ತಮಿಳುನಾಡಿನಲ್ಲಿ ಉಚಿತ ಶಿಕ್ಷಣ, ಆರೋಗ್ಯ ಸೇವೆ ವಿಸ್ತರಣೆ: ಸದ್ಗುರು ಶ್ರೀ ಮಧುಸೂದನ ಸಾಯಿ

ಮದುರೈ: ಜಗತ್ತಿನ ನೂರು ದೇಶಗಳಲ್ಲಿ ಉಚಿತ ಆರೋಗ್ಯ ಮತ್ತು ಶಿಕ್ಷಣ ಸೇವೆಯನ್ನು ನೀಡುತ್ತಿರುವ 'ಒನ್ ವರ್ಲ್ಡ್‌ ಒನ್ ಫ್ಯಾಮಿಲಿ ಮಿಷನ್' ಈಗ ತಮಿಳುನಾಡಿನಲ್ಲಿ ತನ್ನ ಸೇವೆಯನ್ನು ವಿಸ್ತರಿಸಲು ಮುಂದಾಗಿದೆ. ಮಯಿಲಾಡುತುರೈನಲ್ಲಿ 60 ಹಾಸಿಗೆಗಳ ಉಚಿತ ಆಸ್ಪತ್ರೆ, ತೆಂಕಾಸಿಯಲ್ಲಿ ಉಚಿತ ಗುರುಕುಲ ಆರಂಭಿಸಲಾಗುವುದು ಹಾಗೂ ದಿಂಡಿಗಲ್ ನ ಶ್ರೀ ಸತ್ಯ ಸಾಯಿ ಮೀನಾಕ್ಷಿನಿಕೇತನ ಗುರುಕುಲವನ್ನು ವಿಶ್ವವಿದ್ಯಾಲಯ ಮಟ್ಟಕ್ಕೆ ಏರಿಸುವ ಉದ್ದೇಶ ಇದೆ ಎಂದು 'ಒನ್ ವರ್ಲ್ಡ್‌ ಒನ್ ಫ್ಯಾಮಿಲಿ ಮಿಷನ್' ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರಕಟಿಸಿದರು.

ನಗರದಲ್ಲಿ ಶನಿವಾರ (ಅ 3) ನಡೆದ "ಹೃದಯದಿಂದ ಹೃದಯಕ್ಕೆ ಸಂವಾದ" ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಹರಿ ತ್ಯಾಗರಾಜನ್ ಅವರು ಕೇಳಿದ ಪ್ರಶ್ನೆಗಳಿಗೆ ಸದ್ಗುರು ಉತ್ತರಿಸಿದರು. ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಕೇಂದ್ರಸ್ಥಾನ ಹೊಂದಿರುವ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ವತಿಯಿಂದ ಅಧೀನಾಮ್ ಸಹಯೋಗದಲ್ಲಿ ರಾಜ್ಯದ ಮಯಿಲಾಡುತುರೈನಲ್ಲಿ 60 ಹಾಸಿಗೆಗಳ ಉಚಿತ ಆಸ್ಪತ್ರೆ ಆರಂಭಿಸಲಾಗುವುದು ಎಂದು ಸದ್ಗುರು ಹೇಳಿದರು. ಇಂದು ಆಧ್ಯಾತ್ಮಿಕ ಕೇಂದ್ರಗಳ ಗುರಿ ಶಿಕ್ಷಣ ಮತ್ತು ಆರೋಗ್ಯ ಆಗಿರುವುದು ಉತ್ತಮ ಕಾರ್ಯ ಎಂದು ಹೇಳಿದರು.

Free Education and Free Healthcare Services to Be Expanded in Tamil Nadu Sadguru Sri Madhusudan Sai

ಮಕ್ಕಳ ಸೇವೆಯೇ ಸಮಾಜ ಸೇವೆ

ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಮಕ್ಕಳ ಸೇವೆಯೇ ಸಮಾಜ ಸೇವೆ. ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಸಮಾಜದ ಕರ್ತವ್ಯ ಎಂದು ಹೇಳಿದರು. ಶ್ರೀಲಂಕಾದಲ್ಲಿ ಉಚಿತ ಆರೋಗ್ಯ ಸೇವೆ ನೀಡುತ್ತಿರುವ ಕುರಿತು ಸಮರ್ಥನೆ ನೀಡಿದ ಮಧುಸೂದನ ಸಾಯಿ, ಜಾಫ್ನಾ ಸಹಿತ ಕೆಲವು ಪ್ರದೇಶಗಳಲ್ಲಿ ಯುದ್ದದ ಪರಿಣಾಮ 30000 ಮಂದಿ ವಿಧವೆಯಾಗಿದ್ದಾರೆ. ಬಡತನ ಕಿತ್ತು ತಿನ್ನುತ್ತಿದೆ. ಮಕ್ಕಳಿಗೆ ಶಿಕ್ಷಣ ಹಾಗೂ ಆರೋಗ್ಯದ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಅವರಿಗೆ ಸೇವೆ ನೀಡುವುದರಲ್ಲಿ ತಪ್ಪೇನಿದೆ ಎಂದರು. ಫಿಜಿ, ಆಫ್ರಿಕಾ, ಅಮೆರಿಕದಲ್ಲಿ ತಮ್ಮ ಮಿಷನ್ ಸೇವೆ ನೀಡುತ್ತಿದೆ ಎಂದರು.

ಶ್ರೀಮಂತರು ಹೆಚ್ಚು ಹಣ ಸಂಪಾದನೆ ಮಾಡಿದರೂ ಆ ಹಣ ಎಲ್ಲವೂ ಅವರದಲ್ಲ. ಉದ್ಯಮಿಗಳು ದೇಹದ ಹೊಟ್ಟೆ ಇದ್ದ ಹಾಗೆ. ಹೊಟ್ಟೆಗೆ ನಾವು ಹಾಕಿದ ಆಹಾರವನ್ನು ಅದು ಅರಗಿಸಿಕೊಂಡು ತಾನೇ ಇಟ್ಟುಕೊಳ್ಳುವುದಿಲ್ಲ. ಹಾಗೆಯೇ ಉದ್ಯಮಿಗಳು ಸಮಾಜಕ್ಕೆ ಮರಳಿ ನೀಡಬೇಕು. ಭಾರತೀಯ ಉದಾರ ಸಂಸ್ಕೃತಿಯನ್ನು ಪಾಲಿಸಬೇಕು. ವಿದೇಶಿ ಮಾದರಿಯ ಸಂಪಾದನೆಯ ಸಂಸ್ಕೃತಿಯನ್ನು ಪಾಲಿಸಬಾರದು ಎಂದು ವಿವರಿಸಿದರು.

ಆಧ್ಯಾತ್ಮಿಕ ಶಿಕ್ಷಣ ನೀಡುವ ಅಗತ್ಯ ಇದೆ

ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿ ಪಾರಂಪರಿಕ ಉಪನಿಷತ್ ನಂಥ ಆಧ್ಯಾತ್ಮಿಕ ಶಿಕ್ಷಣ ನೀಡುವ ಅಗತ್ಯ ಇದೆ. ಈಗಿನ ಎಲ್ಲ ಸಮಸ್ಯೆಗೆ ಆಧ್ಯಾತ್ಮಿಕತೆಯೇ ಪರಿಹಾರ. ಆಧ್ಯಾತ್ಮಿಕತೆ ಪಠ್ಯಕ್ರಮವಾಗಬೇಕು. ಆಧ್ಯಾತ್ಮಿಕತೆಯ ಅಮಲು ತಲೆಗೆ ಏರಿದರೆ ಮಕ್ಕಳು ದಾರಿ ತಪ್ಪುವುದಿಲ್ಲ.ಆದರೆ ಈ ಶಿಕ್ಷಣ ಧರ್ಮದ ಬಗ್ಗೆ ಅಂಧಕಾರವನ್ನು ಬೆಳೆಸುವಂತೆ ಇರಬಾರದು. ಇದು ಧರ್ಮದ ಬಗ್ಗೆ ಬೆಳಕು ಚೆಲ್ಲುವ ಹಾಗಿರಬೇಕು. ಧರ್ಮವನ್ನು ತೊರೆದು ಹೇಗೆ ಇರಬಾರದೋ ಹಾಗೆಯೇ ಧರ್ಮದ ಶೋಕಿಯೂ ಇರಬಾರದು. ಧರ್ಮವನ್ನು ಆಳವಾಗಿ ಹಾಗೂ ನಿಸ್ಪ್ರುಹವಾಗಿ ಅಧ್ಯಯನ ಮಾಡಬೇಕು ಎಂದು ಹೇಳಿದರು.

ಜಗತ್ತಿನಲ್ಲಿ ನೆಗೆಟಿವಿಟಿ ಇರುವುದು ಸಹಜ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು ದೇವರನ್ನು ಹುಡುಕುವ ಪ್ರಯತ್ನ ಮಾಡಬೇಕು ಎಂದರು. ತನ್ನ ಪರಿವರ್ತನೆಯ ಕಥನ ಹಂಚಿಕೊಂಡ ದಿಂಡಿಗಲ್ ನ ಶ್ರೀ ಸತ್ಯ ಸಾಯಿ ಮೀನಾಕ್ಷಿನಿಕೇತನದ ವಿದ್ಯಾರ್ಥಿನಿ ಸಂಘವಿ, ಕಡುಬಡತನದಲ್ಲಿರುವ ನನ್ನ ಪಾಲಕರು ಇಲ್ಲಿಗೆ ಸೇರಿಸಿದ ಬಳಿಕ ನಾನು ಹೊಸ ಜಗತ್ತಿಗೆ ಪ್ರವೇಶಿಸಿದೆ. ಒಂದು ಗ್ರಾಮದ ಚೌಕಟ್ಟಿನಲ್ಲಿ ಇರಬೇಕಾದ ನಾನು ಇಂದು ಒಂದು ಜಗತ್ತಿನ ಸದಸ್ಯನಾಗಿದ್ದೇನೆ. ಸಮಾಜ ಸೇವೆಯೇ ಮನುಷ್ಯನ ಉದ್ದೇಶ ಎಂದು ಕಲಿತಿದ್ದೇನೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+