ಗೋವಾದಲ್ಲಿ ಬಿಜೆಪಿ ಬಂದ್ರೆ ಮುಖ್ಯಮಂತ್ರಿ ಯಾರು? ಪರಿಕ್ಕರ್ ನಡೆ ನಿಗೂಢ

Subscribe to Oneindia Kannada

ಪಣಜಿ, ಜನವರಿ 27: ಗೋವಾದಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ ಮನೋಹರ್ ಪರಿಕ್ಕರ್ ಮುಂದಿನ ನಡೆ ಏನು? ಹೀಗೊಂದು ಚರ್ಚೆ ವಿಧಾನಸಭಾ ಚುನಾವಣೆ ಎದುರಿಸಲಿರುವ ಗೋವಾದಲ್ಲಿ ಎದ್ದಿದೆ.

ಹಲವು ಬಿಜೆಪಿ ನಾಯಕರೂ ಪರಿಕ್ಕರ್ ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂಬ ಅರ್ಥದಲ್ಲೆ ಮಾತನಾಡಿರುವುದು ಹಲವು ಅನುಮಾನಗಳನ್ನು ಹುಟ್ಟಿಸಿದೆ.ಆದರೆ ಪ್ರಧಾನಿ ಮಂತ್ರಿ ಕಾರ್ಯಾಲಯದ ಮಾಹಿತಿಗಳ ಪ್ರಕಾರ ರಕ್ಷಣಾ ಮಂತ್ರಿ ಹುದ್ದೆಯಿಂದ ಪರಿಕ್ಕರ್ ರನ್ನು ಬಿಟ್ಟು ಕೊಡಲು ನರೇಂದ್ರ ಮೋದಿಗೆ ಮನಸಿಲ್ಲ.[ಪಂಚ ರಾಜ್ಯಗಳ ಚುನಾವಣೆ: ಫಲಿತಾಂಶ ನಿರ್ಧರಿಸಲಿರುವ ಅಂಶಗಳಿವು]

ಈ ಬಗ್ಗೆ ಪರಿಕ್ಕರ್ ಮಾತ್ರ ಮೌನವಾಗಿರುವು ಮತ್ತಷ್ಟು ಗೊಂದಲ ಮೂಡಿಸಿದೆ. ಈ ಬಗ್ಗೆ ಅವರನ್ನೇ ಕೇಳಿದರೆ 'ಜನರಿಗೆ ಅವರದ್ದೇ ಆದ ಆಯ್ಕೆಗಳಿವೆ, ಎಂದಷ್ಟೇ ಹೇಳಿ ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದಾರೆ. "ಜನರಿಗೆ ನಾನು ಏನು ಎಂಬುದು ಗೊತ್ತಿದೆ. ಮುಖ್ಯಮಂತ್ರಿ ವಿಚಾರ ಚರ್ಚೆ ಆಗುವುದೇನಿದ್ದರೂ ಚುನಾವಣೆ ನಂತರ ಮಾತ್ರ," ಎಂದಷ್ಟೆ ಹೇಳಿ ಮತ್ತಷ್ಟು ಅನುಮಾನ ಹುಟ್ಟಿಸಿದ್ದಾರೆ.

Goa elections: Parrikar keeps everyone guessing as BJP faces multi - cornered contest

ಕಳೆದ ಎರಡು ವರ್ಷಗಳಿಂದ ದೆಹಲಿ ರಾಜಖಾರಣಕ್ಕೆ ಶಿಫ್ಟ್ ಆದರೂ ಪರಿಕ್ಕರ್ ರಾಜ್ಯದ ಜನತೆ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ರಾಜ್ಯಕ್ಕೆ ಬೇಕಾದ ಪ್ರಮುಖ ಅಭಿವೃದ್ಧಿ ಕೆಲಸಗಳನ್ನೂ ಮಾಡಿದ್ದಾರೆ. ಹೀಗಾಗಿ ಅವರು ಮುಖ್ಯಮಂತ್ರಿಯಾದರೆ ಉತ್ತಮ ಎಂಬ ಅಭಿಪ್ರಾಯ ಹಲವರಲ್ಲಿದೆ.[ಸಮೀಕ್ಷೆ: ಉತ್ತರಾಖಂಡ ಬಿಜೆಪಿಗೆ, ಉಪ್ರ, ಪಂಜಾಬ್, ಗೋವಾ ಅತಂತ್ರ]

ಆದರೆ ಇಲ್ಲಿವರೆಗೆ ಬಿಜೆಪಿ ಮಾತ್ರ ಎಲ್ಲೂ ಪರಿಕ್ಕರ್ ಅವರನ್ನು ಗೋವಾ ಮುಖ್ಯಮಂತ್ರಿಯಾಗಿ ಬಿಂಬಿಸಿಲ್ಲ. 'ಪರಿಕ್ಕರ್ ಪಕ್ಷದ ಸ್ಟಾರ್ ಪ್ರಚಾರಕರು ಅದಕ್ಕಿಂತ ಹೆಚ್ಚಾಗಿ ರಣತಂತ್ರಗಾರರು. ಪಕ್ಷ ಅಧಿಕಾರಕ್ಕೆ ಬಂದರೆ ಪರಿಕ್ಕರ್ ಪ್ರಮುಖ ಪಾತ್ರ ವಹಿಸಲಿದ್ದಾರೆ," ಎಂದಷ್ಟೆ ಬಿಜೆಪಿ ಮೂಲಗಳು ಹೇಳುತ್ತವೆ.

ಇವೆಲ್ಲದರ ಮಧ್ಯೆ ಲಕ್ಷ್ಮೀಕಾಂತ್ ಪರ್ಸೇಕರ್ ಮೇಲೆ ಗೋವಾ ಬಿಜೆಪಿಯಲ್ಲಿ ಅಸಮಧಾನವಿದೆ. ಪರ್ಸೇಕರ್ ರಾಜ್ಯ ಬಿಜೆಪಿ ಪಕ್ಷವನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಇತ್ತೀಚೆಗೆ ಪರ್ಸೇಕರ್ ನಾಯಕತ್ವಕ್ಕೆ ಬೇಸತ್ತು ಎಂಜಿಪಿ ಪಕ್ಷ ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡಿತ್ತು. ಸದ್ಯ ಇದೇ ಎಂಜಿಪಿ ಪಕ್ಷ ಶಿವಸೇನೆ ಜತೆ ಸ್ಪರ್ಧೆಗಿಳಿದಿದ್ದು ಇದೇ ಬಿಜೆಪಿಗೆ ಸ್ಪರ್ಧೆ ನೀಡುತ್ತಿದೆ.

ಹೀಗಾಗಿ ಪರಿಕ್ಕರ್ ರಾಜ್ಯ ರಾಜಕಾರಣಕ್ಕೆ ಹಿಂದುರುಗಿ ಬರಬೇಕು. ಮತ್ತೆ ಪಕ್ಷ ತನ್ನ ಹಳೆಯ ದಿನಗಳಿಗೆ ಮರಳಬೇಕು ಎಂಬುದು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಒತ್ತಾಸೆಯಾಗಿದೆ. ಆದರೆ ಪರಿಕ್ಕರ್ ಮಾತ್ರ ಇದೆಲ್ಲಾ ಹಳೆ ಕಥೆ. ಫಲಿತಾಂಶಕ್ಕಾಗಿ ಕಾಯಿರಿ ಎನ್ನುತ್ತಿದ್ದಾರೆ.

ಒಟ್ಟಾರೆ ಸದ್ಯಕ್ಕೆ ಪರಿಕ್ಕರ್ ನಡೆ ನಿಗೂಢವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Manohar Parrikar continues to keep everyone guessing about what role he would play if the BJP goes on to win the Goa Assembly Elections 2017.
Please Wait while comments are loading...