ಆಕೆ ಕತ್ತಲೆ ಕೋಣೆಯಲ್ಲಿ ಬೆತ್ತಲಾಗಿ ಕಳೆದ ಆ ಕರಾಳ 20 ವರ್ಷ...!

Posted By:
Subscribe to Oneindia Kannada

ಪಣಜಿ, ಜುಲೈ 12: ಸುದೀರ್ಘ 20 ವರ್ಷಗಳು ಅಂದರೆ ಒಬ್ಬ ಮನುಷ್ಯನ ಬದುಕಿನಲ್ಲಿ ಏನೆಲ್ಲಾ ಆಗಬಹುದು! ಪ್ರೀತಿ ಪಾತ್ರ ವ್ಯಕ್ತಿಯ ಮರಣ, ಹಾಲ್ಗಲ್ಲದ ನಗುವಿನ ಮಗುವಿನ ಜನನ, ಪ್ರೇಮ ವೈಫಲ್ಯ, ಇನ್ನೆಲ್ಲೋ ಸಾಫಲ್ಯ...! ಏನೇ ಆದರೂ ಬದುಕು ಚಲಿಸುತ್ತಿರುತ್ತದೆ... ಚಕ್ರದ ಹಾಗೆ!

ಆದರೆ ಉತ್ತರ ಗೋವಾದ ಹಳ್ಳಿಯೊಂದರ ಕತ್ತಲೆ ಕೋಣೆಯಲ್ಲಿ ಬೆತ್ತಲಾಗಿ ಹದಿನೈದು ವರ್ಷಗಳಿಂದ ಬಂಧಿಯಾಗಿರುವ ಈ ಮಹಿಳೆಗೆ ಬದುಕಂದ್ರೆ ಅಕ್ಷರಶಃ ಕತ್ತಲೆ!

ರಾಯಚೂರು: ಕಾರ್ಪೋರೇಶನ್ ಆಫೀಸಿನಲ್ಲೇ ಮಹಿಳೆಗೆ ಒದ್ದ ಕಂಪ್ಯೂಟರ್ ಆಪರೇಟರ್

Goa's 50 year old woman had locked in a dark room for 15 years

ಹೌದು, 50 ವರ್ಷದ ಮಾನಸಿಕ ಅಸ್ವಸ್ಥೆಯನ್ನು ಕಳೆದ 20 ವರ್ಷದಿಂದ ಕತ್ತಲೆ ಕೋಣೆಯಲ್ಲಿ ಬಂಧಿಸಲಾಗಿದ್ದ ವಿಕೃತ ಘಟನೆಯೊಂದು ಉತ್ತರ ಗೋವಾದ ಹಳ್ಳಿಯೊಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

20 ವರ್ಷದ ಹಿಂದೆ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದ ಮಹಿಳೆಯೊಬ್ಬರನ್ನು ಆಕೆಯ ಸಹೋದರನೇ ಮನೆಯ ಕೋಣೆಯೊದರಲ್ಲಿ ಕೂಡಿಹಾಕಿದ್ದರು. ಅಂದಿನಿಂದ ಇಂದಿನವರೆಗೂ ಆ ಕೋಣೆಯ ಬಾಗಿಲು ತೆರದಿನಲ್ಲ. ಬಿರುಕು ಬಿಟ್ಟಿದ್ದ ಬಾಗಿಲ ತಳಭಾಗದಿಂದಲೇ ಆಕೆಗೆ ಪ್ರತಿದಿನ ಆಹಾರ ನೀಡಲಾಗುತ್ತಿತ್ತು.

70 ವಿದ್ಯಾರ್ಥಿನಿಯರನ್ನು ಬೆತ್ತಲಾಗಿಸಿದ ವಾರ್ಡನ್: ಛಿ ಎಂಥ ನಾಚಿಕೆಗೇಡು!

ಮಲ-ಮೂತ್ರ ವಿಸರ್ಜನೆಯೂ ಆ ಕೋಣೆಯಲ್ಲೇ! ನೆರೆ-ಹೊರೆಯ ಯಾರೋ ಒಬ್ಬರು ಅನಾಮಿಕ ವ್ಯಕ್ತಿ ನೀಡಿದ ದೂರಿನನ್ವಯ ಇವರ ಮನೆಗೆ ತೆರಳಿದ ಮಹಿಳಾ ಸಂಘಟನೆಯ ಕಾರ್ಯಕರ್ತರು, ರೂಮಿನ ಬೀಗ ಒಡೆಸಿ ನೋಡಿದಾಗ ಕತ್ತಲ ಕೋಣೆಯಲ್ಲಿ ಬೆತ್ತಲಾಗಿ ಮಲಗಿದ್ದ ಮಹಿಳೆ ಕಾಣಿಸಿದ್ದಾಳೆ.

ಈಗಾಗಲೇ ಯುವತಿಯನ್ನು ವೈದ್ಯಕೀಯ ತಪಾಸಣೆಗೆಂದು ಕರೆದೊಯ್ಯಲಾಗಿದ್ದು, ಮೊದಲೇ ಮಾನಸಿಕವಾಗಿ ಅಸ್ವಸ್ಥರಾಗಿದ್ದ ಇವರು, ಇದೀಗ ಸುದೀರ್ಘ ಇಪ್ಪತ್ತು ವರ್ಷಗಳ ಒಂಟಿತನದಿಂದಾಗಿ ಮತ್ತಷ್ಟು ಖಿನ್ನರಾಗಿದ್ದಾರೆ. ಮಾನಸಿಕ ತಜ್ಞರ ಬಳಿಯೂ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಸ್ವಂತ ಸಹೋದರಿಗೆ ಈ ಪರಿ ಅಮಾನವೀಯ ಶಿಕ್ಷೆ ನೀಡಿದ ಸಹೋದರನ ಭಾರತೀಯ ದಂಡಸಂಹಿತ (ಐಪಿಸಿ) 342 ರ ಮೇರೆಗೆ ನ್ಯಾಯಬಾಹಿರವಾಗಿ ವ್ಯಕ್ತಿಯನ್ನು ಬಂಧಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A memtally ubnormal girl in North Goa's small village had locked in a dark room for 20 years bu her own brother. Women right organistation rescued her now. Complaint registered on her brother.
Please Wait while comments are loading...