Gautam Adani: ವೈದ್ಯಕೀಯ ಮೂಲಸೌರ್ಯ ಒದಗಿಸುವಲ್ಲಿ ಉದ್ಯಮಿ ಗೌತಮ್ ಅದಾನಿ ದೂರದೃಷ್ಟಿ
Gautam Adani: ನೀವು ಜಗತ್ತಿನಲ್ಲಿ ಬೆನ್ನುಮೂಳೆಯ ವೈದ್ಯರು ಎಂದು ಕರೆಸಿಕೊಳ್ಳಬಹುದು. ಆದರೆ ನಿಮ್ಮ ರೋಗಿಗಳಿಗೆ, ನೀವು ಭರವಸೆ ನೀಡುತ್ತೀರಿ. ಮುನ್ನಾಭಾಯಿ MBBS ಸೇರಿದಂತೆ ತಮ್ಮ ನೆಚ್ಚಿನ ಚಿತ್ರಗಳಲ್ಲಿನ ವಿಷಯಗಳನ್ನು ಒಂದೆಂದು ಉಲ್ಲೇಖಿಸಿದ ಅದಾನಿ ಅವರು, ರೋಗಿಯನ್ನು ನಿಜವಾಗಿಯು ಗುಣಪಡಿಸುವುದು ಶಸ್ತ್ರಚಿಕಿತ್ಸೆಯನ್ನು ಮೀರಿದ್ದು... ಗುಣಪಡಿಸುವ ಭರವಸೆ, ಮಾನವೀಯತೆ ಮುಖ್ಯವಾಗಿರುತ್ತದೆ ಎಂದು ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರು ಅಭಿಪ್ರಾಯಪಟ್ಟರು.
ಜುಲೈ 11 ರಂದು ಮುಂಬೈನಲ್ಲಿ ನಡೆದ SMISS ಏಷ್ಯಾ ಪೆಸಿಫಿಕ್ ಸಮ್ಮೇಳನದಲ್ಲಿ ಭಾಷಣ ಮಾಡಿದ ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಷಯಗಳನ್ನು ಪ್ರಸ್ತಾಪಿಸಿದರು. ವೈದ್ಯಕೀಯ ಮತ್ತು ಉದ್ಯಮಶೀಲ ನಾಯಕತ್ವದ ಮಧ್ಯೆ ಪ್ರಬಲ ಸಮಾನ ಅಂತರಿವಿದೆ. ಭಾರತದ ಅತ್ಯುತ್ತಮ ಬೆನ್ನುಮೂಳೆಯ ಶಸ್ತ್ರಚಿಕಿತ್ಸಕರು ಮತ್ತು ವೈದ್ಯಕೀಯ ತಜ್ಞರು ದೇಶದ ಆರೋಗ್ಯ ಮೂಲ ಸೌಕರ್ಯಗಳು ದೇಶದ ಉದಯ ಎಂಬಂತೆ ಕಲ್ಪಿಸಿಕೊಳ್ಳಬೇಕು ಎಂದು ಹೇಳಿದರು.

ಅನೇಕ ಸಂಗತಿಗಳನ್ನು ಅವರು ಹಂಚಿಕೊಂಡರು. ಅದಾನಿ ತಮ್ಮ ಉದ್ಯಮಶೀಲತಾ ಪ್ರಯಾಣ ಸ್ಮರಿಸಿದರು. ತಮ್ಮ 16 ನೇ ವಯಸ್ಸಿನಲ್ಲಿ ಅಹಮದಾಬಾದ್‌ನಿಂದ ಮುಂಬೈಗೆ ಎರಡನೇ ದರ್ಜೆಯ ರೈಲು ಟಿಕೆಟ್ ಪಡೆದು ಹೊರಟಿದ್ದು, ವಜ್ರಗಳ ಹೊಳಪು, 10,000 ರೂ. ಒಪ್ಪಂದದ ಕೆಲಸ ಪೂರ್ಣಗೊಳಿಸಿದ್ದು, ಅಲ್ಲಿಂದ 19 ನೇ ವಯಸ್ಸಿನಲ್ಲಿ ತಮ್ಮ ಸಹೋದರನ ಕಾರ್ಖಾನೆ ನಿರ್ವಹಿಸುವವರೆಗೆ ಹಲವು ವೈಯಕ್ತಿಕ ವಿಷಯಗಳನ್ನು ತಿಳಿಸಿದರು.
ಉದ್ಯಮಶೀಲತೆ ಎಂದಿಗೂ ಭವ್ಯವಾದ ದೃಷ್ಟಿಕೋನದಿಂದ ಆರಂಭವಾಗುವುದಿಲ್ಲ. ಭವಿಷ್ಯವು ಅನಿಶ್ಚಿತವಾಗಿದ್ದಾಗ ಕಾರ್ಯ ನಿರ್ವಹಣೆ ಧೈರ್ಯದಿಂದ ಪ್ರಾರಂಭವಾಗುತ್ತದೆ. ರಾಜೀವ್ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರಂತಹ ನಾಯಕರ ಅಡಿಯಲ್ಲಿ ಆರ್ಥಿಕ ಸುಧಾರಣೆಗಳಿಂದ ಆಳವಾಗಿ ರೂಪುಗೊಂಡಿವೆ. ಅದರಿಂದಲೇ 1991 ರಲ್ಲಿ ಉದಾರೀಕರಣದ ನಂತರ ಮಹತ್ವದ ತಿರುವು ಎದುರಾದವರು. 'ಅಪಮೌಲ್ಯೀಕರಣ, ಅನಿಯಂತ್ರಣ ಮತ್ತು ಜಾಗತೀಕರಣ' ಈ ಮೂರು ಪದಗಳನ್ನು ಅದಾನಿ ನೆನಪಿಸಿಕೊಂಡರು. ಅನೇಕ ಕಾರ್ಪೊರೇಟ್‌ಗಳ ಪತನವಾಯಿತು. ಅದು ನಮ್ಮಂತಹ ಉದ್ಯಮಿಗಳಿಗೆ ಪುನರ್ ವಿಮರ್ಶೆಗೆ ದಾರಿ ಮಾಡಿಕೊಟ್ಟಿತ್ತು.
ಮುಂದ್ರಾದಲ್ಲಿನ ಬಂಜರು ಭೂಮಿಯನ್ನು ಭಾರತದ ಶ್ರೇಷ್ಠ ಮೂಲಸೌಕರ್ಯ ಒದಗಿಸಿ ಯಶಸ್ಸಗೊಳಿಸುವ, ಬಂಜರು ಭೂಮಿ ಬದಲಾವಣೆ ಮಾಡುವ ಬಗ್ಗೆ ಗೌತಮ್ ಅದಾನಿ ಮಾತನಾಡಿದರು. ಸದ್ಯ ಭಾರತದ ಅತಿದೊಡ್ಡ ಬಹು ಸರಕು ಬಂದರು. ವಿಶ್ವದ ಅತಿದೊಡ್ಡ ಖಾಸಗಿ ಉಷ್ಣ ವಿದ್ಯುತ್ ಸ್ಥಾವರ ಹಾಗೂ ಸೌರ, ಪೆಟ್ರೋಕೆಮಿಕಲ್ ಮತ್ತು ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳ ಕೇಂದ್ರವಾಗಿದೆ. ಅದಾನಿ ಮುಂದಿನ ಐದು ವರ್ಷಗಳಲ್ಲಿ ಇಂಧನ, ಲಾಜಿಸ್ಟಿಕ್ಸ್ ಮತ್ತು ಮೂಲಸೌಕರ್ಯದಲ್ಲಿ ಸುಮಾರು $100 ಶತಕೋಟಿ ಹೂಡಿಕೆ ಮಾಡುವ ಬದ್ಧತೆ ಹೊಂದಿದೆ ಎಂದು ಭವಿಷ್ಯದ ಕುರಿತು ವಿವರಿಸಿದರು. ಅದಾನಿ ಸಂಸ್ಥೆ ಭಾರತೀಯ 140 ಕೋಟಿ ಕನಸುಗಳನ್ನು ಹೊತ್ತೊಯ್ಯುವ ಗಟ್ಟಿ ಬೆನ್ನು ಮೂಳೆ ನಿರ್ಮಿಸುತ್ತಿದ್ದೇವೆ ಎಂದು ಹೇಳಿದರು.
* ವಿಶ್ವದ ಎರಡನೇ ಅತಿದೊಡ್ಡ ಸೌರಶಕ್ತಿ ಕಂಪನಿ ಮತ್ತು 30 GW ನವೀಕರಿಸಬಹುದಾದ ಉದ್ಯಾನ ನಿರ್ಮಾಣ
* ಭಾರತದ ಅತಿದೊಡ್ಡ ಖಾಸಗಿ ವಿಮಾನ ನಿಲ್ದಾಣ ಜಾಲ ಸ್ಥಾಪನೆ
* ಭಾರತದ ಅತಿದೊಡ್ಡ ಬಂದರುಗಳು ಮತ್ತು ಲಾಜಿಸ್ಟಿಕ್ಸ್ ಕಾರ್ಯಾಚರಣೆ
* ವಿಶ್ವದ ಅತ್ಯಂತ ವೈವಿಧ್ಯಮಯ ಇಂಧನಗಳಾದ LNG, ಹೈಡ್ರೋಜನ್, CNG, EV ಚಾರ್ಜಿಂಗ್, ಸಿಮೆಂಟ್, ರಕ್ಷಣೆ ಮತ್ತಿತರಗಳಲ್ಲಿ ತೊಡಗಲು ಅದಾನಿ ಗ್ರೂಪ್ ಸಜ್ಜಾಗಿದೆ.
ಬೆನ್ನುಮೂಳೆ ನೋವು: ರಾಷ್ಟ್ರೀಯ ಬಿಕ್ಕಟ್ಟು
ಉದ್ಯಮದ ಬಗ್ಗೆ ಮಾತನಾಡಿದ್ದ ಗೌತಮ್ ಅದಾನಿ ಅವರು ನೇರ ಸಾರ್ವಜನಿಕ ಆರೋಗ್ಯ ವಿಷಯಗಳ ಬಗ್ಗೆ ಹೇಳುತ್ತಾರೆ. ಆಶ್ಚರ್ಯಕರ ಅಂಕಿ ಸಂಖ್ಯೆಗಳನ್ನು ವಿವರಿಸಿದರು. ಬೆನ್ನು ನೋವು ಭಾರತದಲ್ಲಿ ಅಂಗವೈಕಲ್ಯಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇದು ಮಧುಮೇಹ ಮತ್ತು ಹೃದಯ ಕಾಯಿಲೆಗಿಂತಲೂ ಮುಂದಿದೆ. ಸುಮಾರು 2 ವಯಸ್ಕ ಭಾರತೀಯರಲ್ಲಿ 1 ಜನರು ವಾರ್ಷಿಕವಾಗಿ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ''ಇದೊಂದು ಕೇವಲ ಆರೋಗ್ಯ ಸಮಸ್ಯೆಯಲ್ಲ - ಇದು ರಾಷ್ಟ್ರೀಯ ಬಿಕ್ಕಟ್ಟು". ಇದರ ನಿವಾರಣೆಯಲ್ಲಿ ವೈದ್ಯರು ಉದ್ಯಮಿಗಳಂತೆ ಯೋಚಿಸಬೇಕೆಂದು ಅವರು ಹೇಳಿದರು.
* ಬೆನ್ನುಮೂಳೆಯ ರೋಗ ಪರಿಹಾರಕ್ಕೆ AI-ಚಾಲಿತ ಸಧನಗಳ ಅಭಿವೃದ್ಧಿಗೆ ಸೂಚಿಸಿದರು.
* ಗ್ರಾಮೀಣ ಭಾರತಕ್ಕಾಗಿ ಮೊಬೈಲ್, ಕಡಿಮೆ-ವೆಚ್ಚದ ಶಸ್ತ್ರಚಿಕಿತ್ಸಾ ರಂಗಮಂದಿರಗಳನ್ನು ನಿರ್ಮಿಸಬೇಕು.
* ರೋಬೋಟಿಕ್ ಶಸ್ತ್ರಚಿಕಿತ್ಸೆ ಮತ್ತು ಜೈವಿಕ-ಸಂಯೋಜಿತ ಇಂಪ್ಲಾಂಟ್ ಸಹಿತ ಭವಿಷ್ಯ ಗಮನದಲ್ಲಿಟ್ಟುಕೊಂಡು ಬೆನ್ನುಮೂಳೆ ಆಸ್ಪತ್ರೆಗಳು ಸ್ಥಾಪನೆಯಾಗಬೇಕು.
ಅದಾನಿ ಹೆಲ್ತ್‌ಕೇರ್ ಕೇಂದ್ರಗಳ ಸ್ಥಾಪನೆಯಲ್ಲಿ ಕ್ರಾಂತಿ
ಅದಾನಿ ಗ್ರೂಪ್ 2022 ರಲ್ಲಿ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ರೂ. 60,000 ಕೋಟಿ ಬದ್ಧತೆ ಪ್ರದರ್ಶಿಸಿದೆ. ಆರೋಗ್ಯ ರಕ್ಷಣೆಗೆ ವೇಗದ ಕೊರತೆ ಹಿನ್ನೆಲೆಯಲ್ಲಿ ನಾವು ಆ ರಂಗ ಪ್ರವೇಶಿಸಲಿಲ್ಲ. ಸದ್ಯ ನಾವು ವೈದ್ಯಕಯ ಮೂಲಸೌಕರ್ಯ ಅಭಿವೃದ್ಧಿ ವಲಯದಲ್ಲಿ ಗಮನಹರಿಸಿದ್ದೇವೆ. ಅದಾನಿ ಗ್ರೂಪ್ ದೃಷ್ಟಿಕೋನವು AI-ಮೊದಲ, ಮಾನವ-ಕೇಂದ್ರಿತ ಆರೋಗ್ಯ ಪರಿಸರ ವ್ಯವಸ್ಥೆಗಳ ಮೇಲೆ ನಟ್ಟಿದೆ.
ಅಹಮದಾಬಾದ್ ಮತ್ತು ಮುಂಬೈನಲ್ಲಿ "ಅದಾನಿ ಹೆಲ್ತ್‌ಕೇರ್ ಕೇಂದ್ರಗಳು" ಸ್ಥಾಪನೆಯಾಗಲಿವೆ. ಅಲ್ಲಿ 1,000 ಹಾಸಿಗೆಗಳ, ಮೇಯೊ ಕ್ಲಿನಿಕ್-ಮಾರ್ಗದರ್ಶನ, ಸಂಶೋಧನೆ, ರೋಗಿಗಳ ಆರೈಕೆ, ರೊಬೊಟಿಕ್ಸ್ ಮತ್ತು ಅನ್ವಯಿಕ ಕಲಿಕೆ ಸಂಯೋಜಿಸುವ ಕ್ಯಾಂಪಸ್ ಗಳು ಇರಲಿವೆ. ಇವು ಆರೋಗ್ಯ ರಕ್ಷಣೆಗೆ ಆಧಾರಸ್ತಂಭಗಳಾಗಿರುತ್ತವೆ.
ಇಲ್ಲಿ ತುರ್ತು ಪ್ರತಿಕ್ರಿಯೆಗಾಗಿ ಮಾಡ್ಯುಲರ್ ಮೂಲಸೌಕರ್ಯ, ತಂತ್ರಜ್ಞಾನ, ಔಷಧ ಮತ್ತು ಸೇವೆ ಲಭ್ಯ ಇದೆ. ಬಹುಶಿಸ್ತೀಯ ವ್ಯವಸ್ಥೆಗಳು, ವೈದ್ಯರು, ದಾದಿಯರು ಮತ್ತು ಅರೆವೈದ್ಯರಿಗೆ ಅತ್ಯಾಧುನಿಕ ತರಬೇತಿ ಪಡೆದವರು ಇರಲಿದ್ದಾರೆ. ಜನರಿಗೆ ಮೊದಲು ಆರೋಗ್ಯ ವಿಮೆ ಸುಧಾರಿಸುವುದು ನಮ್ಮ ಆದ್ಯತೆಯಾಗಿದೆ.
ಒಟ್ಟಿಗೆ ಆರೋಗ್ಯ ರಕ್ಷಣೆಗೆ ಅದಾನಿ ಕರೆ
ನೀವು ಮೆಡ್-ಟೆಕ್ ಪ್ರಗತಿ ಬಗ್ಗೆ ಕನಸು ಕಂಡಿದ್ದರೆ ಅಲ್ಲಿಗೆ ಹೋಗಿ. ನೀವು ಬೆನ್ನುಮೂಳೆಯ ಆರೈಕೆ ಕ್ರಾಂತಿಯನ್ನು ಕಲ್ಪಿಸಿಕೊಂಡರೆ ಅದಕ್ಕಾಗಿ ಶ್ರಮಿಸಿ. ನೀವು ಸಹಾನುಭೂತಿಯಿಂದ ಭಾರತಕ್ಕೆ ಸೇವೆ ಸಲ್ಲಿಸಲು ಬಯಸಿದರೆ ಅದಕ್ಕಾಗಿ ಸಿದ್ಧರಾಗಿ. ನಿಮ್ಮಗಳ ಮೇಲೆ ಹೂಡಿಕೆದಾರರಾಗಲು ಬದ್ಧರಾಗಿದ್ದೇವೆ. ವೈದ್ಯರಾಗಿ ನೀವು ಬೆನ್ನು ಮೂಳೆ ರೋಗ ನಿವಾರಿಸಲು ನಾವೆಲ್ಲ ಒಟ್ಟಾಗಿ ನಿಲ್ಲೋಣ. ಮಹಾನ್ ರಾಷ್ಟ್ರದ ಬೆನ್ನೆಲುಬನ್ನು ನಿರ್ಮಿಸೋಣ ಎಂದು ಅವರು ಕರೆ ನೀಡಿದ್ದಾರೆ.












Click it and Unblock the Notifications