4 ಫಲಿತಾಂಶ: ಕರ್ನಾಟಕದಲ್ಲಿ ಯಾರು ಏನೆಂದರು?
ಬೆಂಗಳೂರು,
ಡಿ.8: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಮತ ಎಣಿಕೆ ಮುಂದುವರಿದೆ. ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡ ಮತದಾನದ Leading ಪ್ರಕಾರ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಅದೇ ರೀತಿ ದೆಹಲಿಯಲ್ಲಿ ಮತ್ತು ಛತ್ತೀಸ್ ಗಢದಲ್ಲಿ ಸ್ವಲ್ಪ ಮಟ್ಟಿಗೆ ಬಿಜೆಪಿ ಮುನ್ನಡೆ ಹೊಂದಿದೆ. id="toptextpromo"> id='are-slot-1' class='oiad oi-axt oiadv'>ಈ
ಸಂದರ್ಭದಲ್ಲಿ ರಾಜ್ಯದ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಕೆಲ ನಾಯಕರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ: (ಮಂತ್ರಿ ಆಗ್ತೀನಿ ಅಂತ ಊಟಕ್ಕೆ ಕುಳಿತ ಡಿಕೆ ಶಿವಕುಮಾರ್)id='are-slot-2' class='oiad oi-axt oiadv'>

ಬಿಜೆಪಿ ಗೆಲ್ಲೋಲ್ಲ. ಮೋದಿ ಪ್ರಧಾನಿಯಾಗುವುದಿಲ್ಲ- ದೇಶಪಾಂಡೆ
ಬೆಲೆ ಏರಿಕೆಯು 5 ರಾಜ್ಯಗಳ ಚುನಾವಣೆಯ ಮೇಲೆ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ. ಆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ನರೇಂದ್ರ ಮೋದಿ ಪ್ರಧಾನಿಯಾಗುವುದಿಲ್ಲ.
- ಪ್ರವಾಸೋದ್ಯಮ ಸಚಿವ ಆರ್ ವಿ ದೇಶಪಾಂಡೆ

ರಾಜಸ್ಥಾನ, ಮಪ್ರ ಬಿಜೆಪಿ ಗೆಲುವು ನಿರೀಕ್ಷಿತ: ಸಿದ್ದು
ರಾಜಸ್ಥಾನ ಮತ್ತು ಮಧ್ಯಪ್ರದೇಶಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಮೋದಿ ವರ್ಚಸ್ಸು ಕಾರಣವಲ್ಲ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯೂ ಅಲ್ಲ. ಎರಡು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅಲ್ಲಿನ ಸ್ಥಳೀಯ ನಾಯಕರ ವರ್ಚಸ್ಸು ಕಾರಣ. ಅದನ್ನು ಮೋದಿ ಫ್ಯಾಕ್ಟರ್ ಎನ್ನಬೇಡಿ.
5 ರಾಜ್ಯ ಚುನಾವಣೆಯಲ್ಲಿ ಜನರು ನೀಡಿರುವ ತೀರ್ಮಾನವನ್ನು ಪ್ರತಿಯೊಬ್ಬರು ಒಪ್ಪಿಕೊಳ್ಳಬೇಕು. ಅಲ್ಲಿನ ಫಲಿತಾಂಶದಿಂದ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಯಾವುದೇ ಹಾನಿ ಇಲ್ಲ. ಛತ್ತೀಸ್ ಗಢದಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸುವ ನಿರೀಕ್ಷೆಯಿತ್ತು. ದೆಹಲಿ ಫಲಿತಾಂಶ ಅಸ್ಪಷ್ಟವಾಗಿತ್ತು. ಇನ್ನು ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವು ನಿರೀಕ್ಷಿತವಾಗಿತ್ತು. ಹೀಗಾಗಿ ಫಲಿತಾಂಶದ ಬಗ್ಗೆ ಕುತೂಹಲವೇನು ಇಲ್ಲ.

ಮಾಜಿ ಗೃಹ ಸಚಿವ ಅಶೋಕ್ ಏನಂತಾರೆ?
ಇತಿಹಾಸದಲ್ಲಿ ಕಾಂಗ್ರೆಸ್ಸಿಗೆ ಇದು ಹೀನಾಯ ಸೋಲು. ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಜನ ಕಾಂಗ್ರೆಸ್ಸನ್ನು ತಿರಸ್ಕರಿಸಿದ್ದು, ಮೋದಿಯನ್ನು ಅಪ್ಪಿಕೊಂಡಿದ್ದಾರೆ. ಇದು ಸ್ಪಷ್ಟವಾಗಿ ಮೋದಿಗೆ ಸಂದ ಗೆಲುವು. ಅಷ್ಟೇ ಅಲ್ಲ. ಮುಂದೆಯೂ ಲೋಕಸಭೆ ಚುನಾವಣಗೆ ಜನ ಮೋದಿ ನಾಯಕತ್ವವನ್ನೇ ಬಯಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಸಂಭ್ರಮಾಚರಣೆಯಲ್ಲಿ ತೊಡಗಿದೆ.

ಬಿಜೆಪಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್:
ಕಾಂಗ್ರೆಸ್ ಪಾರ್ಟಿ ಮೇಲೆ ಜನಕ್ಕೆ ಜುಗುಪ್ಸೆ ಬಂದಿದೆ. ಕಾಂಗ್ರೆಸ್ಸನ್ನು ತಿರಸ್ಕರಿಸಬೇಕು ಎಂಬ ಭಾವನೆ ಬಂದಿದೆ. ಈ ಹಿಂದೆ ಬೊಫೋರ್ಸ್ ಹಗರಣ ರಾಜೀವ್ ಗಾಂಧಿ ಅವರ ಕಾಂಗ್ರೆಸ್ ಅನ್ನು ಗುಡಿಸಿಹಾಕಿತ್ತು. ಅದೇ ರೀತಿ ಈಗಲೂ ದಿಲ್ಲಿ ಸೇರಿದಂತೆ ಯುಪಿಎ ಭ್ರಷ್ಟಾಚಾರ ಕಾಂಗ್ರೆಸ್ಸನ್ನು ತಿಂದುಹಾಕಿದೆ.
ಈ ನಾಲ್ಕೂ ರಾಜ್ಯಗಳ ಫಲಿತಾಂಶದಿಂದ ಇದು ಸ್ಪಷ್ಟವಾಗಿದೆ. ಉತ್ತರ ಭಾರತದ ಮತದಾರ ದಕ್ಷಿಣ ಭಾರತದ ಮತದಾರನ ಮೇಲೂ ಪ್ರಭಾವ ಬೀರಲಿದ್ದಾನೆ. ಲೋಕಸಭಾ ಚುನಾವಣೆ ವೇಳೆಗೆ ಮತದಾರ ಮತ್ತಷ್ಟು ಬಿಜೆಪಿಗೆ ಹತ್ತಿರವಾಗುತ್ತಾನೆ.

ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್:
ಸೋಲನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಇದು ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ. ಈ ಹಿಂದೆಯೂ ಹೀಗೇ ಆಗಿದೆ. ಕೊನೆಗೆ ಕಾಂಗ್ರೆಸ್ ಗೆದ್ದು ಬಂದಿದೆ.

ರಾಜಸ್ಥಾನದಲ್ಲಿ ಚುನಾವಣೆ ಉಸ್ತುವಾರಿ ಹೊತ್ತಿದ್ದ ಡಿಕೆ ಶಿ
ರಾಜಸ್ಥಾನದಲ್ಲಿ ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರಕಾರ 5 ವರ್ಷಗಳಿಂದ ಉತ್ತಮವಾಗಿ ಕೆಲಸ ಮಾಡಿದ್ದೆವು. ಆದರೆ ಜನಕ್ಕೆ ಅದು ಇಷ್ಟವಾಗಿಲ್ಲ. ಪಕ್ಷ ಸಂಘಟಿತವಾಗಿ ಕೆಲಸ ಮಾಡಿದೆವು. ಆದರೆ ಜನ ಬದಲಾವಣೆ ಬಯಸಿದ್ದಾರೆ. ಅದನ್ನು ಒಪ್ಪಿಕೊಳ್ಳುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಭಾವನೆಗಳಿಗೆ ಮಣೆ ಹಾಕೋಣ. ಮುಂದೆ ನೋಡೋಣ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೇ ನಮಗೆಂದಿಗೂ ನಾಯಕರು. ಆದರೂ ಪಕ್ಷವು ಸ್ಥಳೀಯ ಮಟ್ಟದಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡು ಮುಂದುವರಿಯುತ್ತೇವೆ.

ಬಿಜೆಪಿ ವಕ್ತಾರ ಸಿಟಿ ರವಿ
ಇದು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರಿಗೆ ದೊರೆತ ಸ್ಪಷ್ಟ ಮನ್ನಣೆ. ಬಿಜೆಪಿ ಇನ್ನು ಹಿಂದಿರುಗಿ ನೋಡುವ ಮಾತೇ ಇಲ್ಲ.












Click it and Unblock the Notifications