PM Modi 3.0: ಕೇರಳದ ಒಬ್ಬ ಬಿಜೆಪಿ ಕೇಂದ್ರ ಸಚಿವ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸ್ಥಾನಕ್ಕೆ ಗುಡ್‌ಬೈ?

ಭಾನುವಾರ ದೇಶದ ಪ್ರಧಾನಿ ಆಗಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರ ಮಾಡಿದ್ದಾರೆ. ಈ ಸಮಾರಂಭದಲ್ಲಿ ದೇಶ ವಿದೇಶದ ಹಲವು ಗಣ್ಯರು ಭಾಗವಹಿಸಿದ್ದರು. ಅಲ್ಲದೆ ಎನ್‌ಡಿಎ ಮೈತ್ರಿಕೂಟದ ಸಂಸದರೂ ಸಹ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವಿನ ನಗೆ ಬೀರಿದೆ. ಈ ಬಾರಿ ತಿಸಾರ ಕ್ಷೇತ್ರದಿಂದ ಬಿಜೆಪಿ ಟಿಕೆಟೆ ಪಡೆದಿದ್ದ ನಟ ಸುರೇಶ್‌ ಗೋಪಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇವರು ತಮ್ಮ ಪ್ರತಿ ಸ್ಪರ್ಧಿ ಸಿಪಿಐನ ವಿಎಸ್‌ ಸುನಿಲ್‌ ಕುಮಾರ್‌ ಅವರನ್ನು 74686 ಮತಗಳಿಂದ ಮಣಿಸಿ ಜಯ ಸಾಧಿಸಿದರು. ಕೇರಳದಲ್ಲಿ ಬಿಜೆಪಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸುರೇಶ್ ಗೋಪಿ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ.

First-Time Union Minister Suresh Gopi Declined Cabinet Position

ಸಚಿವ ಸುರೇಶ್‌ ಗೋಪಿ ತಮ್ಮ ಸ್ಥಾನವನ್ನು ಸದ್ಯದಲ್ಲಿ ತೊರೆಯುವುದಾಗಿ ಭಾನುವಾರ ನೀಡಿದ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ವಾಹಿನಿಯೊಂದರ ಜೊತೆ ಮಾತನಾಡಿದ ಅವರು, ಶೀಘ್ರವೇ ಆ ಹುದ್ದೆಯಿಂದ ಮುಕ್ತಿ ಸಿಗಲಿದೆ ಎಂಬ ಭಾವನೆ ಮೂಡಿದೆ.

ಸ್ಥಾನ ತ್ಯಜಿಸಲು ಕಾರಣ ಏನು?

ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ ಎಂದು ಸುರೇಶ್ ಹೇಳಿದ್ದಾರೆ. ಅಲ್ಲದೆ ಇನ್ನು ನನ್ನ ಕೈಯಲ್ಲಿ ಹಲವು ಚಿತ್ರಗಳು ಇವೆ. ಈಗಾಗಲೇ ನಾನು ಚಿತ್ರಗಳಿಗೆ ಸಹಿ ಮಾಡಿದ್ದೇನೆ. ಅವುಗಳನ್ನು ನಾನು ಪೂರ್ಣಗೊಳಿಸಬೇಕಿ. ಅಲ್ಲದೆ ತ್ರಿಶೂರ್ ಸಂಸದನಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಸುರೇಶ್ ಗೋಪಿ ಅವರು ಸಂಸದರಾಗಿ ತಮ್ಮ ಕ್ಷೇತ್ರಕ್ಕೆ ದುಡಿಯಲು ಬಯಸಿದ್ದು, ಸಚಿವ ಸ್ಥಾನದ ಅವಶ್ಯಕತೆ ಇಲ್ಲ ಎಂದರು. ತಾವು ಈ ಹುದ್ದೆಯನ್ನು ಕೇಳಿಲ್ಲ ಎಂದ ಹೇಳಿದ್ದಾರೆ. ಶೀಘ್ರವೇ ಈ ಹುದ್ದೆಯಿಂದ ಕೆಳಗಿಳಿಯುವುದಾಗಿ ತಿಳಿಸಿದ್ದಾರೆ. ಯಾವುದೇ ಬೆಲೆ ತೆತ್ತಾದರೂ ತಮ್ಮ ಸಿನಿಮಾಗಳನ್ನು ಮಾಡಲು ಇಚ್ಛಿಸುತ್ತೇನೆ ಮತ್ತು ತ್ರಿಶೂರ್ ಜನರಿಗಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಕೇಳರದಲ್ಲಿರುವ ಒಟ್ಟು 20 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ 14, ಇಂಡಿಯನ್ ಯೂನಿಯನ್‌ ಮುಸ್ಲಿಂ ಲೀಗ್ 2, ಸಿಪಿಐ (ಎಂ), ಬಿಜೆಪಿ, ಕೆಇಸಿ, ಆರ್‌ಎಸ್‌ಪಿ ತಲಾ ಒಂದು ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+