Get Updates
Get notified of breaking news, exclusive insights, and must-see stories!

ನಿಥಾರಿ ಸರಣಿ ಹಂತಕ, ನರಭಕ್ಷಕನಿಗೆ ಡೆತ್ ವಾರೆಂಟ್

ಗಾಜಿಯಾಬಾದ್, ಸೆ.4: ನಿಥಾರಿ ಮಕ್ಕಳ ಸರಣಿ ಹಂತಕ ಸುರೇಂದ್ರ ಕೋಲಿಗೆ ಗಾಜಿಯಾಬಾದ್ ಸೆಷನ್ಸ್ ಕೋರ್ಟ್‌ಗೆ ಡೆತ್ ವಾರೆಂಟ್ ಜಾರಿ ಮಾಡಿದೆ. 2005ರಲ್ಲಿ 14 ವರ್ಷದ ಬಾಲಕಿ ರಿಂಪಾ ಹಲ್ದಾರ್‌ಳ ಹತ್ಯೆ ಮಾಡಿದ್ದ ಹಿನ್ನೆಲೆಯಲ್ಲಿ ಸುರೇಂದ್ರ ಕೋಲಿಗೆ ಡೆತ್ ವಾರೆಂಟ್ ಜಾರಿಯಾಗಿದ್ದು, ಸೆಪ್ಟೆಂಬರ್ 12ರಂದು ಮೀರತ್ ಜೈಲಿನಲ್ಲಿ ಗಲ್ಲಿಗೇರಿಸುವ ಸಾಧ್ಯತೆ ಇದೆ.

ಸಿಬಿಐ ಮೂಲಗಳ ಪ್ರಕಾರ ಈ ಹಿಂದೆ ರಿಂಪಾ ಹಲ್ದಾರ್‌ಳ ಹತ್ಯೆ ಪ್ರಕರಣದಲ್ಲಿ ಕೆಲ ನ್ಯಾಯಾಲಯವು ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಸಹ ಖಾಯಂಗೊಳಿಸಿತ್ತು. ಅಲ್ಲದೆ ಆರು ವರ್ಷಗಳ ಹಿಂದೆ ಸುರೇಂದ್ರ ಕೋಲಿಯಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಬಾಲಕಿಯರ ಪೈಕಿ ರಿಂಪಾ ಹಲ್ದಾರ್‌ಳ ಕಗ್ಗೊಲೆ ಪ್ರಕರಣವು ಅತ್ಯಂತ ಭೀಭತ್ಸ ಹಾಗೂ ಬರ್ಬರವಾಗಿದ್ದು, ಆರೋಪಿಗೆ ಮರಣದಂಡನೆಯೇ ಸೂಕ್ತವೆಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.

ಉತ್ತರಪ್ರದೇಶ ಸರ್ಕಾರಕ್ಕೆ ಡೆತ್ ವಾರೆಂಟ್ ಜೊತೆ ಸೂಚನೆ ನೀಡಿರುವ ನ್ಯಾಯಾಲಯ, ಗಾಜಿಯಾಬಾದಿನ ಜೈಲಿನಲ್ಲಿರುವ 42 ವರ್ಷ ವಯಸ್ಸಿನ ಸುರೇಂದರ್ ಕೋಲಿ ಅವರನ್ನು ಗಲ್ಲಿಗೇರಿಸಲು ಬೇಕಾದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದೆ.

Court issues death warrant against Surinder Koli in Nithari case

ಸುರೇಂದ್ರ ಕೋಲಿಗೆ ಐದು ಪ್ರಕರಣಗಳಲ್ಲಿ ಗಲ್ಲುಶಿಕ್ಷೆ ನೀಡಲಾಗಿದೆ. ಕೋಲಿ ವಿರುದ್ಧ ಇನ್ನು 16 ಪ್ರಕರಣಗಳು ದಾಖಲಾಗಿದ್ದು, ಮಿಕ್ಕ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಎಲ್ಲಾ ಪ್ರಕರಣಗಳಲ್ಲೂ ಇಬ್ಬರ ಮೇಲೆ ಸಿಬಿಐ ಚಾರ್ಜ್ ಶೀಟ್ ದಾಖಲಿಸಿದೆ. ಇಬ್ಬರೂ ಸೈಕೋ ಕಿಲ್ಲರ್ ಗಳಾಗಿದ್ದು, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅವರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡುತ್ತಿದ್ದರು. ಇದೇ ಅಲ್ಲದೆ ಮೃತ ಬಾಲಕಿಯರ ದೇಹವನ್ನು ಭಕ್ಷಿಸುವಷ್ಟು ಇತ ಕ್ರೂರಿಯಾಗಿದ್ದರು.

ದೆಹಲಿಯ ಹೊರವಲಯದಲ್ಲಿರುವ ನೋಯ್ಡಾ ಪರಿಸರದ ನಿವಾಸಿಯಾಗಿದ್ದ ರಿಂಪಾ 2005ರಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದಳು. 2006ರಲ್ಲಿ ಪಂಧೇರ್‌ನ ನಿವಾಸದ ಹಿಂದಿರುವ ಚರಂಡಿಯಲ್ಲಿ ಹಲವಾರು ಮಾನವ ಅವಶೇಷಗಳು ಪತ್ತೆಯಾದ ನಂತರ ಸರಣಿ ಕಗ್ಗೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ರಿಂಪಾ ಹತ್ಯೆ ಪ್ರಕರಣದಲ್ಲಿ ಸುರಿಂದರ್ ಕೋಲಿ ಸಹಪಾತಕಿ ಮೊನಿಂದರ್ ಸಿಂಗ್ ಪಂಧೇರ್ ಗೆ ಅಲಹಾಬಾದ್ ಹೈ ಕೋರ್ಟಿನಿಂದ ಜೀವದಾನ ಸಿಕ್ಕಿದೆ.[ ನರಭಕ್ಷಕ ಮಣಿಂದರ್ , ಸುರಿಂದರ್ ಗೆ ಮರಣದಂಡನೆ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+