Rajasthan Election: ರಾಜಸ್ಥಾನ ಜನತೆಗೆ ಕಾಂಗ್ರೆಸ್‌ನಿಂದ ಇನ್ನೂ 5 ಗ್ಯಾರಂಟಿ ಘೋಷಣೆ
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶುಕ್ರವಾರ ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ಘೋಷಿಸಿದರು, ಇದರಲ್ಲಿ ಹಳೆಯ ಪಿಂಚಣಿ ಯೋಜನೆ ಮತ್ತು ಹಸುವಿನ ಸಗಣಿ ಪ್ರತಿ ಕೆಜಿಗೆ ₹ 2 ಕ್ಕೆ ಖರೀದಿಸುವುದು, ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ನೀಡುವುದು ಮತ್ತು ಯಾವುದೇ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಉಂಟಾದ ನಷ್ಟಕ್ಕೆ ₹ 15 ಲಕ್ಷ ವಿಮೆ ರಕ್ಷಣೆ ನೀಡುವುದು ಸೇರಿದೆ.
ಗೆಹ್ಲೋಟ್ ಅವರು ತಮ್ಮ ಸರ್ಕಾರವು 1 ಕೋಟಿ ಮಹಿಳೆಯರಿಗೆ ಮೂರು ವರ್ಷಗಳವರೆಗೆ ಉಚಿತ ಇಂಟರ್ನೆಟ್ ಸೇವೆಯೊಂದಿಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡುವುದಾಗಿ ಹೇಳಿದರು.

ತಮ್ಮ ಭರವಸೆಗಳನ್ನು ಈಡೇರಿಸುವ ದಾಖಲೆಯನ್ನು ಎತ್ತಿ ಹಿಡಿದ ರಾಜಸ್ಥಾನ ಮುಖ್ಯಮಂತ್ರಿ, ರೈತರ ಸಾಲ ಮನ್ನಾ ಮಾಡುವ ಕುರಿತು ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಭರವಸೆಯನ್ನು ಸರಿಯಾದ ಸಮಯದಲ್ಲಿ ಈಡೇರಿಸಲಾಗಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು 'ನೀವು ನೀಡುವ ಭರವಸೆಗಳನ್ನು ಈಡೇರಿಸಿ' ಎಂದು ಹೇಳುತ್ತಾರೆ. ಕಳೆದ ಬಾರಿ, ರಾಹುಲ್ ಗಾಂಧಿ ಅವರು ಏಳು ದಿನಗಳಲ್ಲಿ (ರೈತರ) ಸಾಲಗಳನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು ಮತ್ತು ಭರವಸೆಯನ್ನು ಸರಿಯಾದ ಸಮಯದಲ್ಲಿ ಈಡೇರಿಸಲಾಗಿದೆ ಎಂದು ಅವರು ಜೈಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾಗೆ ಸಂಬಂಧಿಸಿದ ಆವರಣದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ್ದನ್ನು ಅಶೋಕ್ ಗೆಹ್ಲೋಟ್ ಖಂಡಿಸಿದ್ದಾರೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
"ನಾಯಿಗಳಿಗಿಂತಲೂ ಹೆಚ್ಚಾಗಿ ಇಡಿ ದೇಶದಲ್ಲಿ ಓಡಾಡುತ್ತಿದೆ ಎಂದು ಛತ್ತಿಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ. ಇದಕ್ಕಿಂತ ದೊಡ್ಡ ದೌರ್ಭಾಗ್ಯ ಇನ್ನೇನಿದೆ? ಅವರು ಬಹಳ ನೋವಿನಿಂದ ಈ ಹೇಳಿಕೆ ನೀಡಿರಬೇಕು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಗೆಹ್ಲೋಟ್ ಹೇಳಿದರು.
ಬಿಜೆಪಿ ವಿರುದ್ಧ ಸಾಕಷ್ಟು ದನಿಯೆತ್ತಿರುವುದರಿಂದ ಇಡಿ ಕಾಂಗ್ರೆಸ್ ನಾಯಕನನ್ನು ಗುರಿಯಾಗಿಸಿದೆ, ಏಜೆನ್ಸಿಗಳು ರಾಜಕೀಯ ಅಸ್ತ್ರವಾಗಿದ್ದೀರಿ. ಮೋದಿಯವರೇ, ನಿಮಗೆ ಅರ್ಥವಾಗುತ್ತಿಲ್ಲ, ನಿಮ್ಮ ಕೌಂಟ್‌ಡೌನ್ ಆರಂಭವಾಗಿದೆ ಎಂದು ಗೆಹ್ಲೋಟ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈಗಾಗಲೇ ರಾಜಸ್ಥಾನ ಜನತೆಗೆ ಎರಡು ಗ್ಯಾರಂಟಿ ಘೋಷಿಸಿದ್ದ ಕಾಂಗ್ರೆಸ್ ಈಗ ಅದರ ಜೊತೆ ಐದು ಗ್ಯಾರಂಟಿಗಳು ಸೇರಿಸಿದೆ. 1.05 ಕೋಟಿ ಕುಟುಂಬಗಳಿಗೆ ₹ 500 ಕ್ಕೆ ಅಡುಗೆ ಅನಿಲ ಸಿಲಿಂಡರ್‌ಗಳು ಮತ್ತು ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ವಾರ್ಷಿಕ ₹ 10,000 ಗೌರವಧನ ನೀಡುವುದಾಗಿ ಪ್ರಿಯಾಂಕಾ ಗಾಧಿ ವಾದ್ರಾ ಬುಧವಾರ ಜುಂಜುನು ಸಾರ್ವಜನಿಕ ರ್ಯಾಲಿಯಲ್ಲಿ ಘೋಷಿಸಿದ್ದಾರೆ.












Click it and Unblock the Notifications