Lok Sabha Election Amethi: ಪ್ರತಿಷ್ಠಿತ ಅಮೇಟಿ ಕ್ಷೇತ್ರದಿಂದ ಗಾಂಧಿ ಕುಟುಂಬ ಔಟ್: ಕಿಶೋರಿಯಾ ಲಾಲ್ ಶರ್ಮಾ ಯಾರು?
ದೇಶದಲ್ಲಿ ಚುನಾವಣೆಗಳ ಬಿಸಿ ಹೆಚ್ಚಾಗುತ್ತಲೇ ಇದೆ. ಈ ನಡುವೆ ಎಲ್ಲರ ಚಿತ್ತವನ್ನು ತನ್ನತ್ತ ಕದ್ದು ಕೊಂಡಿದ್ದ ದೇಶದ ಎರಡು ಕ್ಷೇತ್ರಗಳಿಗೆ ಕಾಂಗ್ರೆಸ್ ಕೊನೆಯ ಕ್ಷಣದಲ್ಲಿ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದೆ. ಗಾಂಧಿ ಕುಟುಂಬ ಪ್ರತಿನಿಧಿಸುತ್ತಿದ್ದ ಉತ್ತರ ಪ್ರದೇಶದ ಪ್ರತಿಷ್ಠೆಯ ಅಮೇಥಿ ಹಾಗೂ ರಾಯ್‌ಬರೇಲಿ ಕ್ಷೇತ್ರಗಳಿಗೆ ಕಾಂಗ್ರೆಸ್ ಕೊನೆಯ ಕ್ಷಣದಲ್ಲಿ ಅಭ್ಯರ್ಥಿ ಘೋಷಣೆ ಮಾಡಿದೆ.
ರಾತ್ರಿ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೇಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿಷ್ಠೀತ ಅಮೇಥಿ ಕ್ಷೇತ್ರವನ್ನು ಗಾಂಧಿ ಕುಟುಂಬ ಬಿಟ್ಟಿಕೊಟ್ಟಿದೆ. ಬದಲಿಗೆ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿ ಕ್ಷೇತ್ರದತ್ತ ರಾಹುಲ್ ಗಾಂಧಿ ಮುಖಮಾಡಿದ್ದಾರೆ. ಅಮೇಥಿ ಕ್ಷೇತ್ರವನ್ನು ರಾಹುಲ್ ಬಿಟ್ಟಿದ್ದಕ್ಕೆ ಹಲವು ಪ್ರಶ್ನೆಗಳು ಕೇಳಿ ಬಂದಿವೆ. ಆದರೆ ಅವರು ಅಮೇಥಿ ಕ್ಷೇತ್ರವನ್ನು ಬಿಟ್ಟು, ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಅಮೇಥಿಗೂ ಕಾಂಗ್ರೆಸ್ ಸಂಬಂಧ ಏನು?
ಅಮೇಥಿಯನ್ನು 1967ರಲ್ಲಿ ಜಿಲ್ಲೆಯೆಂದು ಘೋಷಿಸಲಾಯಿತು. ಅಲ್ಲಿಂದ ಈ ಕ್ಷೇತ್ರದ ಮೇಲೆ ಕಾಂಗ್ರೆಸ್ ತನ್ನ ಹಿಡಿತವನ್ನು ಸಾಧಿಸಿದೆ ಎಂದರೆ ತಪ್ಪಾಗಲಾರದು. ಈಗಾಗಲೇ ಈ ಕ್ಷೇತ್ರ 16 ಲೋಕಸಭಾ ಚುನಾವಣೆಗಳನ್ನು ಎದುರಿಸಿದೆ. ಇಷ್ಟು ಚುನಾವಣೆಗಳಲ್ಲಿ ಕಾಂಗ್ರೆಸ್ ಹೊರತು ಪಡಿಸಿ ಮೂರು ಬಾರಿ ಮಾತ್ರ ಬೇರೆ ಪಕ್ಷಗಳು ಗೆಲುವು ಸಾಧಿಸಿವೆ.
ಸ್ಮೃತಿ ಇರಾನಿ ಗೆಲುವು
ಈ ಕ್ಷೇತ್ರಕ್ಕೆ 1980ರಲ್ಲಿ ಗಾಂಧಿ ಕುಟುಂಬ ಎಂಟ್ರಿ ನೀಡಿತು. ಸಂಜಯ್ ಗಾಂಧಿ ಈ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿ ಜಯ ಸಾಧಿಸಿದರು. ಈ ಪರಂಪರೆಯನ್ನು ರಾಜೀವ್ ಗಾಂಧಿ ಸಹ ಮುಂದುವರೆಸಿಕೊಂಡು ಹೋದರು. ರಾಜೀವ್ ನಾಲ್ಕು ಬಾರಿ ಈ ಕ್ಷೇತ್ರದ ಸಂಸದರಾಗಿದ್ದರು. ಬಳಿಕ ಎರಡು ಅವಧಿಗೆ ಈ ಕ್ಷೇತ್ರ ಮತ್ತೆ ಗಾಂಧಿ ಕುಟುಂಬದ ಕೈಯಿಂದ ವಂಚಿತವಾಗಿತ್ತು. ಆದರೆ 1999ರಿಂದ ಸೋನಿಯಾ ಗಾಂಧಿ, ಈ ಕ್ಷೇತ್ರವನ್ನು ಪ್ರತಿನಿಧಿಸಿ ಗೆದ್ದಿದ್ದರು. ಇದೇ ಪರಂಪರೆಯನ್ನು ರಾಹುಲ್ ಗಾಂಧಿ 2004 ರಿಂದ 2014ರ ವರೆಗೆ ಮುಂದುವರೆಸಿಕೊಂಡು ಬಂದಿದ್ದರು. ಆದರೆ 2019ರಲ್ಲಿ ಈ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ರಾಹುಲ್, ಅವರನ್ನು ಮಣಿಸಿ ಜಯ ಸಾಧಿಸಿದರು.
ಅಮೇಥಿ ಕ್ಷೇತ್ರವನ್ನು ಸುಮಾರು 25 ವರ್ಷಗಳ ಬಳಿಕ ಗಾಂಧಿ ಕುಟುಂಬ ಬಿಟ್ಟುಕೊಟ್ಟಿದೆ. ಈ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ನಿಲ್ಲುತ್ತಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಆದರೆ ಪ್ರಿಯಾಂಕಾ ಚುನಾವಣಾ ರಾಜಕೀಯದಿಂದ ಹಿಂದೆ ಸರಿದು, ಬರೀ ಪ್ರಚಾರದತ್ತ ಮುಖ ಮಾಡಿದ್ದಾರೆ. ಇದರಿಂದ ಅಮೇಥಿ ಕ್ಷೇತ್ರವನ್ನು ಕಾಂಗ್ರೆಸ್ ಕಿಶೋರಿಯಾ ಲಾಲಾ ಶರ್ಮಾ ಅವರಿಗೆ ಟಿಕೆಟ್ ನೀಡಿದೆ.

ಕಿಶೋರಿಯಾ ಲಾಲಾ ಯಾರು?
ಕಿಶೋರಿಯಾ ಲಾಲಾ ಶರ್ಮಾ, ಕೆಎಲ್ ಶರ್ಮಾ ಎಂಬ ಹೆಸರಿನಿಂದ ಚಿರಪರಿಚಿತರು. ಇವರು ಮೂಲತಃ ಪಂಜಾಬ್ ಲುದಿಯಾನ್‌ನವರು. ಆದರೆ 1983ರಲ್ಲಿ ರಾಹುಲ್ ಗಾಂಧಿ ರಾಯ್‌ಬರೇಲಿ ಹಾಗೂ ಅಮೇಥಿ ಕ್ಷೇತ್ರಕ್ಕೆ ಎಂಟ್ರಿ ನೀಡುತ್ತಿದ್ದಂತೆ, ಇವರು ಈ ಕ್ಷೇತ್ರಕ್ಕೆ ಬಂದರು. ರಾಜೀವ್ ಗಾಂಧಿ ಮರಣದ ನಂತದ ಇವರ ಸಂಬಂಧ ಗಾಂಧಿ ಕುಟುಂಬದ ಜೊತೆ ಚೆನ್ನಾಗಿತ್ತು.
ಸೋನಿಯಾ ಗಾಂಧಿ ಚುನಾವಣಾ ರಾಜಕೀಯ ಎಂಟ್ರಿ ನೀಡುತ್ತಿದ್ದಂತೆ ಕೆಎಲ್ ಶರ್ಮಾ ಸಹ ಅವರೊಂದಿಗೆ ಕ್ಷೇತ್ರಕ್ಕೆ ಬಂದರು. ರಾಹುಲ್ ಗಾಂಧಿ ಅಮೇಥಿ ಕ್ಷೇತ್ರದಲ್ಲಿ ಚುನಾವಣಾ ಸ್ಪರ್ಧಿಸಲು ಪ್ರಾರಂಭಿಸಿದಾಗಿನಿಂದಲೂ ಸೋನಿಯಾ ರಾಯ್‌ಬರೇಲಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಆಗಿನಿಂದ ಕೆಎಲ್ ಶರ್ಮಾ ಈ ಎರಡೂ ಕ್ಷೇತ್ರಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡರು.

ಕಾಲ ಬದಲಾದಂತೆ ಜನರು ಸಹ ಕಾಂಗ್ರೆಸ್‌ನಿಂದ ಬೇರೆ ಪಕ್ಷಗಳತ್ತ ಮುಖ ಮಾಡಿದರು. ಆದರೆ ಕಿಶೋರಿಯಾ ಮಾತ್ರ ಪಕ್ಷ ನಿಷ್ಠೆ ಬಿಡದೆ ಕೆಲಸ ಮಾಡಿದ್ದಾರೆ. ಬಿಹಾರ್ ಹಾಗೂ ಪಂಜಾಬ್ ಕಾಂಗ್ರೆಸ್ ಸಂಘಟನೆಯಲ್ಲಿ ಇವರು ಬೆವರು ಹರಿಸಿದ್ದಾರೆ. ಹೀಗಾಗಿ ಗಾಂಧಿ ಕುಟುಂಬದ ಆಪ್ತ ಕಿಶೋರಿಯಾ ಲಾಲ್ ಶರ್ಮಾಗೆ ಅವಕಾಶ ನೀಡಲಾಗಿದೆ. ಇವರು ಅಮೇಥಿಯಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.












Click it and Unblock the Notifications