ಜೈಂಟ್ ಕಿಲ್ಲರ್ ಫರ್ನಾಂಡಿಸ್ ಬಗ್ಗೆ 10 ಅಚ್ಚರಿಯ ಸಂಗತಿ
ಹುಟ್ಟು ಹೋರಾಟಗಾರರಾಗಿ ಜನಿಸಿದ ಜಾರ್ಜ್ ಫರ್ನಾಂಡಿಸ್ ತಮ್ಮ ಬದುಕನ್ನು ಸಾಮಾಜಿಕ ಸಮಾನತೆ ಮತ್ತು ದೌರ್ಜನ್ಯಕ್ಕೊಳಗಾದವರ ದನಿಯಾಗುವ ತುಡಿತದಲ್ಲೇ ಕಳೆದರು.
ದೇಶದ ಆದರ್ಶ ರಾಜಕಾರಣಿಗಳ ಸಾಲಿನಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುವ ಫರ್ನಾಂಡಿಸ್ ಬದುಕು ಹಲವು ಅಚ್ಚರಿಗಳಿಂದ ಕೂಡಿತ್ತು. ಪ್ರವಾಹಕ್ಕೆ ಅಭಿಮುಖವಾಗಿ ಈಜಿ, ದಡಸೇರುವ ಮನೋಬಲವೇ ಮುಂದೊಮ್ಮೆ ಅವರನ್ನು ದೇಶದ ಅತ್ಯಂತ ಯಶಸ್ವೀ ರಕ್ಷಣಾ ಸಚಿವರನ್ನಾಗಿ ಮಾಡಿತ್ತು.
ಫರ್ನಾಂಡಿಸ್ ಅವರು ತಮ್ಮ 88 ನೇ ವಯಸ್ಸಿನಲ್ಲಿ ಜ.29 ರಂದು ನವದೆಹಲಿಯಲ್ಲಿ ಕೊನೆಯುಸಿರೆಳೆದರು. ಹಲವು ವರ್ಷಗಳಿಂದ ಅಲ್ಜಮೈರ್ ಕಾಯಿಲೆಗೆ ತುತ್ತಾಗಿ ಯಾರನ್ನೂ ಗುರುತಿಸಲಾಗದ ಸ್ಥಿತಿಯಲ್ಲಿದ್ದ ಅವರು ಇಂದಿಲ್ಲ. ಆದರೆ ಅವರ ಸಾವು ರಾಜಕೀಯ, ಸಾಮಾಜಿಕ ವಲಯದಲ್ಲಿ ಸೃಷ್ಟಿಸಿದ ನಿರ್ವಾತ ತುಂಬುವುದಕ್ಕೆ ದೀರ್ಘ ಕಾಲವೇ ಹಿಡಿಯಬಹುದು.
ಫರ್ನಾಂಡಿಸ್ ಬದುಕಿನ 10 ಅಚ್ಚರಿಯ ಸಂಗತಿ ಇಲ್ಲಿದೆ.

ಜೈಂಟ್ ಕಿಲ್ಲರ್
1. ಮನೆಗೆ ಹಿರಿಮಗನಾಗಿ ಜನಿಸಿದ ಜಾರ್ಜ್ ಫರ್ನಾಂಡಿಸ್, ಶಾಲೆಯನ್ನು ಅರ್ಧಕ್ಕೇ ಬಿಟ್ಟು ಕ್ರೈಸ್ತ ಗುರುವಾಗುತ್ತೇನೆಂದು ಮನೆಬಿಟ್ಟು ಹೋಗಿದ್ದರು!
2. 1967 ರಲ್ಲಿ ಮುಂಬೈ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ನ ಎಸ್ ಕೆ ಪಾಟೀಲ್ ಅವರನ್ನು ಸೋಲಿಸಿದ ನಂತರ ಅವರನ್ನು 'ಜೈಂಟ್ ಕಿಲ್ಲರ್' ಎಂದು ಕರೆಯಲಾಗುತ್ತಿತ್ತು.

ಎರಡು ವರ್ಷ ಮಾರುವೇಷದಲ್ಲಿದ್ದ ಫರ್ನಾಂಡಿಸ್
3. 1974 ರಲ್ಲಿ ಅವರು ಇಪ್ಪತ್ತು ದಿನಗಳ ಕಾಲ ನಡೆಸಿದ ರೈಲ್ವೇ ಮುಷ್ಕರ ಇಡೀ ದೇಶವನ್ನೂ ನಡುಗಿಸಿತ್ತು. ಜನಜೀವನ ಅಸ್ತವ್ಯವಸ್ಥಗೊಳಿಸಿತ್ತು.
4. 1975-1977 ರವರೆಗೆ ಸಿಕ್ಖ್ ವ್ಯಕ್ತಿಯಂತೆಯೇ ಗಡ್ಡ ಬೆಳೆಸಿಕೊಂಡು, ಪೇಟಾ ಧರಿಸಿ ಮಾರುವೇಷದಲ್ಲಿದ್ದರು ಫರ್ನಾಂಡಿಸ್. ನಿಜವಾದ ಗುರುತು ಸಿಕ್ಕರೆ ಜೈಲು ಸೇರಬೇಕಾಗುತ್ತದೆ, ಆಗ ಹೋರಾಟ ಮಾಡುವುದಕ್ಕಾಗುವುದಿಲ್ಲ ಎಂಬುದು ಅವರ ಯೋಚನೆಯಾಗಿತ್ತು.

ಡೈನಮೈಟ್ ಕದ್ದು ಸ್ಫೋಟಿಸುತ್ತಿದ್ದ ಜಾರ್ಜ್!
5. ಇಂದಿರಾ ಗಾಂಧಿ ಅವರು ಭಾಷಣ ಮಾಡುತ್ತಿದ್ದ ಜಾಗಗಳ ಸುತ್ತಮುತ್ತ ಡೈನಮೈಟ್ ಗಳನ್ನು ಕದ್ದು, ಸ್ಫೋಟಿಸಿ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡುತ್ತಿದ್ದರು. ಈ ಸಂದರ್ಭದಲ್ಲಿ ಹಲವು ಬಾರಿ ಜೈಲು ವಾಸ ಅನುಭವಿಸಿದ್ದರು.
6. 1977 ರಲ್ಲಿ ಬಿಹಾರದ ಮುಜಾಫರ್ ನಗರ ಕ್ಷೇತ್ರದಿಂದ ಜೈಲಿನಿಂದ ಸ್ಪರ್ಧಿಸಿದ್ದರು.

ಬಹುರಾಷ್ಟ್ರೀಯ ಕಂಪನಿಗಳಿಗೆ ಬಿಸಿ!
7. ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತ ಹೇರಿದ್ದ ಕೆಲವು ನಿಯಮಗಳನ್ನು ಪಾಲಿಸಲು ಒಲ್ಲೆ ಎಂದ ಕೋಕಾಕೋಲಾ ಮತ್ತು ಐಬಿಎಂ ಗೆ ಬಿಸಿ ಮುಟ್ಟಿಸಿದ್ದರು.
8. ಮಂಗಳೂರಿನಿಂದ-ಮುಂಬೈಗೆ ಸಂಪರ್ಕ ಕಲ್ಪಿಸುವ ಕೊಂಕಣ ರೈಲ್ವೇ ಯೋಜನೆಗೆ ನಾಂದಿ ಹಾಡಿದರು.

ತಾವೇ ಅಡುಗೆ ಮಾಡುತ್ತಿದ್ದರು
9. 1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಸೈನಿಕರನ್ನು ಹುರಿದುಂಬಿಸಿ, ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡು ಭಾರತ ಗೆಲ್ಲುವಂತೆ ಮಾಡಿದರು.
10. ಕೇಂದ್ರ ಸಚಿವರಾದ ಮೇಲೂ ತಮ್ಮ ಬಟ್ಟೆಯನ್ನು ತಾವೇ ತೊಳೆದುಕೊಂಡು, ತಮ್ಮ ಅಡುಗೆಯನ್ನು ತಾವೇ ಮಾಡಿಕೊಂಡು ಸರಳತೆಗೆ ಹೆಸರಾಗಿದ್ದರು ಫರ್ನಾಂಡಿಸ್.
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications