ಹರ್ಯಾಣದಲ್ಲಿ ಒಂದೇ ಗಂಟೆಯಲ್ಲಿ 6 ಕೊಲೆ ಮಾಡಿದ ಹಂತಕ ಸೆರೆ

Posted By:
Subscribe to Oneindia Kannada

ಪುಲ್ವಾಲ(ಹರ್ಯಾಣ), ಜನವರಿ, 02: ಮಾಜಿ ಸೇನಾಧಿಕಾರಿಯೊಬ್ಬರು ಕೇವಲ ಒಂದು ಗಂಟೆಯ ಅವಧಿಯಲ್ಲಿ ಆರು ಜನರನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಸಾಯಿಸಿದ ದಾರುಣ ಘಟನೆ ಹರ್ಯಾಣದ ಪುಲ್ವಾಲದಲ್ಲಿ ನಡೆದಿದೆ.

ಮಂಗಳೂರಿನಲ್ಲಿ ಮತ್ತೆ ಗ್ಯಾಂಗ್ ವಾರ್, ತಡರಾತ್ರಿ ಯುವಕನ ಬರ್ಬರ ಹತ್ಯೆ

ಘಟನೆಗೆ ಕಾರಣ ತಿಳಿದುಬಂದಿಲ್ಲ. ಹಂತಕನನ್ನು ಬಂಧಿಸಲಾಗಿದ್ದು, ಆತ ಮಾನಸಿಕ ದೌರ್ಬಲ್ಯದಿಂದ ಬಳಲುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

Former army officer in Haryana kills 6 men in an hour

ಹಂತಕನನ್ನು ನರೇಶ್ ಧಾಂಕಡ್ ಎಂದು ಗುರುತಿಸಲಾಗಿದೆ. ಈತ ಮಾಜಿ ಸೇನಾಧಿಕಾರಿಯಾಗಿದ್ದರು. ಕೆಲವರು ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು.

ಜ.2 ರ ಬೆಳಿಗ್ಗೆ 2.30 ರಿಂದ 3.30ರವರೆಗೆ ಈತ ಆರು ಕೊಲೆ ಮಾಡಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಈತ ಕಬ್ಬಿಟದ ಸಲಾಕೆ ಹಿಡಿದು ಓಡಾಡುತ್ತಿದ್ದುದು ದಾಖಲಾಗಿದೆ.

ತಡೆಯಲು ಬಂದ ಓರ್ವ ಭದ್ರತಾ ಸಿಬ್ಬಂದಿ ಮತ್ತು ರಸ್ತೆಯಲ್ಲಿದ್ದ ಓರ್ವ ಭಿಕ್ಷುಕನ್ನನ್ನೂ ಈತ ಸಾಯಿಸಿದ್ದಾನೆಂದು ಮೂಲಗಳು ತಿಳಿಸಿವೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Former army officer kills 6 people within a span of an hour in Haryana's Pulwal on Jan 2nd. police arrested the accused and suspected the man is mentally unstable.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ