ಆರು ತಿಂಗಳ ಶಿಕ್ಷೆ ನಂತರ ಜೈಲಿನಿಂದ ಹೊರ ಬಂದ ನ್ಯಾ. ಕರ್ಣನ್
ಕೋಲ್ಕತ್ತ, ಡಿಸೆಂಬರ್ 20: ಆರು ತಿಂಗಳ ಸೆರೆವಾಸದ ಬಳಿಕ ಇಂದು ಕೋಲ್ಕತ್ತ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕರ್ಣನ್ ಅವರಿಗೆ ಕಳೆದ ಮೇ 9ರಂದು 6 ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಕರ್ಣನ್ ಪೊಲೀಸರ ಕೈಗೆ ಸಿಗದೆ ಕಣ್ತಪ್ಪಿಸಿ ಓಡಾಡುತ್ತಿದ್ದರು. ನಂತರ ಅವರನ್ನು ಜೂನ್ 20ರಂದು ಕೊಯಮತ್ತೂರಿನಲ್ಲಿ ಬಂಧಿಸಲಾಗಿತ್ತು.

ಬಳಿಕ ಕರ್ಣನ್ ರನ್ನು ಕೊಲ್ಕೊತ್ತಾದ ಪ್ರೆಸಿಡೆನ್ಸಿ ಜೈಲಿಗೆ ತಳ್ಳಲಾಗಿತ್ತು. ಇಲ್ಲೇ ಅವರು 6 ತಿಂಗಳ ಜೈಲು ಶಿಕ್ಷೆ ಅನುಭವಿಸಿ ಇಂದು ಹೊರ ಬಂದಿದ್ದಾರೆ.
ಇಂದು ಕರ್ಣನ್ ಜೈಲಿನಿಂದ ಹೊರ ಬರುತ್ತಿದ್ದಂತೆ ಅವರ ಪತ್ನಿ ಸರಸ್ವತಿ ಹಾಗೂ ಹಿರಿಯ ಮಗ ಅವರನ್ನು ಸ್ವಾಗತಿಸಿದರು.
ಕರ್ಣನ್ ಜೈಲು ಶಿಕ್ಷೆ ಅನುಭವಿಸಿದ ಭಾರತದ ಇತಿಹಾಸದ ಏಕೈಕ ಹಾಲಿ ನ್ಯಾಯಮೂರ್ತಿ ಎಂಬ ಕುಖ್ಯಾತಿ ಪಡೆದಿದ್ದಾರೆ.












Click it and Unblock the Notifications