Get Updates
Get notified of breaking news, exclusive insights, and must-see stories!

ಟ್ವೀಟ್ಸ್ : ರಾಹುಲ್ ಗೆ ಪಾಠ ಕಲಿಸಿದ ಆಮ್ ಆದ್ಮಿ

ಬೆಂಗಳೂರು, ಡಿ/7: ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಡ ವಿಧಾನಸಭೆಗಳಿಗೆ ನಡೆದ ಚುನಾವಣೆಗಳ ಮತ ಎಣಿಕೆ ಭಾನುವಾರ ಆರಂಭಗೊಂಡ ಬೆನ್ನಲ್ಲೇ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಜನಸಾಮಾನ್ಯರು ತಮ್ಮ ಅಭಿಮತವನ್ನು ಪ್ರಕಟಿಸಿದ್ದಾರೆ. ಮಿಜೋರಾಂ ರಾಜ್ಯದಲ್ಲಿ ಮತ ಎಣಿಕೆ ಡಿ.9ಕ್ಕೆ ನಡೆಯಲಿದೆ.

ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಕ್ಲೀನ್ ಸ್ವೀಪ್ ಮಾಡಿದೆ ಎಂದು ಬಿಜೆಪ್ ಪರ ಟ್ವೀಟ್ ಗಳು ಬಂದರೆ, ಮೊಟ್ಟ ಮೊದಲ ಬಾರಿಗೆ ಚುನಾವಣಾ ರಣರಂಗಕ್ಕೆ ಇಳಿದು ದೆಹಲಿಯಲ್ಲಿ 25 ಕ್ಕೂ ಅಧಿಕ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಆಮ್ ಆದ್ಮಿ ಪಕ್ಷದ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರ ಹರಿದು ಬಂದಿದೆ. ಕಾಂಗ್ರೆಸ್ ಪಕ್ಷ ಏನಾಯ್ತು? ಇದೇನಾಯ್ತು ಎಂದು ಗೊಣಗಾಡುತ್ತಿದ್ದು, ಯಾರ ಮೇಲೆ ಸೋಲಿನ ಗೂಬೆ ಕೂರಿಸಬೇಕು ಎಂದು ಚರ್ಚೆ ನಡೆಸಿದ್ದಾರೆ.

'ಜನತೆ ನಮಗೆ ಒಂದು ಸಂದೇಶ ನೀಡಿದ್ದಾರೆ. ನಾವು ಇದನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇವೆ. ಕಾಂಗ್ರೆಸ್ ಮತ್ತೊಮ್ಮೆ ಪುಟಿದೇಳಲಿದೆ. ಶೀಲಾ ಅವರು ಉತ್ತಮ ಆಡಳಿತ ನೀಡಿದ್ದಾರೆ. ಆದರೆ, ಪಕ್ಷಕ್ಕೆ ಆಗಿರುವ ಹಿನ್ನಡೆ ಸರಿದೂಗಿಸಲು ನಾನು ಶ್ರಮಿಸುತ್ತೇನೆ. ಆಮ್ ಆದ್ಮಿ ಪಕ್ಷ ಹೆಚ್ಚೆಚ್ಚು ಜನರನ್ನು ಆಕರ್ಷಿಸಿತ್ತು. ಸಾಂಪ್ರದಾಯಿಕ ಶೈಲಿಯ ರಾಜಕೀಯ ಪಕ್ಷಕ್ಕೆ ಇದು ಸಾಧ್ಯವಾಗಿಲ್ಲ. ಯುವ ಜನತೆಯಿಂದ ಇದು ಸಾಧ್ಯವಾಗಿದೆ ಇದು ನಮಗೆ ಪಾಠವಾಗಲಿದೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೇಳಿದ್ದಾರೆ.

ಪಕ್ಷಗಳ ಬಲಾಬಲ, ಗೆಲುವು ಸೋಲಿನ ಲೆಕ್ಕಾಚಾರ ಬಗ್ಗೆ ಜನ ಸಾಮಾನ್ಯರಿಗಿಂತ ತಿಳಿದವರಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿರುವ ಟ್ವೀಟ್ ಗಳ ಸಂಗ್ರಹ ಇಲ್ಲಿದೆ ನೋಡಿ...

ಎಎಪಿಯಿಂದ ಪಾಠ ಕಲಿತೆ

ಎಎಪಿಯಿಂದ ಪಾಠ ಕಲಿತೆ ಎಂದ ರಾಹುಲ್ ಈಗ ಆಮ್ ಆದ್ಮಿ ಪಕ್ಷದ ಕದ ತಟ್ಟುತ್ತಿದ್ದಾರಂತೆ

ಎಎಪಿ ಸೋತಿಲ್ಲ

100 ವರ್ಷದ ಅನುಭವವುಳ್ಳ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ಕೊಟ್ಟ ವರ್ಷದ ಕೂಸು ಆಮ್ ಆದ್ಮಿ ಪಕ್ಷ

ರಾಹುಲ್ ಗಾಂಧಿ ಭಾಷಣ

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ನೀರಸ ಭಾಷಣದಿಂದ ಬೇಸತ್ತು ಜನ ಬೇರೆ ಪಕ್ಷದತ್ತ ಮುಖ ಮಾಡಿದ್ದಾರೆ.

ಮೊದಲ ಪಂದ್ಯದಲ್ಲಿ ಶತಕ

ಲಾರ್ಡ್ಸ್ ನಲ್ಲಿ ಗಂಗೂಲಿ ಶತಕ ಹೊಡೆದಂತೆ ಅರವಿಂದ್ ಅವರು ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಆಟವಾಡಿದ್ದಾರೆ.

ಆಫ್ ದಿ ಸ್ಕ್ರೀನ್

ಟೈಮ್ಸ್ ನೌ ನಲ್ಲಿ ಅರ್ನಬ್ ಗೋಸ್ವಾಮಿ ನೋಡಿ ಬೆಚ್ಚಿದ ಪಾಪು ಹೇಳಿದ್ದೇನು?

ಸೋಲಿನ ಬಗ್ಗೆ ರಾಹುಲ್

ಸೋಲು ಎಂಬುದು ಮಾನಸಿಕ ಸ್ಥಿತಿ ಎಂದು ರಾಹುಲ್ ಗಾಂಧಿ ಹೇಳಬಹುದು!

ಕುಟುಂಬ ರಾಜಕಾರಣ ಅಂತ್ಯ

ನಾಲ್ಕು ರಾಜ್ಯಗಳ ಫಲಿತಾಂಶದಿಂದ ಕುಟುಂಬ ರಾಜಕಾರಣಕ್ಕೆ ಫುಲ್ ಸ್ಟಾಪ್

ರಾಹುಲ್ ಕಾರಣವಲ್ಲ

ಸರಣಿ ಸೋಲಿಗೆ ರಾಹುಲ್ ಕಾರಣವಲ್ಲ ಎನ್ನುತ್ತಿರುವ ಕಾಂಗ್ರೆಸ್ಸಿಗರು, ಜನತೆ ಏನು ಹೇಳುತ್ತಾರೆ?

ಚೆನ್ನೈ ಎಕ್ಸ್ ಪ್ರೆಸ್ ಡೈಲಾಗ್

ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಡೈಲಾಗ್ ನಿಜವಾಗುತ್ತಿದೆ.

ಚೇತನ್ ಭಗತ್ ಟ್ವೀಟ್

70 ಸೀಟು ಗಳಿಸುವ ಪಾರ್ಟಿ 7 ಸೀಟು ಗೆಲ್ಲುತ್ತೆ ಅಂದ್ರೆ ಒಂದು ಟಯೋಟಾ ಇನ್ನೋವಾ ವಾಹನ ಸಾಕು, ಇನ್ನೋವಾ ಪಾರ್ಟಿ ಮಾಡಲು

ಆರ್ನಬ್ ಚುನಾವಣೆಗೆ ನಿಂತರೆ?

ಟೈಮ್ಸ್ ನೌ ಜನಪ್ರಿಯ ಸಂಪಾದಕ ಅರ್ನಬ್ ಗೋಸ್ವಾಮಿ ಚುನಾವಣೆಗೆ ನಿಂತರೆ ಏನು ಚಿನ್ಹೆ

Whats AAP ಕಿರಿಕಿರಿ

ಶೀಲಾ ಮೇಡಂ ಅವರು Whats AAP ಅಪ್ಲಿಕೇಷನ್ ಕಿರಿಕಿರಿ ಉಂಟುಮಾಡುತ್ತಿದೆಯಂತೆ. AAP ಅಕ್ಷರ ಇರುವುದೇ ಕಾರಣವಂತೆ

ದಿಗ್ವಿಜಯ್ ಏನ್ಮಾಡ್ತಿದ್ದಾರೆ?

ಕಾಂಗ್ರೆಸ್ ನಾಯಕ ದಿಗ್ವಿಜಯ್ digg ಮಾಡ್ತಾ ಇದ್ದಾರಂತೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+