ಚೆನ್ನೈ: ಅಮ್ಮಾ ಕ್ಯಾಂಟೀನ್ ನವೀಕರಣಕ್ಕೆ ಡಿಎಂಕೆ ಸರ್ಕಾರದಿಂದ 9 ಕೋಟಿ ರೂಪಾಯಿ ಮೀಸಲು

ಚೆನ್ನೈ, ಜುಲೈ. 04: ಅಮ್ಮಾ ಕ್ಯಾಂಟೀನ್‌ಗಳನ್ನು ನಿರಂತರವಾಗಿ ಮುಂದುವರಿಸುವ ಡಿಎಂಕೆಯ ಸಂಕಲ್ಪಕ್ಕೆ ಅನುಗುಣವಾಗಿ ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ವಲಯ ಮಟ್ಟದಲ್ಲಿ ನವೀಕರಣ ಕಾರ್ಯಕ್ಕಾಗಿ 9 ಕೋಟಿ ರೂಪಾಯಿ ಮೀಸಲಿಟ್ಟಿದೆ. ಕಳೆದ ವರ್ಷಕ್ಕಿಂತ ಹೆಚ್ಚುವರಿ 4.5 ಕೋಟಿ ರೂಪಾಯಿ ನೀಡಲಾಗಿದೆ. ಈ ಬಗ್ಗೆ ಉಪಮೇಯರ್ ಎಂ.ಮಗೇಶ್ ಕುಮಾರ್ ಕ್ಯಾಂಟೀನ್‌ಗಳ ಪರಿಶೀಲನೆ ವೇಳೆ ಮಾಹಿತಿ ನೀಡಿದ್ದಾರೆ.

ಅಮ್ಮಾ ಕ್ಯಾಂಟೀನ್‌ಗಳ ನಿರ್ವಹಣೆ ಬಗ್ಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಓ ಪನ್ನೀರಸೆಲ್ವಂ ಅವರು ಟೀಕೆ ಮಾಡಿದ್ದರು. ಕ್ಯಾಂಟೀನ್‌ಗಳು ಸಿಬ್ಬಂದಿ ಕೊರತೆ ಮತ್ತು ಸಂಗ್ರಹಣೆ ಮತ್ತು ಪೀಠೋಪಕರಣಗಳಂತಹ ಮೂಲ ಸೌಕರ್ಯಗಳ ಕೊರತೆಯಿಂದ ತತ್ತರಿಸುತ್ತಿವೆ ಎಂದು ಒಬ್ಬರು ನಾಯಕರು ಆರೋಪಿಸಿದ್ದರು.

Rs 9 crore for renovating Amma canteens

ಇದರ ಬೆನ್ನಲ್ಲೇ ಸೋಮವಾರ ಸೈದಾಪೇಟೆ ಮತ್ತು ಟಿ.ನಗರದ ಆರು ಅಮ್ಮಾ ಕ್ಯಾಂಟೀನ್‌ಗಳಲ್ಲಿ ದಿಢೀರ್‌ ಪರಿಶೀಲನೆ ನಡೆಸಿದ ಉಪಮೇಯರ್‌ ಎಂ.ಮಗೇಶ್ ಕುಮಾರ್, 2022ರ ಏಪ್ರಿಲ್‌ 1 ರಿಂದ 2023ರ ಮಾರ್ಚ್‌ 31ರ ವರೆಗೆ 5.3 ಕೋಟಿ ಜನರು ಕ್ಯಾಂಟೀನ್‌ಗಳ ಲಾಭ ಪಡೆದಿದ್ದು, 6.7ರಷ್ಟು ಮಾರಾಟವಾಗಿದೆ. ಈ ಅವಧಿಯಲ್ಲಿ ಕೋಟಿ ಇಡ್ಲಿಗಳು, 1.53 ಕೋಟಿ ವಿಧದ ಅನ್ನದ ಪ್ಯಾಕೆಟ್‌ಗಳು ಮತ್ತು 2.65 ಕೋಟಿ ಚಪ್ಪಾತಿಗಳು ಮಾರಾಟವಾಗಿವೆ ಎಂದಿದ್ದಾರೆ.

ನಿಗಮದ ಅಂಕಿಅಂಶಗಳ ಪ್ರಕಾರ, 2022-23 ರಲ್ಲಿ, ಕ್ಯಾಂಟೀನ್‌ಗಳಿಂದ ಕೇವಲ 15.8 ಕೋಟಿ ಆದಾಯವಿದ್ದರೆ, ವೆಚ್ಚವು ಸುಮಾರು 97.8 ಕೋಟಿ ರೂಪಾಯಿಯಾಗಿದೆ. "ನಷ್ಟದ ಹೊರತಾಗಿಯೂ, ಕ್ಯಾಂಟೀನ್‌ಗಳು ಬಡ ಜನರಿಗೆ ಸೇವೆ ಸಲ್ಲಿಸಬೇಕು ಎಂಬ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಆಶಯದಿಂದಾಗಿ ಕ್ಯಾಂಟೀನ್‌ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ" ಎಂದು ಮಗೇಶ್‌ಕುಮಾರ್ ಹೇಳಿದರು.

Rs 9 crore for renovating Amma canteens

ಇದಲ್ಲದೆ, ಮೊಬೈಲ್ ಅಮ್ಮಾ ಕ್ಯಾಂಟೀನ್‌ಗಳಿಂದ ಕಳೆದ ವರ್ಷದಲ್ಲಿ 1.09 ಲಕ್ಷ ಕಟ್ಟಡ ಕಾರ್ಮಿಕರು ಪ್ರಯೋಜನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಲೆಕ್ಕಪತ್ರ ಸಮಿತಿ ಅಧ್ಯಕ್ಷ ಕೆ ಧನಶೇಖರನ್ ಅವರು ಇತ್ತೀಚೆಗೆ ತೆನಾಂಪೇಟೆ ವಲಯದ ಅಮ್ಮಾ ಕ್ಯಾಂಟೀನ್‌ಗಳ ಲೆಕ್ಕಪರಿಶೋಧನೆ ನಡೆಸಿದರು. ಅಲ್ಲಿ ಅವರು 2020-21 ರಲ್ಲಿ 38 ಕ್ಯಾಂಟೀನ್‌ಗಳನ್ನು ನಡೆಸಲು ಖರ್ಚು 9.5 ಕೋಟಿ ರೂ. ಆಗಿದ್ದು, ಆದಾಯವು ಕೇವಲ 1.55 ಕೋಟಿ ರೂಪಾಯಿ ಎಂದಿದ್ದಾರೆ.

ದಿನಸಿ ವಸ್ತುಗಳನ್ನು ಖರೀದಿಸಲು ಮತ್ತು ಕಾರ್ಮಿಕರಿಗೆ ಸಂಬಳ ನೀಡಲು ಹೋಗುವ ಅತಿಯಾದ ವೆಚ್ಚವನ್ನು ಪರಿಶೀಲಿಸುವಂತೆ ಅವರು ಕಾರ್ಪೊರೇಷನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+