ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಮನೋಜ್ ಸಿನ್ಹಾ!

By: ವಿಕಾಸ್ ನಂಜಪ್ಪ
Subscribe to Oneindia Kannada

ಲಖನೌ, ಮಾರ್ಚ್ 18: ಉತ್ತರಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿರುವ ಹೆಸರು ಮನೋಜ್ ಸಿನ್ಹಾ ಅವರದು. ಶನಿವಾರ ಬೆಳಗ್ಗೆ ವಾರಣಾಸಿಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ವಾರಣಾಸಿಯ ಕಾಲ ಭೈರವ ಮಂದಿರದಲ್ಲಿ ಪೂಜೆ ಸಲ್ಲಿಸಿ, ಆ ನಂತರ ಲಖನೌ ಕಡೆಗೆ ಹೊರಟಿದ್ದಾರೆ.

ಶನಿವಾರ ಸಂಜೆ 5ಕ್ಕೆ ಬಿಜೆಪಿಯ ಶಾಸಕಾಂಗ ಸಭೆ ನಡೆಯಲಿದೆ. ಕೇಂದ್ರದಲ್ಲಿ ಸಚಿವರಾಗಿರುವ ಸಿನ್ಹಾ, ಉತ್ತರಪ್ರದೇಶದ ಮುಖ್ಯಮಂತ್ರಿಯಾಗುವ ಸೂಚನೆ ದೊರೆತಿದೆ. ಕಳೆದ ಕೆಲವು ದಿನಗಳಿಂದ ಅವರ ಹೆಸರು ಗಿರಕಿ ಹೊಡೆಯುತ್ತಿತ್ತು. ಆದರೆ ದೆಹಲಿಯಲ್ಲಿ ಮಾಧ್ಯಮದವರ ಜತೆಗೆ ಶುಕ್ರವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆ ರೇಸಿನಲ್ಲಿ ನಾನಿಲ್ಲ ಎಂದಿದ್ದರು.[ಯುಪಿಯಲ್ಲಿ ಯಾರಿಗೆ ಒಲಿಯಲಿದೆ ಮುಖ್ಯಮಂತ್ರಿ ಪಟ್ಟ?]

Manoj Sinha

ಆದರೆ, ಪಕ್ಷದ ಮೂಲಗಳ ಪ್ರಕಾರ ಮನೋಜ್ ಸಿನ್ಹಾ ಅವರಿಗೆ ಪಟ್ಟ ಕಟ್ಟುವುದು ನಿಶ್ಚಿತ. ನರೇಂದ್ರ ಮೋದಿ ಹಾಗೂ ಅಮಿತ್ ಷಾ ಇಬ್ಬರೂ ಸೇರಿ ಮನೋಜ್ ಸಿನ್ಹಾ ಅವರ ಆಯ್ಕೆ ಮಾಡಿದ್ದಾರೆ. ರಾಜ್ ನಾಥ್ ಸಿಂಗ್ ಅವರೂ ಮುಖ್ಯಮಂತ್ರಿ ಹುದ್ದೆ ಅಲಂಕರಿಸಬಹುದಾದದವರ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿಬಂದಿದ್ದರು.[ಉತ್ತರಪ್ರದೇಶ ಮುಖ್ಯಮಂತ್ರಿ ಆಯ್ಕೆ, ಮುಂದುವರಿದ ಕುತೂಹಲ]

ಮನೋಜ್ ಸಿನ್ಹಾ ಅಯ್ಕೆ ನಿರ್ಧಾರದಲ್ಲಿ ರಾಜ್ ನಾಥ್ ಸಿಂಗ್ ಸಹ ಇದ್ದರು. ಆರೆಸ್ಸೆಸ್ ನ ಒಪ್ಪಿಗೆ ಕೂಡ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The front-runner to the post of Uttar Pradesh Chief Minister, Manoj Sinha offered prayers at a temple in Varanasi, early Saturday morning. He was seen offering prayers at the Kaal Bhairav Mandir at Varanasi. He will head to Lucknow later during the day.
Please Wait while comments are loading...