ಐದು ರಾಜ್ಯಗಳ ಚುನಾವಣಾಪೂರ್ವ ಸಮೀಕ್ಷೆ, ಎಲ್ಲಿ ಯಾರು?
ನವದೆಹಲಿ, ಜ 21: ಚುನಾವಣಾಪೂರ್ವ ಸಮೀಕ್ಷೆಗಳನ್ನು ನಿಷೇಧಿಸ ಬೇಕೆನ್ನುವ ಚುನಾವಣಾ ಆಯೋಗದ ಚಿಂತನೆಯ ನಡುವೆ ಲೋಕನೀತಿ ಮತ್ತು ಐಬಿಎನ್ ಜಂಟಿಯಾಗಿ ಮತ್ತೊಂದು ಸಮೀಕ್ಷೆ ನಡೆಸಿದೆ.
ಲೋಕನೀತಿ ಮತ್ತು ಐಬಿಎನ್ ನ್ಯಾಷನಲ್ ಇಲೆಕ್ಷನ್ ಟ್ರ್ಯಾಕರ್ ಐದು ರಾಜ್ಯಗಳಲ್ಲಿ ಸಮೀಕ್ಷೆಯೊಂದನ್ನು ನಡೆಸಿದೆ. ಬಿಹಾರ, ಜಾರ್ಖಂಡ್, ಅಸ್ಸಾಂ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆಯ ಮುನ್ನ ಮತದಾರರ ನಾಡಿಮಿಡಿತ ಅರಿಯುವ ಸಮೀಕ್ಷೆ ನಡೆಸಿದೆ.
ಸಮೀಕ್ಷೆಯ ಪ್ರಕಾರ, ಬಿಹಾರದ ಪಾಟ್ನಾದಲ್ಲಿ ನಡೆದ ಹೂಂಕಾರ್ ಸಾರ್ವಜನಿಕ ಸಭೆ, ಅಲ್ಲಿ ನಡೆದ ಬಾಂಬ್ ಸ್ಫೋಟದ ನಂತರ ಬಿಜೆಪಿ ಜನಪ್ರಿಯತೆ ಉತ್ತುಂಗಕ್ಕೇರಿದೆ. ನರೇಂದ್ರ ಮೋದಿ ಹವಾ ಬಿಜೆಪಿಗೆ ಅನುಕೂಲಕರವಾಗಿ ಪರಿಣಮಿಸಲಿದೆ. (ಸಮೀಕ್ಷೆ: ಕೇಜ್ರಿವಾಲ್ ಗೆ ಮೋದಿ ನಂತರದ ಸ್ಥಾನ)
2009ರಲ್ಲಿ ಬಿಜೆಪಿ ಶೇ.14 ಮತ ಪಡೆದಿದ್ದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ.39 ಮತ ಪಡೆಯುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತದೆ ಸಮೀಕ್ಷೆ. ಅತ್ತ ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ಶೇ. 4ರಷ್ಟು ಮತಗಳ ಹಿನ್ನಡೆಯಾಗಲಿದೆ ಎನ್ನುತ್ತದೆ ಸಮೀಕ್ಷೆ.
ಸಮೀಕ್ಷೆಯ ಪ್ರಕಾರ ಐದು ರಾಜ್ಯಗಳಲ್ಲಿ ಪಕ್ಷಗಳು ಪಡೆಯಬಹುದಾದ ಸ್ಥಾನಗಳು ಎಷ್ಟು? ಸ್ಲೈಡಿನಲ್ಲಿ....

ಜಾರ್ಖಂಡ್ (ಒಟ್ಟು ಸ್ಥಾನಗಳು 14)
ಜನವರಿ 2014ರಲ್ಲಿ ಒಂದು ವೇಳೆ ಚುನಾವಣೆ ನಡೆದರೆ ಬಿಜೆಪಿ ಅಂದಾಜು 5 - 7 ಸ್ಥಾನವನ್ನು, ಕಾಂಗ್ರೆಸ್ 2 - 3 ಸ್ಥಾನ, ಶಿಬು ಸೊರೆನ್ ಅವರ ಜೆಎಂಎಂ 1 - 2 ಸ್ಥಾನವನ್ನು ಮತ್ತು ಬಾಬುಲಾಲ್ ಮರಾಂಡಿ ಅವರ ಜಾರ್ಖಂಡ್ ವಿಕಾಸ್ ಮೋರ್ಚಾ 1 - 2 ಸ್ಥಾನವನ್ನು ಪಡೆಯ ಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಪಶ್ಚಿಮ ಬಂಗಾಳ (ಒಟ್ಟು ಸ್ಥಾನಗಳು 42)
ತಕ್ಷಣ ಚುನಾವಣೆ ನಡೆದರೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ 20-28, ಲೆಫ್ಟ್ ಫ್ರಂಟ್ 7 - 13, ಕಾಂಗ್ರೆಸ್ 5 - 9 ಮತ್ತು ಬಿಜೆಪಿ 0-2 ಸ್ಥಾನವನ್ನು ಪಡೆಯಬಹುದು ಎಂದು ಸಮೀಕ್ಷೆಯಲ್ಲಿ ಹೇಳಿದೆ.

ಒರಿಸ್ಸಾ (ಒಟ್ಟು ಸ್ಥಾನಗಳು 21)
ಸಮೀಕ್ಷೆಯನ್ವಯ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ತನ್ನ ಮುನ್ನಡೆಯನ್ನು ಕಾಯ್ದಿರಿಸಿ ಕೊಳ್ಳಲಿದೆ. ಪಕ್ಷ 10 - 16 ಸ್ಥಾನ ಗೆಲ್ಲುವ ಸಾಧ್ಯತೆಯಿದೆ. ಕಾಂಗ್ರೆಸ್ 3 - 9 ಸ್ಥಾನವನ್ನು ಮತ್ತು ಬಿಜೆಪಿ 0 - 4 ಸ್ಥಾನವನ್ನು ಪಡೆಯಬಹುದು.

ಬಿಹಾರ (ಒಟ್ಟು ಸ್ಥಾನಗಳು 40)
ಸಮೀಕ್ಷೆ ಪ್ರಕಾರ ನಿತೀಶ್ ಕುಮಾರಿಗೆ ಬಿಹಾರದಲ್ಲಿ ಹಿನ್ನಡೆಯಾಗಲಿದೆ. ಇಲ್ಲಿ ಬಿಜೆಪಿ 16 - 24 ಸ್ಥಾನವನ್ನು, ಜೆಡಿಯು 7 - 13 ಸ್ಥಾನವನ್ನು ಮತ್ತು ಲಾಲೂ ಪ್ರಸಾದ್ ಅವರ
RJD 6 - 10 ಸ್ಥಾನವನ್ನು ಪಡೆಯ ಬಹುದು.

ಅಸ್ಸಾಂ (ಒಟ್ಟು ಸ್ಥಾನಗಳು 14)
ಅಸ್ಸಾಂನಲ್ಲಿ ಕಾಂಗ್ರೆಸ್ಸಿಗೆ ಹೆಚ್ಚಿನ ಲಾಭವಾಗಲಿದೆ. ಪಕ್ಷ 6 - 8 ಸ್ಥಾನವನ್ನು, ಬಿಜೆಪಿ 3 - 4 ಸ್ಥಾನವನ್ನು, ಅಸ್ಸಾಂ ಗಣ ಪರಿಷತ್ 1 - 2 ಸ್ಥಾನವನ್ನು ಮತ್ತು AIUDF 0 - 1 ಸ್ಥಾನವನ್ನು ಪಡೆಯಬಹುದೆಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.












Click it and Unblock the Notifications