ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

GATE Exam 2023: ದೇಶದ 29 ನಗರಗಳಲ್ಲಿ ಪರೀಕ್ಷೆ, ವೇಳಾಪಟ್ಟಿ ಮಾಹಿತಿ ತಿಳಿಯಿರಿ

ದೇಶದ 29 ಕಡೆಗಳಲ್ಲಿ ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT)ಯು 2023ನೇ ಸಾಲಿನ ಎಂಜಿನಿಯರಿಂಗ್‌ನಲ್ಲಿ ಗ್ರಾಜುಯೇಟ್ ಆಪ್ಟಿಟ್ಯೂಡ್ ಪರೀಕ್ಷೆ (ಗೇಟ್-GATE)ಪರೀಕ್ಷೆ ನಡೆಸಲಿದೆ. ವೇಳಾಪಟ್ಟಿ ತಿಳಿಯಿರಿ.

|
Google Oneindia Kannada News

ಬೆಂಗಳೂರು, ಫೆಬ್ರುವರಿ 02: ದೇಶದ 29 ಕಡೆಗಳಲ್ಲಿ ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT)ಯು 2023ನೇ ಸಾಲಿನ ಎಂಜಿನಿಯರಿಂಗ್‌ನಲ್ಲಿ ಗ್ರಾಜುಯೇಟ್ ಆಪ್ಟಿಟ್ಯೂಡ್ ಪರೀಕ್ಷೆ (ಗೇಟ್-GATE)ಪರೀಕ್ಷೆ ನಡೆಯಲಿದೆ. ಈಸಂಬಂಧ ಸಿದ್ಧತೆ ಆರಂಭವಾಗಿದ್ದು, ಆದಷ್ಟು ಬೇಗ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಅಭ್ಯರ್ಥಿಗಳಿಗೆ ತಿಳಿಸಲಾಗಿದೆ.

GATE ಪರೀಕ್ಷೆ 2023ಯು ವೇಳಾಪಟ್ಟಿ ನೋಡುವುದಾದರೆ ಇದೇ ತಿಂಗಳ ಫೆಬ್ರವರಿ 4, 5, 11 ಹಾಗೂ 12 ರಂದು ನಾಲ್ಕು ದಿನ ನಡೆಯಲಿದೆ. ಜನವರಿ 9ರಂದೇ ಪ್ರವೇಶ ಕಾರ್ಡ್‌ ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳಿಗೆ ಈ ಬಗ್ಗೆ ತಿಳಿಸಲಾಗಿತ್ತು. ಆದಷ್ಟು ಬೇಗ ಐಐಟಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಪ್ರವೇಶ ಪತ್ರದಲ್ಲಿ ಗೇಟ್ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಯ ಹೆಸರು, ನೋಂದಣಿ ಸಂಖ್ಯೆ, ಜನ್ಮ ದಿನಾಂಕ, ಹಾಲ್ ಟಿಕೆಟ್ ಸಂಖ್ಯೆ, ವಿಳಾಸ, ಶಿಫ್ಟ್ ಸಮಯಗಳು, ಪರೀಕ್ಷೆಯ ದಿನಾಂಕ ಹಾಗೂ ಮಾರ್ಗಸೂಚಿ ಸಹಿತ ಎಲ್ಲ ಅಗತ್ಯ ವಿವರ ನೀಡಲಾಗಿದೆ ಎಂದು ಐಐಟಿ ತಿಳಿಸಿದೆ.

GATE Exam 2023: GATE Exam Starts From Feb 4 On 29 Cities In India By IIT Kanpur, Know Schedule

ಪರೀಕ್ಷೆಯು ನಾಲ್ಕು ದಿನವೂ ಬೆಳಗ್ಗೆ ಮತ್ತು ಮಧ್ಯಾಹ್ನ ಎಂದು ಎರಡು ಹಂತದಲ್ಲಿ ನಡೆಯಲಿದೆ. ಬೆಳಗ್ಗೆ 9.30ಗಂಟೆಯಿಂದ 12.30 ರವರೆಗೆ, ಮಧ್ಯಾಹ್ನ 2.30ಗಂಟೆಯಿಂದ ಸಂಜೆ 5.30ರವರೆಗೆ ಕೊನೆಗೊಳ್ಳುತ್ತದೆ. ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರ, ಮಾನ್ಯವಾದ ಫೋಟೋ ಐಡಿ ಮತ್ತು ನೀರಿನ ಬಾಟಲಿಯನ್ನು ಪರೀಕ್ಷೆಗೆ ತರಬಹುದು. ಪರೀಕ್ಷೆಗೆ ಹಾಜರಾಗುವ ಮುನ್ನ ಪ್ರವೇಶ ಪತ್ರ ಹಾಗೂ ಗುರುತಿನ ಚೀಟಿ ತೋರಿಸದಿದ್ದರೆ GATE 2023 ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವುದಿಲ್ಲ.

GATE Exam 2023: GATE Exam Starts From Feb 4 On 29 Cities In India By IIT Kanpur, Know Schedule

ಜೊತೆಗೆ ಅಭ್ಯರ್ಥಿಗಳು ಡಿಜಿಟಲ್ ವಾಚ್, ಬ್ಲೂಟೂತ್ ಸಾಧನಗಳು, ಲ್ಯಾಪ್‌ಟಾಪ್‌ ಅಥವಾ ಸೆಲ್ ಫೋನ್‌ಗಳಂತಹ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಾ ಕೊಠಡಿಗಳಲ್ಲಿ ನಿಷೇಧಿಸಲಾಗಿದೆ. ಕಂಪ್ಯೂಟರ್ ಆಧಾರಿತ ಈ ಗೇಟ್ ಪರೀಕ್ಷೆಯ ನಿತ್ಯ ಬೆಳಗ್ಗೆ ಮತ್ತು ಮಧ್ಯಾಹ್ನ ತಲಾ ಮೂರು ನಡೆಯಲಿದೆ. ದೇಶದ ಒಟ್ಟು 29 ನಗರಗಳಲ್ಲಿ ನಡೆಸುವುದಾಗಿಯು ಐಐಟಿ ತಿಳಿಸಿದೆ.

English summary
GATE Exam 2023: GATE Exam on February 4, 5,11 and 12th in 29 cities in India by Indian Institute of Technology Kanpur. Know Schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X