ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ರಾಜ್ಯಗಳಲ್ಲಿ ಮುಂದಿನ 5 ದಿನ ಮಂಜು ಮತ್ತು ಶೀತ ಅಲೆ ಎಚ್ಚರಿಕೆ: ಐಎಂಡಿ

|
Google Oneindia Kannada News

ಉತ್ತರ ಭಾರತದಲ್ಲಿ ದಟ್ಟ ಮಂಜು ಮತ್ತು ಚಳಿ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೊತೆಗೆ ಕಾಶ್ಮೀರ ಮತ್ತು ಹಿಮಾಚಲದಲ್ಲಿ ಹಿಮಪಾತವಾಗಬಹುದು ಎಂದಿದೆ. ಈ ಕಾರಣದಿಂದಾಗಿ ಸುತ್ತಲ ಪ್ರದೇಶ ತುಂಬಾ ತಂಪಾಗಿರಲಿದ್ದು ಮುನ್ನೆಚ್ಚರಿಕೆ ಕ್ರಮವನ್ನು ವಹಿಸುವಂತೆ ಸೂಚನೆ ನೀಡಿದೆ.

ಮುಂದಿನ 5 ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ಬಿಹಾರ, ಹಿಮಾಚಲ ಪ್ರದೇಶ, ಪಂಜಾಬ್‌ನ ಬಯಲು ಪ್ರದೇಶಗಳಲ್ಲಿ ಮುಂದಿನ 4-5 ದಿನಗಳಲ್ಲಿ ದಟ್ಟವಾದ ಮಂಜು ಕವಿದಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಇತ್ತೀಚಿನ ನವೀಕರಣದಲ್ಲಿ ತಿಳಿಸಿದೆ. ಹರ್ಯಾಣ, ಚಂಡೀಗಢ ಮತ್ತು ಉತ್ತರ ರಾಜಸ್ಥಾನದಲ್ಲಿ ಚಳಿಗಾಳಿ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಈಗಾಗಲೇ ದೆಹಲಿಯಲ್ಲಿ ಮುಂದಿನ ಎರಡು ದಿನಗಳವರೆಗೆ ಕೋಲ್ಡ್ ವೇವ್ ಅಲರ್ಟ್ ನೀಡಲಾಗಿದ್ದು, ಇದನ್ನು ಈಗ ವಿಸ್ತರಿಸಲಾಗಿದೆ.

ಉತ್ತರ ಭಾರತದಲ್ಲಿ ದಟ್ಟವಾದ ಮಂಜು: 100 ವಿಮಾನಗಳು ಸ್ಥಗಿತಉತ್ತರ ಭಾರತದಲ್ಲಿ ದಟ್ಟವಾದ ಮಂಜು: 100 ವಿಮಾನಗಳು ಸ್ಥಗಿತ

Fog and cold wave warning for next 5 days in these states

ಕಾಶ್ಮೀರದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಕಾಶ್ಮೀರದಲ್ಲಿ ಹಿಮಪಾತವಾಗಿದ್ದು ಬಿಳಿ ಹಾಳೆಯಂತೆ ಹಲವು ಪ್ರದೇಶಗಳು ಕಾಣ ಸಿಗುತ್ತಿವೆ. ಚಳಿಗೆ ದಾಲ್ ಸರೋವರ ಹೆಪ್ಪುಗಟ್ಟಿದೆ ಮತ್ತು ಕೆಲವು ಪ್ರದೇಶಗಳಲ್ಲಿ ಪಾದರಸವು ಮೈನಸ್ ತಲುಪಿದೆ. ಆದರೆ ಲಡಾಖ್‌ನಲ್ಲಿ ಇಂದು ಕನಿಷ್ಠ ತಾಪಮಾನ -25.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಸಿಯಾಚಿನ್‌ನಲ್ಲಿ ಪಾದರಸ -30 ಡಿಗ್ರಿಗಿಂತ ಕಡಿಮೆಯಿದೆ. ಲೇಹ್ ಮತ್ತು ಕಾರ್ಗಿಲ್‌ನಲ್ಲಿ -15 ಡಿಗ್ರಿಗಿಂತ ಕಡಿಮೆ ತಾಪಮಾನವಿದೆ. ಚಿಲ್ಲೈ ಕಾಲನ್‌ನಿಂದಾಗಿ, ಕಾಶ್ಮೀರದಲ್ಲಿ ತೀವ್ರ ಚಳಿ ಇದೆ. ಅದು ಸದ್ಯಕ್ಕೆ ಮುಂದುವರಿಯುತ್ತದೆ.

English summary
Meteorological department has issued fog and cold wave warning for next 5 days in these states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X