಷ್ಟು ಸಂತೋಷಪಡುತ್ತಾರೆ. ಮತ್ತೊಂದೆಡೆ ಅವರ ವಿದ್ಯಾಭ್ಯಾಸದ ದೃಷ್ಟಿಯಿಂದಲೂ ಶಿಕ್ಷಣ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಬಿಸಿಲಿನ ಪ್ರಮಾಣ ಹೆಚ್ಚಾದ ಸಂದರ್ಭಗಳಲ್ಲಿ ಮಕ್ಕಳ ಹಿತದೃಷ್ಟಿಯಿಂದ ಸರ್ಕಾರಗಳು ಮನೆಯಿಂದಲೇ ಅಂದರೆ, ಆನ್‌ಲೈನ್ ತರಗತಿ ನಡೆಸುವ ಬಗ್ಗೆ ಸೂಚನೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಶಾಲೆಗೆ ಹೋಗುವುದಾದರೆ, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಅರ್ಧ ದಿನದ ಶಾಲೆಗಳನ್ನು ನಡೆಸುವ ಸಾಧ್ಯತೆಯಿದೆ. ಕಳೆದ ಬಾರಿಗಿಂತ ಈ ವರ್ಷ ಬೇಗನೇ ಅಂದರೆ ಶೀಘ್ರಲ್ಲೇ ಅರ್ಧ ದಿನದ ಶಾಲೆಗಳು ಪ್ರಾರಂಭ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಬೇಸಿಗೆ ಕಾಲ ಆರಂಭ ಆಗುವ ಮೊದಲೇ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆ ಕಳೆದ ವರ್ಷಕ್ಕಿಂತ ಅರ್ಧ ದಿನದ ಶಾಲೆಗಳು ಮೊದಲೇ ಪ್ರಾರಂಭವಾಗುವ ಸಾಧ್ಯತೆಯಿದೆ.
ಮಾರ್ಚ್‌ನಲ್ಲಿ ಬೇಸಿಗೆ ಆರಂಭ ಆಗಬೇಕಿತ್ತು. ಆದರೆ ರಣಬಿಸಿಲು ಈಗಿನಿಂದಲೇ ಮುಂದುವರೆದಿದೆ. ಬೆಳಗ್ಗೆಯಿಂದಲೂ ಬಿಸಲಿನ ವಾತಾವರಣ ಮುಂದುವರೆಯುತ್ತಿದೆ. ಅದರಲ್ಲೂ ಇದರಿಂದ ಶಾಲಾ ಮಕ್ಕಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಶಾಲಾ ಅವಧಿ ವೇಳೆ ಬಿಸಿಲು ಹೆಚ್ಚುತ್ತಿದೆ. ಪರಿಣಾಮ ಅರ್ಧ ದಿನಸದ ಶಾಲೆಗಳನ್ನು ನಡೆದುವ ಕ್ರಮ ಜಾರಿಯಾಗುವ ಸಾಧ್ಯತೆಯಿದೆ.
ಪ್ರತಿ ವರ್ಷ ಮಾರ್ಚ್ 15-20ರಂದು ಒಂದು ದಿನದ ಪೂರ್ಣ ತರಗತಿಗಳು ನಡೆಯುತ್ತದೆ. ಆದರೆ ಕಳೆದ ವರ್ಷ ಬಿಸಿಲಿನ ತೀವ್ರತೆಯಿಂದಾಗಿ ಶಾಲೆಗಳು ಅರ್ಧ ದಿನಕ್ಕೆ ಸೀಮಿತ ಆದವು. ಈ ಬಾರಿ ಇನ್ನೂ ಬೇಗ ಇದನ್ನಯ ಪ್ರಾರಂಭಿಸಲು ಸರ್ಕಾರ ಯೋಚಿಸುತ್ತಿದೆ. ಈ ಬಗ್ಗೆ ವಿದ್ಯಾರ್ಥಿ ಸಂಘಗಳು ಮತ್ತು ಪೋಷಕರಿಂದ ಮನವಿ ಸಹ ಬಂದಿವೆ.
ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆ ಆಗಲಿದೆ ಎಂದು ಹವಾಮಾನ ಇಲಾಖೆಯೂ ಸಹ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಆದ್ದರಿಂದ ಸರ್ಕಾರವು ಮುನ್ನೆಚ್ಚರಿಕೆ ಕ್ರಮವಾಗಿ ಒಂದು ದಿನದ ಶಾಲೆಗಳನ್ನು ತೆರೆಯುವ ಬಗ್ಗೆ ಯೋಚಿಸುತ್ತಿದೆ. ಇಂದು ವೇಳೆ ಇದು ಸಂಭವಿಸಿದರೆ ಫೆಬ್ರವರಿ 25-28ರಿಂದ ಆಂಧ್ರಪ್ರದೇಶದಲ್ಲಿ ಅರ್ಧ ದಿನದ ಶಾಲೆಗಳು ಪ್ರಾರಂಭ ಆಗುವ ಸಾಧ್ಯತೆಯಿದೆ. ಯಾಕೆಂದರೆ ಈ ಭಾಗದಲ್ಲೇ ಹೆಚ್ಚು ಬಿಸಿಲು ಬೀಳುತ್ತಿದೆ.
ಈಗಾಗಲೇ ಹಲವು ರಾಜ್ಯಗಳಲ್ಲಿ ಸರ್ಕಾರಿ ರಜೆಗಳ ಜೊತೆ ಸ್ಥಳೀಯ ಹಬ್ಬಗಳು, ಕಾರ್ಯಕ್ರಮಗಳಿಗೂ ಶಾಲೆಗಳಿಗೆ ರಜೆ ನೀಡಲಾಗಿದೆ. 2025ರ ಆರಂಭದಿಂದಲೂ ಕೆಲವೆಡೆ ಶಾಲೆಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಇನ್ನೂ ಇದೀಗ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಜನರು ಮನೆಯಿಂದ ಹೊರಗಡೆ ಬರಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಈ ರಣಭೀಕರ ಬಿಸಿಲಿನಿಂದ ಹಲವೆಡೆ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾದ ಘಟನೆಗಳು ಕೂಡ ನಡೆದಿವೆ. ಆದ್ದರಿಂದ ಅರ್ಧ ದಿನದ ತರಗತಿ ನಡೆಸುವ ಕ್ರಮವನ್ನು ಶೀಘ್ರದಲ್ಲೇ ಜಾರಿಗೊಳಿಸುವ ಸಾಧ್ಯತೆಯಿದೆ.












Click it and Unblock the Notifications