• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಡಿಶಾ ಸಿಎಂ ಖಾಸಗಿ ಕಾರ್ಯದರ್ಶಿಗೆ FIH ಅಧ್ಯಕ್ಷರ ಗೌರವ

|

ಭುವನೇಶ್ವರ, ಮೇ 24: ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿ ಐಎಎಸ್ ಅಧಿಕಾರಿ ವಿ ಕಾರ್ತಿಕೇಯನ್ ಪಾಂಡಿಯನ್‌ಗೆ ಅಂತಾರಾಷ್ಟೀಯ ಹಾಕಿ ಫೆಡರೇಷನ್( ಎಫ್‌ಐಹೆಚ್) ಅಧ್ಯಕ್ಷರ ಗೌರವ ಲಭಿಸಿದೆ. ಭಾನುವಾರದಂದು ನಡೆದ ಎಫ್ಐಎಚ್ ಕಾಂಗ್ರೆಸ್ ಸಮಾರಂಭದಲ್ಲಿ ಪಾಂಡಿಯನ್‌ಗೆ ಗೌರವ ನೀಡಿ ಸನ್ಮಾನಿಸಲಾಗಿದೆ.

ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಕ್ರೀಡಾಪಟುವಾಗಿದ್ದ ಪಾಂಡಿಯನ್ ಅವರು ತಮಗೆ ದೊರೆದ ಗೌರವದ ಬಗ್ಗೆ ಸಂತಸ ವ್ಯಕ್ತಪಡಿಸಿ, "ನನಗೆ ನಿಜಕ್ಕೂ ಸಂತೋಷವಾಗಿದೆ. ಕ್ರೀಡೆಗಳ ಬಗ್ಗೆ ನಾನು ಯಾವಾಗಲೂ ಪ್ರೀತಿಯನ್ನು ಹೊಂದಿದ್ದೇನೆ. ನಮ್ಮ ತಂಡದ ಸಹಕಾರವೇ ಇದೆಲ್ಲವನ್ನು ಸಾಧ್ಯವಾಗಿಸಿದೆ. ಈ ಪ್ರಶಸ್ತಿ ಭಾರತೀಯ ಕ್ರೀಡೆಗಳಿಗೆ ಹೆಚ್ಚಿನ ಕೊಡುಗೆ ನೀಡಲು ನನ್ನನ್ನು ಪ್ರೇರೇಪಿಸುತ್ತದೆ. 2018 ರಲ್ಲಿ ಭುವನೇಶ್ವರದಲ್ಲಿ ನಡೆದ ಪುರುಷರ [ಹಾಕಿ] ವಿಶ್ವಕಪ್‌ಗಾಗಿ ನಾವು ಮಾಡಿದ ಕೆಲಸವೇ ಈ ಪ್ರಶಸ್ತಿಗೆ ಕಾರಣ ಎಂದು ನಾನು ನಂಬುತ್ತೇನೆ. ಖಂಡಿತವಾಗಿಯೂ, ನಮ್ಮ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಪ್ರೋತ್ಸಾಹವಿಲ್ಲದೆ ಪ್ರಶಸ್ತಿ ಸಾಧ್ಯವಾಗುತ್ತಿರಲಿಲ್ಲ'' ಎಂದು ಸಿಎಂನ ಪರಿವರ್ತನೆ ಮತ್ತು ಉಪಕ್ರಮಗಳ (5 ಟಿಎಸ್) ಕಾರ್ಯದರ್ಶಿಯೂ ಆಗಿರುವ ಪಾಂಡಿಯನ್ ಹೇಳಿದರು.

ಮಧುರೈನಲ್ಲಿ ಜನಿಸಿದ ಪಾಂಡಿಯನ್ 800 ಮೀ ಮತ್ತು 1500 ಮೀಟರ್ ಓಟದಲ್ಲಿ ವಿಶ್ವವಿದ್ಯಾಲಯದ ಚಾಂಪಿಯನ್ ಆಗಿದ್ದರು. ನೇವೇಲಿಯಲ್ಲಿ ಪ್ರೌಢಶಾಲೆವ್ಯಾಸಂಗ ಮಾಡಿದ್ದಲ್ಲದೆ, ಅಲ್ಲೇ ಕ್ರೀಡಾ ಹಾಸ್ಟೆಲ್‌ನಲ್ಲಿದ್ದರು. ಮಧುರೈನ ಕೃಷಿ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪದವಿ (ಬಿಎಸ್ಸಿ) ಮತ್ತು ದೆಹಲಿಯ ಹೆಸರಾಂತ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ ನಾಗರಿಕ ಸೇವಾ ಪರೀಕ್ಷೆ ಐಎಎಸ್ ಪಾಸಾಗಿದ್ದಾರೆ.

ಕ್ರೀಡೆಗೆ ಒಡಿಶಾ ರಾಜ್ಯದ ಕೊಡುಗೆ ಬಗ್ಗೆ ವಿವರಿಸಿದ ಪಾಂಡಿಯನ್, ವೇಟ್‌ಲಿಫ್ಟಿಂಗ್, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಈಜು ಮತ್ತು ಹಾಕಿಯಲ್ಲಿ ಉನ್ನತ ಸಾಧನೆ ಹೊಂದಿರುವ ದೇಶದ ಏಕೈಕ ರಾಜ್ಯ ಒಡಿಶಾ ಎಂದಿದ್ದಾರೆ. ಕಾರ್ಪೊರೇಟ್ ಪ್ರಾಯೋಜಕರೊಂದಿಗೆ ಹೊಂದಾಣಿಕೆ ಹೊಂದಿದೆ ಎಂದರು.

ದೇಹದಾರ್ಢ್ಯತೆ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ಪಾಂಡಿಯನ್ ಕಠಿಣ ಫಿಟ್ನೆಸ್ ಕಟ್ಟುಪಾಡುಗಳನ್ನು ಅನುಸರಿಸುತ್ತಿದ್ದು, ಪ್ರತಿ ದಿನ ಬೆಳಗ್ಗೆ 4 ಗಂಟೆಗೆ ಎದ್ದು ಕಸರತ್ತಿನಲ್ಲಿ ತೊಡಗುತ್ತಾರೆ. "ಅವರ ಶಿಸ್ತು, ಕಠಿಣ ಪರಿಶ್ರಮ, ದೃಷ್ಟಿಯ ಸ್ಪಷ್ಟತೆ ಮತ್ತು ಎಂದಿಗೂ ಆಗುವುದಿಲ್ಲ ಎಂದು ಹೇಳುವ ಮನೋಭಾವವು ಒಡಿಶಾವನ್ನು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಎತ್ತರಕ್ಕೇರಿಸುತ್ತಿದೆ" ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ಹೊರಡಿಸಿದೆ.

English summary
V. Kartikeyan Pandian — Private Secretary to Odisha Chief Minister Naveen Patnaik since 2011 — who was conferred the FIH (International Hockey Federation) President’s Award at the FIH Congress
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X