ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಪಂಚದ ಎಲ್ಲಿಂದಲಾದರೂ ಸರಿ, ಔಷಧ ವ್ಯವಸ್ಥೆ ಮಾಡಿ; ಮೋದಿ ಕಟ್ಟುನಿಟ್ಟಿನ ಸೂಚನೆ

|
Google Oneindia Kannada News

ನವದೆಹಲಿ, ಮೇ 27: ಕೊರೊನಾ ಸೋಂಕಿನಿಂದ ಚೇತರಿಕೆಯಾಗುತ್ತಿರುವವರಲ್ಲಿ ಕಂಡುಬರುತ್ತಿರುವ ಬ್ಲ್ಯಾಕ್ ಫಂಗಸ್- ಮ್ಯೂಕರ್ ಮೈಕೋಸಿಸ್ ಪ್ರಕರಣಗಳು ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿವೆ. ಹಲವು ಮಂದಿ ಈ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ ಕೂಡ. ಕೆಲವು ರಾಜ್ಯಗಳಲ್ಲಿ ಪ್ರಕರಣಗಳು ಏರಿಕೆಯಾಗುತ್ತಿದ್ದು, ಚಿಕಿತ್ಸೆ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.

ಆದರೆ ಮ್ಯೂಕರ್ ಮೈಕೋಸಿಸ್‌ಗೆ ಬಳಕೆ ಮಾಡಲಾಗುವ ಆಂಫೊಟೆರಿಸಿನ್ ಬಿ ಔಷಧಕ್ಕೆ ಈಗ ಅಭಾವ ಸೃಷ್ಟಿಯಾಗಿದೆ. ಪ್ರಕರಣಗಳ ಏರಿಕೆ ನಡುವೆ ಔಷಧಗಳಿಗೆ ಕೊರತೆ ಉಂಟಾಗಿರುವುದು ಸೋಂಕಿನ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬ ಆತಂಕ ಸೃಷ್ಟಿಯಾಗಿದೆ. ಈ ನಡುವೆ ಪ್ರಧಾನಿ ಮೋದಿ, ಈ ಆಂಫೊಟೆರಿಸಿನ್ ಔಷಧಗಳನ್ನು ಹೇಗಾದರೂ ಪೂರೈಕೆ ಮಾಡಲೇಬೇಕು ಎಂದು ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ. ಮುಂದೆ ಓದಿ...

"ಎಲ್ಲೆಲ್ಲಿ ಔಷಧಿ ಲಭ್ಯವಿದೆಯೋ ಅಲ್ಲಿಂದೆಲ್ಲ ತರಿಸಿಕೊಳ್ಳಿ"

ದೇಶದಲ್ಲಿ ಬ್ಲ್ಯಾಕ್‌ ಫಂಗಸ್ ಪ್ರಕರಣಗಳು ಹೆಚ್ಚುತ್ತಿದ್ದು, ಈ ಸೋಂಕಿಗೆ ನೀಡಲಾಗುವ ಔಷಧದ ಕೊರತೆ ಉಂಟಾಗಿದೆ. ಇದು ಮುಂದೆ ಇನ್ನಷ್ಟು ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಪಂಚದ ಎಲ್ಲಿಂದಲಾದರೂ ಸರಿ, ಈ ಔಷಧ ವ್ಯವಸ್ಥೆ ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಪ್ರಪಂಚದಲ್ಲಿ ಈ ಔಷಧ ಎಲ್ಲೆಲ್ಲಿ ಲಭ್ಯವಿದೆಯೋ ಅಲ್ಲಿಂದ ಔಷಧಿ ತರಿಸಿಕೊಳ್ಳಿ ಎಂದಿದ್ದಾರೆ.

 ಏಕಾಏಕಿ ಬೇಡಿಕೆ ಹೆಚ್ಚಿದ್ದರಿಂದ ಲಸಿಕೆಗೆ ಅಭಾವ

ಏಕಾಏಕಿ ಬೇಡಿಕೆ ಹೆಚ್ಚಿದ್ದರಿಂದ ಲಸಿಕೆಗೆ ಅಭಾವ

ಕೇಂದ್ರ ಸರ್ಕಾರ ಸಾಧ್ಯವಾಗುವುದರ ಮಟ್ಟಿಗೆ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಲಿಪೊಸೊಮಾಲ್ ಆಂಫೊಟೆರಿಸಿನ್ ಬಿ ಲಸಿಕೆಗಳನ್ನು ಪೂರೈಸುತ್ತಿದೆ. ಹೀಗಾಗ್ಯೂ ಲಸಿಕೆಗೆ ಏಕಾಏಕಿ ಬೇಡಿಕೆ ಹೆಚ್ಚಾದ್ದರಿಂದ ಅಭಾವ ಉಂಟಾಗಿದೆ. ಲಸಿಕೆ ತಯಾರಿಗೆ ದೇಶದ ಐದು ಸಂಸ್ಥೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಸದ್ಯಕ್ಕೆ ಕೇವಲ ಒಂದು ಸಂಸ್ಥೆ ಈ ಔಷಧ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಲಸಿಕೆಗಳ ಪೂರೈಕೆ ಸೋಮವಾರದಿಂದ ಆರಂಭಗೊಳ್ಳಲಿದೆ. ಇದರ ಬೆಲೆ 1200 ರೂ ಆಗಿರಲಿದೆ. ಸದ್ಯಕ್ಕೆ ಈ ಲಸಿಕೆ ಬೆಲೆ 7000 ರೂ ಇದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.

 ದೇಶದಲ್ಲಿ ಒಟ್ಟು 11,717 ಬ್ಲ್ಯಾಕ್ ಫಂಗಸ್ ಪ್ರಕರಣಗಳು

ದೇಶದಲ್ಲಿ ಒಟ್ಟು 11,717 ಬ್ಲ್ಯಾಕ್ ಫಂಗಸ್ ಪ್ರಕರಣಗಳು

ದೇಶದಲ್ಲಿ ಒಟ್ಟು 11,717 ಕಪ್ಪು ಶಿಲೀಂಧ್ರ ಪ್ರಕರಣಗಳು ಪತ್ತೆಯಾಗಿದ್ದು, ಗುಜರಾತಿನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದುಬಂದಿದೆ. ಗುಜರಾತ್, ಆಂಧ್ರ ಪ್ರದೇಶ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ಇದುವರೆಗೆ 2770 ಕಪ್ಪು ಶಿಲೀಂಧ್ರ ಪ್ರಕರಣಗಳು ಪತ್ತೆಯಾಗಿವೆ. ಗುಜರಾತ್‌ನಲ್ಲಿ 2859, ಆಂಧ್ರಪ್ರದೇಶದಲ್ಲಿ 768 ಪ್ರಕರಣಗಳಿರುವುದಾಗಿ ತಿಳಿದುಬಂದಿದೆ.

 ಹೆಚ್ಚುವರಿ ಆಫೋಟೆರಿಸಿನ್ 29,250 ವಯಲ್ಸ್ ಹಂಚಿಕೆ

ಹೆಚ್ಚುವರಿ ಆಫೋಟೆರಿಸಿನ್ 29,250 ವಯಲ್ಸ್ ಹಂಚಿಕೆ

ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ಚಿಕಿತ್ಸೆಗೆ ಬಳಸಲಾಗುವ ಆಂಫೋಟೆರಿಸಿನ್ ಬಿ ಔಷಧದ 29,250 ವಯಲ್ಸ್ ಗಳನ್ನು ಹೆಚ್ಚುವರಿಯಾಗಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

English summary
Prime Minister Narendra Modi has instructed all concerned officials to arrange the drug for black fungus from anywhere in the world on a war footing,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X