ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ವಕ್ಕರಿಸಿದ ಅಲ್ ಖೈದಾ, ಮೋದಿಗೆ ಆತಂಕ

By Mahesh
|
Google Oneindia Kannada News

ನವದೆಹಲಿ, ಸೆ.4: ಅಲ್-ಖೈದಾ ಮುಖಂಡ ಜವಾಹಿರಿ ಭಾರತದಲ್ಲಿ ಅಲ್‌-ಖೈದಾ ಉಗ್ರ ಸಂಘಟನೆ ಶಾಖೆ ಆರಂಭಿಸಲಾಗಿದೆ. ಜಿಹಾದಿನ ಬಾವುಟ ಹಾರುತ್ತಿರಲಿ ಎಂಬ ವಿಡಿಯೋ ಸಂದೇಶ ನೀಡುತ್ತಿದ್ದಂತೆ ಕೇಂದ್ರ ಗುಪ್ತಚರ ದೇಶಾದ್ಯಂತ ಹೈ ಅಲರ್ಟ್ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜೀವಕ್ಕೆ ಆಪತ್ತು ತರಲು ಸಂಚು ರೂಪಿಸುತ್ತಿರುವ ಉಗ್ರ ಸಂಘಟನೆ ಅಧಿಕೃತವಾಗಿ ಭಾರತದಲ್ಲಿ ಕಾಲಿರಿಸಿದೆ.

ಅಲ್-ಖೈದಾ ಮುಖಂಡ ಜವಾಹಿರಿ ಮಾತನಾಡಿರುವ 55 ನಿಮಿಷದ ಬೆದರಿಕೆ ವಿಡಿಯೋದಲ್ಲಿ ಭಾರತದಲ್ಲಿ ಉಗ್ರ ಸಂಘಟನೆಯ ಶಾಖೆ ತೆರೆಯುವುದಾಗಿ ಅಲ್-ಖೈದಾ ಹೇಳಿದ್ದು, ಜಗತ್ತಿನ ಮುಸ್ಲಿಂ ಹೋರಾಟಗಾರರು ಒಂದಾಗುವಂತೆ ಕರೆ ನೀಡಿದ್ದಾರೆ. ಅಫ್ಘಾನಿಸ್ತಾನದ ತಾಲಿಬಾನ್ ಮುಖಂಡ ಮುಲ್ಲಾ ಒಮರ್ ಜೊತೆಗಿನ ಸಖ್ಯವನ್ನು ಸ್ಮರಿಸಿದ್ದಾರೆ. ಅದರೆ, ಜಾಗತಿಕವಾಗಿ ಬೆಳೆಯುತ್ತಿರುವ ISIS ಇಸ್ಲಾಮಿಕ್ ರಾಜ್ಯ ಉಗ್ರ ಸಂಘಟನೆಗಿಂತ ಪ್ರಬಲವಾಗಿ ಬೆಳೆಯಲು ಆಲ್ ಖೈದಾ ಸಿದ್ಧತೆ ನಡೆಸಿದೆ ಎಂದಿದ್ದಾರೆ.

Al Qaeda launches India wing to 'raise the flag of jihad' in subcontinent

ಭಾರತದಲ್ಲಿ ಮೊದಲಿಗೆ ಗುಜರಾತ್, ಉತ್ತರಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ದಾಳಿಗೆ ಅಲ್-ಖೈದಾ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

ಅಲ್ ಖೈದಾದ ಪಾಕಿಸ್ತಾನ ವಿಭಾಗದ ಶಾರಿಯಾ ಸಮಿತಿಯ ಮುಖ್ಯಸ್ಥ ಅಸೀಮ್ ಉಮರ್ ಅವರಿಗೆ ಭಾರತದ ಅಲ್ ಖೈದಾ ಸಂಘಟನೆ ಕೇಂದ್ರ ನಿಭಾಯಿಸುವ ಹೊಣೆ ನೀಡಲಾಗಿದೆ. ಖೈದಾತ್ ಅಲ್ ಜಿಹಾದ್ ಎಂದು ಸಂಘಟನೆಯ ಹೆಸರು ಬದಲಾಯಿಸಲಾಗಿದ್ದು ಉಸ್ತಾದ್ ಉಸಾಮಾ ಮಹಮ್ಮದ್ ಅವರು ಸಂಘಟನೆಯ ವಕ್ತಾರರಾಗಿರುತ್ತಾರೆ.

ಉಪಖಂಡಕ್ಕೆ ಸೇರಿರುವ ಬರ್ಮಾ, ಬಾಂಗ್ಲಾದೇಶ ಸೇರಿದಂತೆ ಬ್ರಿಟಿಷರು ಗುರುತಿಸಿರುವ ಎಲ್ಲಾ ಗಡಿಭಾಗಗಳನ್ನು ತುಂಡರಿಸುವಂತೆ ಕರೆ ನೀಡಲಾಗಿದೆ. ಅಲ್ ಖೈದಾ ಸಂಘಟನೆಗಳು ಪಾಕಿಸ್ತಾನ ಹಾಗೂ ಚೀನಾ ಗಡಿಭಾಗದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸಂಚರಿಸುತ್ತಿರುವ ಬಗ್ಗೆ ಕಾಶ್ಮೀರದಲ್ಲಿರುವ ಗುಪ್ತಚರ ಮೂಲಗಳು ಹೇಳಿವೆ. (ಏಜೆನ್ಸೀಸ್)

English summary
In a video that went viral on internet, the Islamic extremist group Al-Qaeda on Wednesday announced that they have launched a new branch in India. The announcement could pose a challenge to India's new prime minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X