ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಕರ್ನಾಟಕ - ಆಂಧ್ರ ಭಕ್ತಾದಿಗಳ ನಡುವೆ ಫೈಟ್!
Tiruvannamalai: ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಭಕ್ತಾದಿಗಳ ನಡುವೆ ಮಾರಾಮಾರಿ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ತಿರುವಣ್ಣಾಮಲೈ ಅಣ್ಣಾಮಲೈಯಾರ್ ದೇವಸ್ಥಾನದಲ್ಲಿ ಈಗ ಲಕ್ಷಾಂತರ ಜನ ಭಕ್ತಾದಿಗಳು ಸೇರಿದ್ದಾರೆ. ಆದರೆ, ವಿವಿಧ ರಾಜ್ಯಗಳ ನಡುವೆ ಇತ್ತೀಚಿನ ದಿನಗಳಲ್ಲಿ ಭಾಷಾ ವಿವಾದ ಹೆಚ್ಚಾಗಿರುವ ಸಂದರ್ಭದಲ್ಲಿಯೇ ಈ ಘಟನೆ ನಡೆದಿರುವುದು ಭಕ್ತಾದಿಗಳಲ್ಲಿ ಆತಂಕವನ್ನುಂಟು ಮಾಡಿದೆ. ನೂಕುನುಗ್ಗಲಿನ ವಿಷಯವನ್ನು ಭಾಷಾ ವಿವಾದವಾಗಿಯೂ ನೋಡಲಾಗುತ್ತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ತಿರುವಣ್ಣಾಮಲೈ ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ.
ತಿರುವಣ್ಣಾಮಲೈ ಅಣ್ಣಾಮಲೈಯಾರ್ ದೇವಸ್ಥಾನದಲ್ಲಿ ಭಕ್ತರು ಸರತಿ ಸಾಲಿನಲ್ಲಿ ಹೋಗುವಾಗ ಈ ಘಟನೆ ನಡೆದಿದ್ದು. ಘಟನೆಯಲ್ಲಿ ಒಬ್ಬರ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದು. ತೀವ್ರ ರಕ್ತಸ್ರಾವವಾಗಿದೆ. ಈ ಘಟನೆಯ ಬೆನ್ನಲ್ಲೇ ಈ ಭಾಗದಲ್ಲಿ ಜನರ ನಡುವೆ ನೂಕು ನುಗ್ಗಲು ಹೆಚ್ಚಾಗಿದ್ದು. ಭಾರೀ ಅವಾಂತರ ಸೃಷ್ಟಿಯಾಗಿದೆ. ಜನರ ನಡುವೆ ಗಲಾಟೆ ಜೋರಾಗಿದ್ದು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ತಿರುವಣ್ಣಾಮಲೈ ಅಣ್ಣಾಮಲೈಯರ್ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ವಿಶೇಷವಾಗಿ, ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಅಣ್ಣಾಮಲೈಯರ್ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಹೀಗಾಗಿ ಈ ವಾರಾಂತ್ಯ ಹಾಗೂ ಜೂನ್ ತಿಂಗಳ ಮೊದಲವಾರವೂ ಆಗಿರುವುದರಿಂದ ಸಾವಿರಾರು ಜನ ಭಕ್ತಾಧಿಗಳು ಇಲ್ಲಿ ಸೇರಿದ್ದರು.
ಭಾನುವಾರ, ತಮಿಳುನಾಡಿನಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತರು ಮುಂಜಾನೆಯಿಂದಲೇ ತಿರುವಣ್ಣಾಮಲೈ ಅಣ್ಣಾಮಲೈಯರ್ ದೇವಸ್ಥಾನಕ್ಕೆ ಬಂದಿದ್ದರು. ಎಂದಿನಂತೆ ಬೆಳ್ಳಂಬೆಳಗ್ಗೆಯೇ ಇಂದೂ ದೇವಸ್ಥಾನದ ಬಾಗಿಲುಗಳನ್ನು ತೆಗೆಯಲಾಗಿದೆ. ಬೆಳಗಿನ ಜಾವ 4.30ಕ್ಕೆ ದೇವಾಲಯದ ಬಾಗಿಲನ್ನು ತೆರೆಯಲಾಯಿತು. ದೇವಸ್ಥಾನದಲ್ಲಿ ವಿಶೇಷ ಅಭಿಷೇಕ ಪೂಜೆ ನಡೆಯಿತು.
ಭಕ್ತರು ಇಲ್ಲಿನ ರಾಜಗೋಪುರ ಪ್ರವೇಶದ್ವಾರದ ಮೂಲಕ ಬಂದು ದೇವರ ದರ್ಶನ ಪಡೆಯಲು ದೊಡ್ಡ ಸರತಿ ಸಾಲಿನಲ್ಲಿ ಕಾಯುತ್ತಿದ್ದರು. ತಾಸುಗಟ್ಟಲೆ ಭಕ್ತರು ಇಲ್ಲಿ ಕಾಯುತ್ತಿದ್ದರು. ಈ ರೀತಿ ಇರುವಾಗವಲೇ ಅಣ್ಣಾಮಲೈಯರ್ ದೇವಸ್ಥಾನದಲ್ಲಿ ಭಕ್ತರು ಸಾಲಿನಲ್ಲಿ ನಿಂತಿದ್ದಾಗ, ವಾಗ್ವಾದ ನಡೆದು ಅದು ಕೈ - ಕೈ ಮಿಲಾಯಿಸುವ ಹಂತಕ್ಕೆ ತಿರುಗಿತು. ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರ ನಡುವೆ ಮಾರಾಮಾರಿ ನಡೆಯಿತು ಎಂದು ವರದಿ ಆಗಿದೆ.
ಇನ್ನು ದಕ್ಷಿಣ ಭಾರತದ ಎಲ್ಲಾ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಆಂಧ್ರಪ್ರದೇಶ ಮತ್ತು ಕರ್ನಾಟಕದ ಭಕ್ತರ ನಡುವೆ ಏರ್ಪಟ್ಟ ಘರ್ಷಣೆಯಲ್ಲಿ ಭಕ್ತಾದಿಯೊಬ್ಬರ ತಲೆಗೆ ಗಂಭೀರವಾಗಿ ಗಾಯವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.












Click it and Unblock the Notifications