ಪಟಾಕಿ ದುರಂತ: ವಡೋದರಾದಲ್ಲಿ ಬೆಂಕಿಗೆ 8 ಜನ ಬಲಿ
ವಡೋದರಾ(ಗುಜರಾತ್), ಅಕ್ಟೋಬರ್ 29: ವಡೋದರಾ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಪಟಾಕಿ ಅಂಗಡಿಯಲ್ಲಿ ಅಗ್ನಿ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, ಐವರಿಗೆ ತೀವ್ರಗಾಯಗಳಾಗಿವೆ.
ವಡೋದರಾದ ವಘೋಡಿಯಾ ತಾಲೂಕಿನ ರುಸ್ತಂಪುರ ಗ್ರಾಮದ ಪಟಾಕಿ ಅಂಗಡಿಯೊಂದರಲ್ಲಿ ಈ ದುರಂತ ಸಂಭವಿಸಿದೆ. ಈ ಅಂಗಡಿಯ ಪಕ್ಕದಲ್ಲಿದ್ದ ಇತರೆ ಅಂಗಡಿಯೂ ಬೆಂಕಿ ವ್ಯಾಪಿಸಿದ್ದರಿಂದ ಬೆಂಕಿ ನಂದಿಸುವುದು ತಡವಾಯಿತು.

ಪಟಾಕಿ ಅಂಗಡಿ ಪಕ್ಕದಲ್ಲೇ ಟೈರ್ ಅಂಗಡಿ ಇದೆ. ಬೆಂಕಿ ಹೊತ್ತಿಕೊಂಡ ಬಳಿಕ ದಟ್ಟವಾದ ಹೊಗೆ ಆಕ್ರಮಿಸಿ ಉಸಿರುಗಟ್ಟಿಸುವ ವಾತಾವರಣ ಉಂಟಾಯಿತು. 8 ಜನರ ಶವವನ್ನು ಹೊರಕ್ಕೆ ತೆಗೆಯಲಾಗಿದೆ. 5 ಜನರನ್ನು ರಕ್ಷಿಸಿ, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಘೋಡಿಯಾದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಯಶ್ವಂತ್ ಚೌಹಣ್ ಹೇಳಿದರು. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಲೋಚನ್ ಸೆಹ್ರಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications