Gautam Adani: ಪುರಿಯ ಇಸ್ಕಾನ್ ಅಡುಗೆ ಮನೆಗೆ ಗೌತಮ್ ಅದಾನಿ ಭೇಟಿ, ಪ್ರಸಾದ ಸೇವೆಯಲ್ಲಿ ಭಾಗಿ!
ಅದಾನಿ ಗ್ರೂಪ್‌ನ ಅಧ್ಯಕ್ಷರಾದ ಗೌತಮ್ ಅದಾನಿ ಅವರು ಪವಿತ್ರ ಜಗನ್ನಾಥ ರಥ ಯಾತ್ರೆಯ ಸಮಯದಲ್ಲಿ ಪುರಿಯಲ್ಲಿರುವ ಇಸ್ಕಾನ್-ಅದಾನಿ ಮೆಗಾ ಅಡುಗೆಮನೆಗೆ ಭೇಟಿ ನೀಡಿ ನೂರಾರು ಸ್ವಯಂಸೇವಕರೊಂದಿಗೆ ಸೇವೆಯಲ್ಲಿ ಭಾಗವಹಿಸಿದರು. ಅವರ ಜೊತೆ ಅವರ ಪತ್ನಿ ಡಾ.ಪ್ರೀತಿ ಅದಾನಿ ಮತ್ತು ಮಗ ಕರಣ್ ಅದಾನಿ ಕೂಡ ಇದ್ದರು.
ಇಸ್ಕಾನ್ ಮತ್ತು ಅದಾನಿ ಗ್ರೂಪ್ ಜಂಟಿಯಾಗಿ ಬೆಂಬಲಿಸುವ ಈ ಮೆಗಾ ಕಿಚನ್ ಉಪಕ್ರಮವು ಪ್ರತಿದಿನ ಲಕ್ಷಾಂತರ ಯಾತ್ರಾರ್ಥಿಗಳಿಗೆ ಪವಿತ್ರ ಸಸ್ಯಾಹಾರಿ ಪ್ರಸಾದ ನೀಡುತ್ತಿದೆ. ಈ ವರ್ಷದ ಆರಂಭದಲ್ಲಿ ಕುಂಭಮೇಳದಲ್ಲೂ ಇದೇ ರೀತಿಯ ಸಹಯೋಗವನ್ನು ಅದಾನಿ ಗ್ರೂಪ್ ಮಾಡಿ ಗಮನ ಸೆಳೆದಿತ್ತು. ಇದು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸೇವಾ ಸಂಪ್ರದಾಯಗಳಿಗೆ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಲಾಗಿದೆ.

ಪುರಿಗೆ ಭೇಟಿಯ ಸಮಯದಲ್ಲಿ ಅಲ್ಲಿನ ಸ್ವಯಂಸೇವಕರು ಗೌತಮ್ ಅದಾನಿ ಅವರನ್ನ ಪ್ರೀತಿಯಿಂದ ಅಡುಗೆ ಕೆಲಸಗಳಲ್ಲಿ ತಮ್ಮೊಂದಿಗೆ ಸೇರಿಕೊಳ್ಳಲು ಆಹ್ವಾನಿಸಿದರು. ಅವರ ಭದ್ರತಾ ತಂಡವು ಆರಂಭದಲ್ಲಿ ಇದಕ್ಕೆ ನಿರಾಕರಿಸಿದರೂ ಅಡುಗೆ ತಂಡದವರಿಗೆ ಸಂತೋಷವನ್ನು ತರಲು ಒಪ್ಪಿಕೊಂಡರು. ಅವರೇ ಖುದ್ದಾಗಿ ಪೂರಿಗಳನ್ನು ಉರುಳಿಸುತ್ತಾ ಸಬ್ಜಿಯನ್ನು ಬೆರೆಸುತ್ತಾ, ಏಕತೆಯ ಮನೋಭಾವಕ್ಕೆ ಸಾಕ್ಷಿಯಾದರು. ಇದನ್ನು ಕಂಡು ಅಲ್ಲಿದ್ದ ಅಡುಗೆ ಸಿಬ್ಬಂದಿ ಕೂಡ ಅಚ್ಚರಿ ವ್ಯಕ್ತಪಡಿಸಿದರು.
ಡಾ.ಪ್ರೀತಿ ಅದಾನಿ ಕೂಡ ಆ ಸೇವೆಯಲ್ಲಿ ಭಾಗವಹಿಸಿದರು. ಒಂದು ಹೃದಯಸ್ಪರ್ಶಿ ಕ್ಷಣದಲ್ಲಿ, ಅವರು ದೊಡ್ಡ ಅಡುಗೆ ಪಾತ್ರೆ ಎತ್ತಲು ಪ್ರಯತ್ನಿಸುತ್ತಿದ್ದಾಗ ಪುತ್ರ ಕರಣ್ ಅದಾನಿ ಅವರಿಗೆ ಸಹಾಯ ಮಾಡಲು ಮುಂದೆ ಬಂದರು. ಇದು ಕುಟುಂಬದ ಪರಸ್ಪರ ಕಾಳಜಿ ಮತ್ತು ಆಧಾರಸ್ತಂಭದ ಮೌಲ್ಯಗಳನ್ನು ಪ್ರತಿಬಿಂಬಿಸುವ ಪ್ರತೀಕ ಎಂದು ಮೆಚ್ಚುಗೆ ವ್ಯಕ್ತವಾಗಿದೆ. ಈ ವಿನಮ್ರತೆಯ ಪಾಲ್ಗೊಳ್ಳುವಿಕೆಯನ್ನು ಭಕ್ತರು ಮತ್ತು ಸ್ವಯಂಸೇವಕರು ವೀಕ್ಷಿಸಿದರು. ಇದು ತಳಮಟ್ಟದ ಸೇವೆಗೆ ಸ್ವಯಂಪ್ರೇರಿತ, ಪ್ರಾಮಾಣಿಕ ಮೆಚ್ಚುಗೆಯ ಸೂಚಕವಾಗಿತ್ತು ಎಂದು ಇಸ್ಕಾನ್ ಪ್ರತಿನಿಧಿಯೊಬ್ಬರು ಹೇಳಿದರು.
ಕುಟುಂಬದ ಭಾಗವಹಿಸುವಿಕೆಯಿಂದ ಅಡುಗೆ ತಂಡವು ತೀವ್ರವಾಗಿ ಪ್ರಭಾವಿತವಾಯಿತು. ಗೌತಮ್ ಅದಾನಿಯವರು ಅಡುಗೆ ಮನೆಗೆ ಕಾಲಿಡಲು ಸ್ವಲ್ಪ ಸಮಯವಾದರೂ ಸಿದ್ಧರಿರುವುದು ನಮಗೆಲ್ಲರಿಗೂ ಒಂದು ಪ್ರಬಲ ಸಂದೇಶವಾಗಿತ್ತು. ಎಂದು ಇಸ್ಕಾನ್ ಆಡಳಿತ ಮಂಡಳಿ ಹೇಳಿದೆ. ನಿಜವಾದ ಶ್ರೇಷ್ಠತೆ ಇರುವುದು ಸೇವೆಯಲ್ಲಿಯೇ ಹೊರತು ಸ್ಥಾನದಲ್ಲಲ್ಲ ಎಂಬುದನ್ನು ಇದು ನಮಗೆ ನೆನಪಿಸಿತು ಎಂದು ತಿಳಿಸಿದೆ.

ಅದಾನಿ ಕುಟುಂಬ ಇಂತಹ ಸಾಂಸ್ಕೃತಿಕ ಮತ್ತು ಭಕ್ತಿ ಸೇವೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅರ್ಥಪೂರ್ಣ ಎಂದು ನಾವು ನಂಬುತ್ತೇವೆ. ಅವರ ನೆಲೆಗಟ್ಟಿನ, ಮೌಲ್ಯಾಧಾರಿತ ನಾಯಕತ್ವವು ಇತರ ಅನೇಕ ಉದ್ಯಮಿಗಳನ್ನು ಹೆಚ್ಚು ವೈಯಕ್ತಿಕ ಮತ್ತು ಹೃತ್ಪೂರ್ವಕ ರೀತಿಯಲ್ಲಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಬೆಂಬಲಿಸಲು ಖಂಡಿತವಾಗಿಯೂ ಪ್ರೇರೇಪಿಸುತ್ತದೆ ಎಂದು ಹೇಳಿದೆ.
ಇನ್ನು ಈ ವಾರ್ಷಿಕ ರಥಯಾತ್ರೆಗಾಗಿ ಲಕ್ಷಾಂತರ ಭಕ್ತರು ಪುರಿಯಲ್ಲಿ ಸೇರುವುದರಿಂದ, ಉತ್ಸವದ ಆಧ್ಯಾತ್ಮಿಕ ಚೈತನ್ಯವನ್ನು ಆತಿಥ್ಯ, ಕಾಳಜಿ ಮತ್ತು ಸಾಮೂಹಿಕ ಸೇವೆಯಿಂದ ಪೂರೈಸುವಲ್ಲಿ ಇಂತಹ ಉಪಕ್ರಮಗಳು ಪ್ರಮುಖ ಪಾತ್ರವಹಿಸುತ್ತವೆ. ಇದು ಅಸಂಖ್ಯಾತ ಸ್ವಯಂಸೇವಕರು ಮತ್ತು ಹಿತೈಷಿಗಳ ಪ್ರಯತ್ನಗಳಿಂದ ಸಾಧ್ಯವಾಗಿದೆ ಎಂದು ಇಸ್ಕಾನ್ ಶ್ಲಾಘಿಸಿದೆ.












Click it and Unblock the Notifications