Get Updates
Get notified of breaking news, exclusive insights, and must-see stories!

ದೇಶದಲ್ಲಿ ಮೊದಲ ಬಾರಿಗೆ ಪುರುಷರಿಗಿಂತ ಅಧಿಕ ಸಂಖ್ಯೆಯಲ್ಲಿ ಮಹಿಳಾ ಶಿಕ್ಷಕರು

ನವದೆಹಲಿ, ಜು.05: ಭಾರತದಲ್ಲಿ ಮೊದಲ ಬಾರಿಗೆ ಮಹಿಳಾ ಶಾಲಾ ಶಿಕ್ಷಕರು ತಮ್ಮ ಪುರುಷ ಸಹವರ್ತಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು 2019-20ರ ಶಾಲಾ ಶಿಕ್ಷಣದ ಏಕೀಕೃತ ಜಿಲ್ಲಾ ಮಾಹಿತಿ ವರದಿಯಲ್ಲಿ ತಿಳಿಸಲಾಗಿದೆ. ದೇಶದ 96.8 ಲಕ್ಷ ಶಿಕ್ಷಕರಲ್ಲಿ 49.2 ಲಕ್ಷ ಶಿಕ್ಷಕರು ಮಹಿಳೆಯರಾಗಿದ್ದಾರೆ.

2012-13ರಲ್ಲಿ, ಭಾರತದಾದ್ಯಂತ 42.4 ಲಕ್ಷ ಪುರುಷ ಶಿಕ್ಷಕರಿದ್ದರೆ, 35.8 ಲಕ್ಷ ಮಹಿಳಾ ಶಿಕ್ಷಕರು ಇದ್ದರು. ಇದು ಏಳು ವರ್ಷಗಳಲ್ಲಿ ಮಹಿಳಾ ಶಿಕ್ಷಕರ ಸಂಖ್ಯೆ ಶೇ.37 ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಪುರುಷ ಶಿಕ್ಷಕರ ಸಂಖ್ಯೆ 42.4 ಲಕ್ಷದಿಂದ 47.7 ಲಕ್ಷಕ್ಕೆ ಏರಿದೆ.

ಆದರೆ ಇದು ಪ್ರಾಥಮಿಕ ಹಂತದಲ್ಲಿ ಆಗಿದೆ. ಉನ್ನತ ಶಿಕ್ಷಣದ ಶಿಕ್ಷಕರಲ್ಲಿ ಪುರುಷ ಶಿಕ್ಷಕರ ಸಂಖ್ಯೆ ಮಹಿಳಾ ಶಿಕ್ಷಕರಿಗಿಂತ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

 ಕರ್ನಾಟಕದಲ್ಲಿ ಎಷ್ಟು?

ಕರ್ನಾಟಕದಲ್ಲಿ ಎಷ್ಟು?

ಮಹಿಳಾ ಶಿಕ್ಷಕರು ಪ್ರಾಥಮಿಕ ಶಿಕ್ಷಣದಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಪ್ರೌಢ ಶಿಕ್ಷಣದಲ್ಲಿ ಪುರುಷ ಶಿಕ್ಷಕರ ಸಂಖ್ಯೆ ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಪೂರ್ವ ಪ್ರಾಥಮಿಕ ಹಂತದಲ್ಲಿ, 27,000 ಪುರುಷ ಶಿಕ್ಷಕರು ಇದ್ದರೆ, 1 ಲಕ್ಷ ಮಹಿಳಾ ಶಿಕ್ಷಕರಿದ್ದಾರೆ. ಕರ್ನಾಟಕದಲ್ಲಿ, 4,50,592 ಶಿಕ್ಷಕರಲ್ಲಿ ಶೇ.57 ಅಂದರೆ 2,57,790 ಶಿಕ್ಷಕರು ಮಹಿಳೆಯರಾಗಿದ್ದಾರೆ.

 ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಹೆಚ್ಚಿನ ಪುರುಷ ಶಿಕ್ಷಕರು

ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಹೆಚ್ಚಿನ ಪುರುಷ ಶಿಕ್ಷಕರು

ಪ್ರಾಥಮಿಕ ಶ್ರೇಣಿಗಳಲ್ಲಿ ಈ ಅನುಪಾತವು ಹೆಚ್ಚು ಸಮತೋಲಿತವಾಗಿದ್ದು, 19.6 ಲಕ್ಷ ಮಹಿಳೆಯರು ಮತ್ತು 15.7 ಲಕ್ಷ ಪುರುಷ ಶಿಕ್ಷಕರು ಇದ್ದಾರೆ. ಪ್ರಾಥಮಿಕ ತರಗತಿಗಳಲ್ಲಿ 11.5 ಲಕ್ಷ ಪುರುಷರು ಮತ್ತು 10.6 ಲಕ್ಷ ಮಹಿಳಾ ಶಿಕ್ಷಕರಿದ್ದಾರೆ. ಬಳಿಕ ಶಿಕ್ಷಣದ ಎಲ್ಲಾ ಹಂತದಲ್ಲಿಯೂ ಈ ಅಂತರವು ವಿರೋಧಭಾಸವಾಗಿದೆ. ಮಾಧ್ಯಮಿಕ ಶಾಲೆಗಳಲ್ಲಿ 6.3 ಲಕ್ಷ ಪುರುಷರು ಮತ್ತು 5.2 ಲಕ್ಷ ಮಹಿಳಾ ಶಿಕ್ಷಕರಿದ್ದಾರೆ. ಹೈಯರ್ ಸೆಕೆಂಡರಿಯಲ್ಲಿ, 3.7 ಲಕ್ಷ ಪುರುಷರು ಮತ್ತು 2.8 ಲಕ್ಷ ಮಹಿಳಾ ಶಿಕ್ಷಕರಿದ್ದಾರೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪುರುಷ ಶಿಕ್ಷಕರ ಸಂಖ್ಯೆ ಹೆಚ್ಚಿದ್ದರೆ, ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಮಹಿಳಾ ಶಿಕ್ಷಕರು ಮುಂದಿದ್ದಾರೆ.

 ಕೇರಳ, ದೆಹಲಿಯಲ್ಲಿ ಮಹಿಳಾ ಶಿಕ್ಷಕರು ಅಧಿಕ

ಕೇರಳ, ದೆಹಲಿಯಲ್ಲಿ ಮಹಿಳಾ ಶಿಕ್ಷಕರು ಅಧಿಕ

ಪುರುಷ ಶಿಕ್ಷಕರು ಹೆಚ್ಚಿನ ಶ್ರೇಣಿಗಳಲ್ಲಿ ಮಹಿಳೆಯರನ್ನು ಮೀರಿಸುವ ಪ್ರವೃತ್ತಿ ರಾಜ್ಯಗಳಲ್ಲಿ ಕಂಡುಬರುತ್ತಿದೆ. ಆದರೆ ಕೇರಳ, ದೆಹಲಿ, ಮೇಘಾಲಯ, ಪಂಜಾಬ್ ಮತ್ತು ತಮಿಳುನಾಡಿನಲ್ಲಿ ಮಹಿಳಾ ಶಿಕ್ಷಕರೇ ಮೇಲುಗೈ ಸಾಧಿಸಿದ್ದಾರೆ. ಇಲ್ಲಿ ದ್ವಿತೀಯ ಮತ್ತು ಉನ್ನತ ಮಾಧ್ಯಮಿಕ ತರಗತಿಗಳಲ್ಲೂ ಪುರುಷರಿಗಿಂತ ಮಹಿಳಾ ಶಿಕ್ಷಕರ ಸಂಖ್ಯೆಯೇ ಅಧಿಕವಾಗಿದೆ.

 ಪ್ರಾಥಮಿಕ ತರಗತಿಗೆ ಮಹಿಳೆಯರಿಗೆ ಆದ್ಯತೆ

ಪ್ರಾಥಮಿಕ ತರಗತಿಗೆ ಮಹಿಳೆಯರಿಗೆ ಆದ್ಯತೆ

''ಮಕ್ಕಳು ಪುರುಷ ಮತ್ತು ಸ್ತ್ರೀ ಎರಡೂ ದೃಷ್ಟಿಕೋನದಿಂದ ಕಲಿಯಬೇಕಾಗಿದೆ. ಕಿರಿಯ ತರಗತಿಗಳಲ್ಲಿ, ಭಾರತದ ಅನೇಕ ಶಾಲೆಗಳು ಮಹಿಳಾ ಶಿಕ್ಷಕರಿಗೆ ಆದ್ಯತೆ ನೀಡುತ್ತವೆ. ಏಕೆಂದರೆ ಆ ವಯಸ್ಸಿನ ಮಕ್ಕಳಿಗೆ ಹೆಚ್ಚು ಪೋಷಣೆ ಅಗತ್ಯ. ಆದರೆ ಪುರುಷ ಶಿಕ್ಷಕರೂ ಪೋಷಣೆಯನ್ನು ಮಾಡಬಲ್ಲರು ಎಂದು ನಾನು ಭಾವಿಸುತ್ತೇನೆ. ಇಲ್ಲದಿದ್ದರೆ, ನಾವು ಮಹಿಳಾ ಶಿಕ್ಷಕರ ಪರವಾಗಿ ಲಿಂಗ ಪಕ್ಷಪಾತವನ್ನು ಪ್ರದರ್ಶಿಸುತ್ತಿದ್ದೇವೆ ಎಂದು ಆಗುತ್ತದೆ,'' ಎಂದು ಟೀಚರ್ ಫೌಂಡೇಶನ್‌ನ ಸ್ಥಾಪಕ ನಿರ್ದೇಶಕಿ ಮಾಯಾ ಮೆನನ್ ಹೇಳಿದ್ದಾರೆ.

 ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ನಡುವೆ ಭೇದಾತ್ಮಕ ಸಂಬಳ

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ನಡುವೆ ಭೇದಾತ್ಮಕ ಸಂಬಳ

ಮಾಯಾ ಮೆನನ್ಉನ್ನತ ತರಗತಿಗಳಲ್ಲಿ, ಸಾಂಪ್ರದಾಯಿಕವಾಗಿ ಪುರುಷ ಮತ್ತು ಮಹಿಳಾ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ. ಭಾರತದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ನಡುವೆ ಭೇದಾತ್ಮಕ ಸಂಬಳವಿದೆ. ಇತರ ದೇಶಗಳಲ್ಲಿ ಈ ರೀತಿಯಾಗಿಲ್ಲ. ಎಲ್ಲಾ ಶಿಕ್ಷಕರು ತಾವು ಕಲಿಸುವ ಮಟ್ಟವನ್ನು ಲೆಕ್ಕಿಸದೆ ಒಂದೇ ರೀತಿಯ ಅರ್ಹತೆಗಳ ಅಗತ್ಯವಿರುತ್ತದೆ. ಇದೇ ರೀತಿಯ ವೇತನವನ್ನು ನೀಡಬೇಕಾಗಿದೆ. ಭಾರತದ ಪುರುಷ ಶಿಕ್ಷಕರು ಮಾಧ್ಯಮಿಕ ಶಾಲೆಯಲ್ಲಿ ಕಲಿಸಲು ಬಯಸುತ್ತಾರೆ. ಅವರು ಹೆಚ್ಚು ಸಂಬಳ ಪಡೆಯಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ,'' ಎಂದು ಮಾಯಾ ಮೆನನ್ ತಿಳಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+