ಗೋ ಹತ್ಯೆ ನಿಷೇಧ: ಹೈಕೋರ್ಟ್ ಮೊರೆ ಹೋದ ಗೋವಾ ಮಾಂಸ ವ್ಯಾಪಾರಿಗಳು
ಪಣಜಿ, ಜೂನ್ 15: ಕೇಂದ್ರ ಸರಕಾರದ ಜಾನುವಾರು ಮಾರಾಟ ಪ್ರತಿಬಂಧಕ ಕಾಯ್ದೆಯನ್ನು ಪ್ರಶ್ನಿಸಿ ಗೋವಾದ ಮಾಂಸ ವ್ಯಾಪಾರಿಗಳು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ವ್ಯಾಪಾರಿಗಳ ಅರ್ಜಿಯನ್ನು ಪುರಸ್ಕರಿಸಿದ ಬಾಂಬೆ ಹೈ ಕೋರ್ಟ್ ಗೋವಾ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಕ್ಕೆ ಈ ಕುರಿತು ನೊಟೀಸ್ ಜಾರಿ ಮಾಡಿದೆ. .

ಹೈಕೋರ್ಟಿಗೆ ಸಲ್ಲಿಸಿದ ಅರ್ಜಿಯಲ್ಲಿ ಗೋವಾ ವ್ಯಾಪಾರಿಗಳು ಕೇಂದ್ರ ಸರಕಾರದ ಹೊಸ ಸುತ್ತೋಲೆ ಸಂವಿಧಾನದಲ್ಲಿ ನೀಡಿದ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಮತ್ತು ಸುತ್ತೋಲೆಯ 22ನೇ ನಿಯಮದಲ್ಲಿ ಖರೀದಿಸಿದ ಪ್ರಾಣಿಯನ್ನು ಧಾರ್ಮಿಕ ಕಾರಣಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಹೇಳಿದ್ದುಇದನ್ನೂ ಅರ್ಜಿದಾರರು ಪ್ರಶ್ನಿಸಿದ್ದಾರೆ.











Click it and Unblock the Notifications