• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಡ್ವಾಣಿಗೆ ಶುಭಾಶಯ ಕೋರುವ ವೇಳೆಯೂ ಸಿದ್ದರಾಮಯ್ಯ ರಾಜಕೀಯ

|
   ಎಲ್ ಕೆ ಅಡ್ವಾಣಿ ಶುಭಾಶಯ ಕೋರುವ ವೇಳೆಯಲ್ಲೂ ಸಿದ್ದರಾಮಯ್ಯ ರಾಜಕೀಯ | Oneindia Kannada

   ಬಿಜೆಪಿಯ ಹಿರಿಯ ಮುಖಂಡ, ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುವ ಎಲ್ ಕೆ ಅಡ್ವಾಣಿಗೆ ಇಂದು (ನ 8) 91ನೇ ವಸಂತದ ಸಂಭ್ರಮ. ಬ್ರಿಟಿಷರ ಕಾಲದಲ್ಲಿ ಮುಂಬೈ ಪ್ರಾಂತ್ಯದ ಭಾಗವಾಗಿದ್ದ ಈಗಿನ ಪಾಕಿಸ್ತಾನದ ಕರಾಚಿಯಲ್ಲಿ 08.11.1927ರಲ್ಲಿ ಅಡ್ವಾಣಿ ಜನಿಸಿದ್ದು.

   ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿಚಾರ ಮತ್ತೆ ಮುನ್ನಲೆಗೆ ಬಂದಿರುವ ಈ ಹೊತ್ತಿನಲ್ಲಿ, ಈ ವಿಚಾರದಲ್ಲಿ ಪದೇಪದೇ ನೆನಪಾಗುವ ಹೆಸರು ಅಡ್ವಾಣಿಯವರದ್ದು. ರಥಯಾತ್ರೆಯ ಮೂಲಕ, ಬಿಜೆಪಿಯನ್ನು ಮುಖ್ಯವಾಹಿನಿಗೆ ತಂದ ಅಡ್ವಾಣಿಯವರ ಸಾಹಸಕ್ಕೆ ಇಡೀ ದೇಶದ ರಾಜಕಾರಣಿಗಳು ನಿಬ್ಬೆರಗಾಗಿದ್ದರು.

   25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್

   2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪಡೆದಿದ್ದ ಅಡ್ವಾಣಿ, ಗುಜರಾತಿನ ಗಾಂಧಿನಗರ ಕ್ಷೇತ್ರದ ಸಂಸದರು ಕೂಡಾ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿ ತಮ್ಮ ಸಮೀಪದ ಕಾಂಗ್ರೆಸ್ ಪ್ರತಿಸ್ಪರ್ಧಿಯ ವಿರುದ್ದ 483,121 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು.

   ನರೇಂದ್ರ ಮೋದಿಯವರ ಸರಕಾರ ಅಧಿಕಾರಕ್ಕೆ ಬಂದ ನಂತರ, ಸಕ್ರಿಯ ರಾಜಕಾರಣದಿಂದ ಅಡ್ವಾಣಿ ಬಹುತೇಕ ದೂರ ಸರಿದಿದ್ದಾರೆ. ಇತ್ತೀಚೆಗೆ ನಡೆದ ಸರ್ದಾರ್ ಪಟೇಲ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲೂ ಅಡ್ವಾಣಿ ಭಾಗವಹಿಸಿರಲಿಲ್ಲ.

   ವೈರಲ್ ವಿಡಿಯೋ : ಅಡ್ವಾಣಿಯನ್ನು ಕಡೆಗಣಿಸಿದರೆ ಮೋದಿ?

   ಪಕ್ಷಾತೀತವಾಗಿ ಎಲ್ಲರೂ ಮೆಚ್ಚುವ ಅಡ್ವಾಣಿಯವರ ಹುಟ್ಟುಹಬ್ಬದ ದಿನದಂದು ಪ್ರಧಾನಿಯಾದಿಯಾಗಿ ಎಲ್ಲರೂ ಶುಭಾಶಯ ಕೋರಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ, ಅಡ್ವಾಣಿಯವರಿಗೆ ವಿಷ್ ಮಾಡುತ್ತಾ, ಮೋದಿ ಮತ್ತು ಬಿಜೆಪಿಯ ಕಾಲೆಳೆದಿದ್ದಾರೆ. ಸಿದ್ದರಾಮಯ್ಯ ಟ್ವೀಟಿಗೆ ಕೆಲವೊಂದು ಭರ್ಜರಿ ತಿರುಗೇಟು ಕೂಡಾ ಟ್ವಿಟ್ಟಿಗರಿಂದ ಬಂದಿದೆ. ಮುಂದೆ ಓದಿ..

   ಸಿದ್ದರಾಮಯ್ಯ ಅವರ ವಿಷ್

   ಸಿದ್ದರಾಮಯ್ಯ ಅವರ ವಿಷ್

   ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯವರ ಹುಟ್ಟುಹಬ್ಬಕ್ಕೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಗ್ಲಿಷ್ ನಲ್ಲಿ ಶುಭಾಶಯ ಕೋರಿದ್ದಾರೆ. ಅದರ ಕನ್ನಡ ಅನುವಾದ ಹೀಗಿದೆ " ಬಿಜೆಪಿಯ ಹಿರಿಯ ನಾಯಕ ಅಡ್ವಾಣಿಯವರಿಗೆ ಜನುಮದಿನದ ಶುಭಾಶಯಗಳು. ನೀವು ಆರೋಗ್ಯ ಮತ್ತು ಖುಷಿಯಿಂದ ಬಾಳುವಂತಾಗಲಿ. ಮುಂದೆ ಇದೆ..

   ಪ್ರಜಾಪ್ರಭುತ್ವ ವ್ಯವಸ್ಥೆ

   ಪ್ರಜಾಪ್ರಭುತ್ವ ವ್ಯವಸ್ಥೆ

   'ಸದ್ಯ ಅಪಾಯದಲ್ಲಿರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ನಿಮ್ಮಂತಹ ಹಿರಿಯ ನಾಯಕರ ಸಲಹೆ ಅಗತ್ಯ. ಮಾರ್ಗ ದರ್ಶಕ ಮಂಡಳಿ, ನಿಮ್ಮ ಹಿರಿತನ ಮತ್ತು ಅನುಭವಕ್ಕೆ ಬೆಲೆ ಕೊಡುತ್ತಿಲ್ಲ' ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಮೋದಿ, ಅಮಿತ್ ಶಾ ಮತ್ತು ಬಿಜೆಪಿಯ ಕಾಲೆಳೆದಿದ್ದಾರೆ.

   ಹಿರಿಯ ನಾಯಕರು ಸೈಡ್ಲೈನ್: ಅಡ್ವಾಣಿ, ಜೋಷಿಗೆ ಬಿಜೆಪಿ ಮಾಡಿದ್ದೇನು?

   ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮಾರ್ಗದರ್ಶಕ

   ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮಾರ್ಗದರ್ಶಕ

   ನಮಗೆ ನಿಮ್ಮ ನೋವು ಅರ್ಥವಾಗುತ್ತದೆ, ಸದ್ಯ ನೀವು ಕೂಡಾ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮಾರ್ಗದರ್ಶಕರಂತೆ ಇದ್ದೀರಲ್ಲಾ.. ಪ್ರಜಾಪ್ರಭುತ್ವ ಅಪಾಯದಲ್ಲಿರುವುದು ನಿಮ್ಮಂತವರಿಂದ. ಹಿಂದೂಗಳ ಮಾರಣಹೋಮ ಮಾಡಿರುವ ಟಿಪ್ಪು ಸುಲ್ತಾನಿನ ಜಯಂತಿ ಆಚರಿಸಲು ಹೊರಟ ನಿಮ್ಮಂತವರಿಂದ ತೊಂದರೆ ಎನ್ನುವ ಟ್ವೀಟ್.

   ಮಹನೀಯರ ಹುಟ್ಟು ಹಬ್ಬದ ದಿನ ಬಳಸಿಕೊಳ್ಳಬೇಡಿ

   ಮಹನೀಯರ ಹುಟ್ಟು ಹಬ್ಬದ ದಿನ ಬಳಸಿಕೊಳ್ಳಬೇಡಿ

   'ಸ್ವಾಮಿ ನಿಮ್ಮ ಹೊಲಸು ರಾಜಕೀಯವನ್ನು ಆ ಮಹನೀಯರ ಹುಟ್ಟು ಹಬ್ಬದ ದಿನ ಬಳಸಿಕೊಳ್ಳಬೇಡಿ. ಅಷ್ಟಕ್ಕೂ Democracy ಹಾಗೂ seniority ಬಗ್ಗೆ ಮಾತನಾಡುವ ಮುನ್ನ ತಮ್ಮ ಮುಖವನ್ನು ಒಮ್ಮ ಕನ್ನಡಿಯಲ್ಲಿ ನೋಡಿಕೊಳ್ಳಿ'. ಹುಟ್ಟುಹಬ್ಬದ ಶುಭಾಶಯ ಕೋರುವಾಗಲೂ ರಾಜಕೀಯ ಮಾಡುತ್ತೀರಲ್ವಾ, ಎಂಥಾ ಟೇಸ್ಟ್ ನಿಮ್ಮದು. ಯಾಕೆ ಇನ್ನೊಂದು ರಥಯಾತ್ರೆ ಆಗಬೇಕಾ?

   ಆ ಬಾಲಕನ ಮುಂದೆ ಸ್ವಾತಂತ್ರ್ಯ ಹೊಂದಿಲ್ಲ

   ಆ ಬಾಲಕನ ಮುಂದೆ ಸ್ವಾತಂತ್ರ್ಯ ಹೊಂದಿಲ್ಲ

   ಸಿದ್ದು ಸಾಹೇಬ್ರೆ ಮೊದಲು ನಿಮ್ಮದನ್ನು ನೋಡಿಕೊಳ್ಳಿ. ನಿಮ್ಮ ಪಾರ್ಟಿಯೊಳಗೆ ಇನ್ನೂ ಎಷ್ಟೋ ಜನ ಆ ಬಾಲಕನ ಮುಂದೆ ಸ್ವಾತಂತ್ರ್ಯ ಹೊಂದಿಲ್ಲ. ಅದರ ಬಗ್ಗೆ ಗಮನಕೊಡಿ. ಬಟ್ಟೆ ಸುತ್ತಿ ಹೊಡೆಯೋದು ನಿಮಗೆ ಮಾತ್ರ ಬರೋದಲ್ಲಾ.. ಧರ್ಮಸ್ಥಳದಲ್ಲಿ ಅದೇನೋ ಪುಂಗಿಯೂದಿ ಹೊರಗೆ ಬಂದ ಮೇಲೆ ಗೌಡರ ಕುಟುಂಬದ ಮುಂದೆ ಬಾಲ ಮುದುಡಿ ಕೂತಿಲ್ವಾ ಎನ್ನುವ ಟ್ವೀಟ್.

   English summary
   Former Karnataka CM Siddaramaiah funny birthday wish tweet to LK Advani. Siddaramaiah tweeted, "Your guidance is required in protecting our democracy which is in grave danger, than in Marg-Darshak Mandal which do not respect your experience & seniority".
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X