ಹಿಮಾಚಲ ಪ್ರದೇಶಕ್ಕೆ ರೋಪ್‌ವೇಗಳು, ಶುದ್ಧ ಇಂಧನ ಯೋಜನೆಗಳ ಭರವಸೆ ನೀಡಿದ ಗಡ್ಕರಿ

ಭರ್ಮೌರ್, ನವೆಂಬರ್ 8: ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ ಪ್ರಚಾರ ಬಿರುಸುಗೊಂಡಿದೆ. ನವೆಂಬರ್ 12 ರಂದು ಚುನಾವಣೆ ನಡೆಯಲಿರುವ ಹಿಮಾಚಲ ಪ್ರದೇಶಕ್ಕೆ ಹೆಚ್ಚಿನ ರೋಪ್‌ವೇಗಳು, ಕೇಬಲ್ ರೈಲು ವ್ಯವಸ್ಥೆ, ಸುರಂಗಗಳು ಮತ್ತು ಶುದ್ಧ ಇಂಧನ ಯೋಜನೆಗಳ ಭರವಸೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ನೀಡಿದ್ದಾರೆ.

ಭರ್ಮೌರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಜನಕ್ ರಾಜ್ ಪರ ಗಡ್ಕರಿ ಪ್ರಚಾರ ನಡೆಸುತ್ತಿದ್ದಾರೆ. ಚಂಬಾ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಗಡ್ಕರಿ, ''ಇಲ್ಲಿ ರಸ್ತೆಗಳನ್ನು ನಿರ್ಮಿಸುವುದು ಕಷ್ಟ. ಸುರಂಗ ಯೋಜನೆಗಳು, ರೋಪ್‌ವೇಗಳು ಮತ್ತು ಫ್ಯೂನಿಕ್ಯುಲರ್ ರೈಲು ವ್ಯವಸ್ಥೆಗಳ ಅವಶ್ಯಕತೆಯಿದೆ. ನಾವು ಈ ಪರ್ವತಗಳನ್ನು ವಿದ್ಯುತ್ ಸಾರಿಗೆ ವ್ಯವಸ್ಥೆಯ ಮೂಲಕ ಸಂಪರ್ಕಿಸಲು ಸಾಧ್ಯವಾದರೆ, ಇವುಗಳು ನಿಮ್ಮ ಪ್ರಯಾಣವನ್ನು ಸುಗಮಗೊಳಿಸುತ್ತದೆ ಮತ್ತು ಸಂಪರ್ಕವನ್ನು ಸುಧಾರಿಸುತ್ತದೆ, ''ಎಂದು ಅವರು ಹೇಳಿದರು.

ಲೇಹ್ ಮತ್ತು ಲಡಾಖ್ ಪ್ರದೇಶಗಳಲ್ಲಿ ಇದೇ ರೀತಿಯ ರೋಪ್‌ವೇ, ಕೇಬಲ್ ಕಾರ್ ಮತ್ತು ಫ್ಯೂನಿಕ್ಯುಲರ್ ರೈಲ್ವೆ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. "ಪಠಾಣ್‌ಕೋಟ್-ಭರ್ಮೌರ್ ಹೆದ್ದಾರಿ ಯೋಜನೆಗೆ ಸಹ ಅನುಮೋದನೆ ನೀಡಲಾಗಿದೆ ಮತ್ತು ನಿಮ್ಮ ಪ್ರಯಾಣವನ್ನು ಸುಗಮಗೊಳಿಸಲು ಉತ್ತಮ ಗುಣಮಟ್ಟದ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ನಾನು ಭರವಸೆ ನೀಡುತ್ತೇನೆ" ಎಂದು ಗಡ್ಕರಿ ಹೇಳಿದರು.

Gadkari promised rope ways, clean energy projects for Himachal Pradesh

ಸರ್ಕಾರವು ಕೈಗೊಂಡಿರುವ ವಿವಿಧ ಶುದ್ಧ ಇಂಧನ ಮತ್ತು ವಿದ್ಯುತ್ ಚಲನಶೀಲತೆ ಯೋಜನೆಗಳನ್ನು ಹೈಲೈಟ್ ಮಾಡಿದ ಕೇಂದ್ರ ಸಚಿವರು, ಹಿಮಾಚಲ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗಳು ಉದ್ಯೋಗವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಇಲ್ಲಿ ಪೆಟ್ರೋಲ್ ಪಂಪ್‌ಗಳು ಮತ್ತು ಗ್ಯಾಸ್ ಸ್ಟೇಷನ್‌ಗಳ ಕೊರತೆಯ ಬಗ್ಗೆ ಮಾತನಾಡಿದ ಗಡ್ಕರಿ,"ಇಲ್ಲಿ ಸೌರ ಮೇಲ್ಛಾವಣಿ ಯೋಜನೆಗಳನ್ನು ಕಾರ್ಯಗತಗೊಳಿಸಬಹುದು, ಇದು ಎಲೆಕ್ಟ್ರಿಕ್ ಕಾರುಗಳು, ಬಸ್‌ಗಳು ಮತ್ತು ಆಟೋ-ರಿಕ್ಷಾಗಳಿಗೆ ಶಕ್ತಿ ನೀಡುತ್ತದೆ" ಎಂದು ಅವರು ಹೇಳಿದರು, ಅವರು ಸಾರಿಗೆ ಸಚಿವರಾಗಿ ದೇಶಕ್ಕೆ ಎಲೆಕ್ಟ್ರಿಕ್ ಬಸ್ಸುಗಳು, ಕಾರುಗಳು ಮತ್ತು ರಿಕ್ಷಾಗಳನ್ನು ತಂದಿದ್ದಾರೆ ಮತ್ತು ಶೀಘ್ರದಲ್ಲೇ ಎಲೆಕ್ಟ್ರಿಕ್ ಟ್ರ್ಯಾಕ್ಟರ್‌ಗಳು ಮತ್ತು ಟ್ರಕ್‌ಗಳನ್ನು ಪ್ರಾರಂಭಿಸಲಾಗುವುದು ಎಂದಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12 ರಂದು ಮತದಾನ ನಡೆಯಲಿದೆ ಮತ್ತು ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+