ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ.29ರ ತನಕ ಫಾಸ್ಟ್ ಟ್ಯಾಗ್ ಶುಲ್ಕ ಪಾವತಿಸದೆ ಮುನ್ನಡೆಯಿರಿ

|
Google Oneindia Kannada News

ನವದೆಹಲಿ, ಫೆಬ್ರವರಿ 13: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI)ದಿಂದ ಫಾಸ್ಟ್ ಟ್ಯಾಗ್ ಬಳಕೆಯನ್ನು ಹೆಚ್ಚಿಸಲು ಮುಂದಾಗಿದೆ. ಫೆಬ್ರವರಿ 29ರ ತನಕ ಫಾಸ್ಟ್ ಟ್ಯಾಗ್ ಶುಲ್ಕವಿಲ್ಲದೆ ವಾಹನ ಚಾಲಕರು ಪ್ರಯಾಣಿಸಬಹುದಾಗಿದೆ.

ಫೆಬ್ರವರಿ 15ರಿಂದ ಫೆಬ್ರವರಿ 29ರ ತನಕ ಈ ಸೌಲಭ್ಯ ಲಭ್ಯವಾಗಲಿದೆ. ಹೆದ್ದಾರಿಗಳ ಟೋಲ್ ಗಳಲ್ಲಿ ಡಿಜಿಟಲ್ ಸುಂಕ ಪಾವತಿ ಉತ್ತೇಜಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಫಾಸ್ಟ್ ಟ್ಯಾಗ್ ಶುಲ್ಕ 100 ರುಪಾಯಿಗೆ ವಿನಾಯತಿ ನೀಡಲಾಗುತ್ತಿದೆ.

FASTag ಪಡೆಯೋದು ಹೇಗೆ? App ಬಳಸುವುದು ಹೇಗೆ?FASTag ಪಡೆಯೋದು ಹೇಗೆ? App ಬಳಸುವುದು ಹೇಗೆ?

ಆದರೆ, ಫಾಸ್ಟ್ ಟ್ಯಾಗ್ ಖರೀದಿ ಸಂದರ್ಭದಲ್ಲಿನ ಠೇವಣಿ ಹಾಗೂ ಕನಿಷ್ಠ ಮೊತ್ತದಲ್ಲಿ ಯಾವುದೇ ಬದಲಾವ್ವಣೆ ಮಾಡಿಲ್ಲ. ಅಧಿಕೃತ ಮಾರಾಟ ಕೇಂದ್ರ, ಬ್ಯಾಂಕ್ ಗಳ ಮೂಲಕ ವಾಹನ ನೋಂದಣಿ ಪತ್ರ (RC) ತೋರಿಸಿ ಫಾಸ್ಟ್ ಟ್ಯಾಗ್ ಪಡೆಯಬಹುದಾಗಿದೆ.

FASTag to be available free of charge for 15 days from Feb 15-29

ದೇಶದ 527 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ ಟ್ಯಾಗ್ ಆಧಾರಿತ ಸುಂಕ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಪ್ರಕಟಣೆ ಹೊರಡಿಸಿದೆ.

ಫಾಸ್ಟ್ ಟ್ಯಾಗ್ ವಿತರಣೆ ಕೇಂದ್ರ ಸಮೀಪದಲ್ಲಿ ಎಲ್ಲಿದೆ ಎಂದು ತಿಳಿಯಲು MyFASTag ಆಪ್ ಡೌನ್ಲೋಡ್ ಮಾಡಿಕೊಳ್ಳಬಹುದು.

ಇಲ್ಲಿ ಅಜ್ಜನೇ ಟೋಲ್‌ಗೇಟ್: ಸುಂಕ ಕೊಡದೆ ಮುಂದೆ ಹೋಗುವಂತೆ ಇಲ್ಲ!ಇಲ್ಲಿ ಅಜ್ಜನೇ ಟೋಲ್‌ಗೇಟ್: ಸುಂಕ ಕೊಡದೆ ಮುಂದೆ ಹೋಗುವಂತೆ ಇಲ್ಲ!

ಫಾಸ್‌ಟ್ಯಾಗ್ ಬ್ರ್ಯಾಂಡ್ ಹೆಸರು ಭಾರತೀಯ ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಕಂಪೆನಿ ನಿಯಮಿತದ (ಐಎಚ್‌ಎಂಸಿಎಲ್) ಸ್ವಾಮ್ಯಕ್ಕೆ ಒಳಪಟ್ಟಿದೆ. 2014ರಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡಿದ್ದು, 2019ರ ಡಿಸೆಂಬರ್ ತಿಂಗಳು ಫಾಸ್ಟ್ ಟ್ಯಾಗ್ ಪಡೆಯಲು ಅಂತಿಮ ಗಡುವು ನೀಡಲಾಗಿತ್ತು. ನಂತರ ಅವಧಿಯನ್ನು ವಿಸ್ತರಿಸಲಾಯಿತು.

ರಾಷ್ಟ್ರೀಯ ವಿದ್ಯುನ್ಮಾನ ಸುಂಕ ಸಂಗ್ರಹ(ಎನ್ ಇಟಿಸಿ) ವ್ಯವಸ್ಥೆಯಡಿಯಲ್ಲಿ ಎಲ್ಲಾ ಟೋಲ್ ಪ್ಲಾಜಾಗಳಲ್ಲೂ ಫಾಸ್ಟ್ ಟ್ಯಾಗ್ ಬಳಸಬಹುದಾಗಿದೆ. ಒಂದು ಬಾರಿ ದೇಶದೆಲ್ಲೆಡೆ ಫಾಸ್ಟ್ ಟ್ಯಾಗ್ ಸುಂಕ ವ್ಯವಸ್ಥೆ ಜಾರಿಗೆ ಬಂದರೆ ಪ್ರತಿ ದಿನ 100 ಕೋಟಿ ರು ಗೂ ಅಧಿಕ ಮೊತ್ತ ಸರ್ಕಾರದ ಬೊಕ್ಕಸ ಸೇರಲಿದೆ.

English summary
To further enhance electronic toll collection, the National Highways Authority of India has decided to waive FASTag fee till February 29, the government said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X