ಪಾಕ್ ಉಗ್ರರಿಂದ ಮತ್ತೆ ದಾಳಿ, ಐವರು ಬಿಎಸ್ಎಫ್ ಜವಾನರಿಗೆ ಗಾಯ

ನವದೆಹಲಿ, ಅಕ್ಟೋಬರ್ 29 : ಭಾರತೀಯ ಸೇನೆಯ ಖಡಕ್ ಎಚ್ಚರಿಕೆಯಿಂದಾಗಲಿ, ಮಾಡಲಾಗಿರುವ ಮಿನಿ ಸರ್ಜಿಕಲ್ ಸ್ಟ್ರೈಕ್ ನಿಂದಾಗಲಿ, ಏರುತ್ತಿರುವ ಪಾಕ್ ಬೆಂಬಲಿತ ಉಗ್ರರ ಹತ್ಯೆಯಿಂದಾಗಲಿ ಪಾಕಿಸ್ತಾನ ಬುದ್ಧಿ ಕಲಿಯುವಂತೆ ಕಾಣಿಸುತ್ತಿಲ್ಲ.

ಶ್ರೀನಗರದ ಹೊರವಲಯದಲ್ಲಿರುವ ಪಂಥ ಚೌಕ್ ಎಂಬಲ್ಲಿ ಭಾರತದ ಗಡಿ ಭದ್ರತಾ ಸೇನೆಗೆ ಸೇರಿದೆ ವಾಹನದ ಮೇಲೆ ಅಪ್ರಚೋದಿತ ದಾಳಿ ಮಾಡಿದ್ದರಿಂದಾಗಿ ಐವರು ಜವಾನರು ಗಾಯಗೊಂಡಿದ್ದಾರೆ. ಇದು ಭಾರತ ನಡೆಸಿದ ಮಿನಿ ಸರ್ಜಿಕಲ್ ಸ್ಟ್ರೈಕ್ ಕೆಲವೇ ಗಂಟೆಗಳಲ್ಲಿ ನಡೆದಿದೆ.

ಅಕ್ಟೋಬರ್ 23ರಂದು ಪೂಂಛ್ ಮತ್ತು ಝಲ್ಲಾಸ್ ಪ್ರದೇಶದಲ್ಲಿ ನಾಗರಿಕರ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ, ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಪಾಕಿಸ್ತಾನದ ಸೇನೆಯ ಆಡಳಿತಾತ್ಮಕ ಹೆಡ್ ಕ್ವಾರ್ಟರ್ ಮೇಲೆ ಭಾರತೀಯ ಸೇನೆ ತೀವ್ರ ದಾಳಿ ನಡೆಸಿದೆ.

Five BSF jawans injured after terrorists attack

ಈ ದಾಳಿಯ ಸಮಯದಲ್ಲಿ ಪಾಕ್ ಗಡಿಯಲ್ಲಿರುವ ಹಜಿರಾ, ನಿಕಿಯಲ್ ಮತ್ತು ಸಮಾನಿ ಮುಂತಾದ ಗ್ರಾಮದಲ್ಲಿರುವ ಜನರಿಗೆ ಯಾವುದೇ ತೊಂದರೆಯಾಗದಂತೆ, ಪಾಕ್ ಸೇನೆಯ ಆಡಳಿತಾತ್ಮಕ ಕೇಂದ್ರದ ಮೇಲೆ ದಾಳಿ ನಡೆಸಲಾಗಿದೆ. ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಮಿನಿ ಸರ್ಜಿಕಲ್ ಸ್ಟ್ರೈಕ್ ನಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕಾಣಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+