ವಾಟ್ಸಪ್ ಗ್ರೂಪಿನಲ್ಲಿ ಆ ಚಿತ್ರ ಕಳಿಸಿದ ಕಾಂಗ್ರೆಸ್ಸಿಗ
ಪಣಜಿ, ಜುಲೈ 09: ಗೋವಾ ಕಾಂಗ್ರೆಸ್ ನಾಯಕರೊಬ್ಬರು, ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಅಶ್ಲೀಲ ಚಿತ್ರ ಪೋಸ್ಟ್ ಮಾಡಿದ್ದಾರೆ.
ಗೋವಾ ಕಾಂಗ್ರೆಸ್ ಕಮಿಟಿಯಿಂದ ವಾಟ್ಸಾಪ್ ಗ್ರೂಪ್ ನಲ್ಲಿ ಈ ಪ್ರಮಾದ ಜರುಗಿದ್ದು,ಚಿತ್ರವನ್ನು ಹಂಚಿಕೊಂಡ ಸದಸ್ಯನನ್ನು ಗ್ರೂಪಿನಿಂದ ತೆಗೆದು ಹಾಕಲಾಗಿದೆ.
ಪತ್ರಕರ್ತರ ಸಂಪರ್ಕಕ್ಕಾಗಿ ರಚಿಸಲಾಗಿದ್ದ ಗ್ರೂಪ್ ನಲ್ಲಿ ಅಶ್ಲೀಲ ಫೋಟೋ ರವಾನೆಯಾಗಿದೆ. ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಪಕ್ಷದ ವಕ್ತಾರ ಸುನಿಲ್ ಕವತಾಂಕರ್ ಪ್ರತಿಕ್ರಿಯಿಸಿದ್ದಾರೆ. ಆದರೆ, ಕಾಂಗ್ರೆಸ್ ಸದಸ್ಯರ ಹೆಸರು ವಿವರಗಳನ್ನು ಬಹಿರಂಗಪಡಿಸಿಲ್ಲ.

ಗೋವಾ ಕಾಂಗ್ರೆಸ್ ಕಮಿಟಿಯಿಂದ ವಾಟ್ಸಪ್ ಗ್ರೂಪ್ ರಚಿಸಲಾಗಿತ್ತು. ಈ ಗ್ರೂಪಿನಲ್ಲಿ ಪಕ್ಷದ ಹಿರಿಯ ನಾಯಕರು, ಪತ್ರಕರ್ತರು ಇದ್ದಾರೆ. ಪಕ್ಷದ ಚಟುವಟಿಕೆಗಳ ಬಗ್ಗೆ ಮಾಧ್ಯಮಗಳಿಗೆ ಸುಲಭವಾಗಿ ವಿಷಯ ಮುಟ್ಟಿಸಲು ಈ ಗ್ರೂಪ್ ಬಳಸಲಾಗುತ್ತಿತ್ತು.
ಇಂಥ ಗ್ರೂಪಿಗೆ ಗೋವಾ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿಯೊಬ್ಬರು ಅಶ್ಲೀಲ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಕೂಡಲೇ ಅಶ್ಲೀಲ ಫೋಟೋ ಪೋಸ್ಟ್ ಮಾಡಿದ್ದ ನಾಯಕನನ್ನು ಗ್ರೂಪ್ ನಿಂದ ತೆಗೆಯಲಾಗಿದೆ.
ಇತ್ತೀಚೆಗೆಬೆಳಗಾವಿ ನಗರದ ಮೀಡಿಯಾ ಫೋರ್ಸ್ ಎಂಬ ವಾಟ್ಸಪ್ ಗ್ರೂಪಿಗೆ ಬಿಜೆಪಿ ಎಂಎಲ್‌ಸಿ ಮಹಂತೇಶ ಕವಟಗಿ ಮಠ ಅವರು ಅಶ್ಲೀಲ ಫೋಟೋಗಳನ್ನು ಹಂಚಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)












Click it and Unblock the Notifications