ರೈತರ ಆತ್ಮಹತ್ಯೆ ಹೊಸದಲ್ಲ: ಮಹಾರಾಷ್ಟ್ರ ಕೃಷಿ ಸಚಿವನ ವಿವಾದಾತ್ಮಕ ಹೇಳಿಕೆ

ರೈತರ ಆತ್ಮಹತ್ಯೆ ವಿಷಯ ಹೊಸದಲ್ಲ. ಹಲವು ವರ್ಷಗಳಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಅಬ್ದುಲ್ ಸತ್ತಾರ್ ಹೇಳಿದ್ದಾರೆ.

ಮುಂಬೈ, ಮಾರ್ಚ್‌ 13: ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಹೊಸ ವಿಷಯವಲ್ಲ ಮತ್ತು ಹಲವು ವರ್ಷಗಳಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ವಿವಾದಾತ್ಮಕ ಹೇಳಿಕೆಯನ್ನು ಮಹಾರಾಷ್ಟ್ರದ ಕೃಷಿ ಸಚಿವ ಅಬ್ದುಲ್ ಸತ್ತಾರ್ ನೀಡಿದ್ದಾರೆ.

ಇತ್ತೀಚೆಗೆ ಔರಂಗಾಬಾದ್ ಜಿಲ್ಲೆಯ ತಮ್ಮ ಕ್ಷೇತ್ರವಾದ ಸಿಲ್ಲೋಡ್‌ನಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪ್ರತಿಕ್ರಿಯೆ ಕೇಳಿದ ಸುದ್ದಿಗಾರರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

Farmer suicide is not new: Maharashtra Agriculture Ministers controversial statement

ರೈತರ ಆತ್ಮಹತ್ಯೆ ವಿಷಯ ಹೊಸದಲ್ಲ. ಹಲವು ವರ್ಷಗಳಿಂದ ಇಂತಹ ಘಟನೆಗಳು ನಡೆಯುತ್ತಿವೆ. ನನ್ನ ಕ್ಷೇತ್ರ ಸೇರಿದಂತೆ ಮಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆಗಳು ಎಲ್ಲಿಯೂ ನಡೆಯಬಾರದು ಎಂದು ನಾನು ಭಾವಿಸುತ್ತೇನೆ ಎಂದು ಶಿವಸೇನಾ ಬಣದ ಮುಖ್ಯಸ್ಥ ಸತ್ತಾರ್ ಹೇಳಿದರು.

ಮಾರ್ಚ್ 3 ರಿಂದ 12 ರ ಅವಧಿಯಲ್ಲಿ ಇಬ್ಬರು ರೈತರು ಸಿಲ್ಲೋಡ್‌ನಲ್ಲಿ ಮೃತಪಟ್ಟಿದ್ದಾರೆ. ಆದಾಗ್ಯೂ, ಅದೇ ಅವಧಿಯಲ್ಲಿ ಮರಾಠವಾಡ ಪ್ರದೇಶದ ಔರಂಗಾಬಾದ್ ಜಿಲ್ಲೆಯಲ್ಲಿ ಆರು ಮಂದಿ ಕೃಷಿಕರು ತಮ್ಮ ಜೀವನವನ್ನು ಸಾಲದ ಋಣಭಾರದಿಂದ ಮೃತರಾಗಿದ್ದಾರೆ ಎಂದು ಮೂಲಗಳು ಹೇಳಿದ್ದು, ಈ ಕುರಿತು ಅಧ್ಯಯನ ನಡೆಸಲು ಕೃಷಿ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಕೃಷಿ ಸಚಿವ ಅಬ್ದುಲ್ ಸತ್ತಾರ್ ಹೇಳಿದ್ದಾರೆ.

ಅಬ್ದುಲ್ ಸತ್ತಾರ್ ಅವರು ಕಳೆದ ವಾರ ಅಕಾಲಿಕ ಮಳೆಯಿಂದಾಗಿ ಸಿಲ್ಲೋಡ್‌ನಲ್ಲಿ ಬೆಳೆಗಳಿಗೆ ಉಂಟಾದ ನಷ್ಟವನ್ನು ಭಾನುವಾರ ಪರಿಶೀಲಿಸಿದ್ದರು. ರೈತರು ಅಕಾಲಿವಾಗಿ ಮರಣ ಹೊಂದುತ್ತಿರುವುದರ ಬಗ್ಗೆ ವರದಿ ಸಲ್ಲಿಸಿದ ನಂತರ ಸಮಿತಿಯ ಶಿಫಾರಸುಗಳ ಮೇಲೆ ಸರ್ಕಾರ ಕಾರ್ಯನಿರ್ವಹಿಸುತ್ತದೆ ಎಂದು ಸಚಿವರು ಹೇಳಿದರು.

ರಾಜ್ಯ ಸರ್ಕಾರವು ರೈತರಿಗಾಗಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ನಾವು ಅವರಿಗೆ ಕೇವಲ ಒಂದು ರೂಪಾಯಿಗೆ ಬೆಳೆ ವಿಮೆಯನ್ನು ನೀಡುತ್ತಿದ್ದೇವೆ. ಮಾರ್ಚ್ 9 ರಂದು ಮಂಡಿಸಲಾದ ತನ್ನ ಚೊಚ್ಚಲ ಬಜೆಟ್‌ನಲ್ಲಿ, ಏಕನಾಥ್ ಶಿಂಧೆ-ಬಿಜೆಪಿ ಸರ್ಕಾರವು ರೈತರಿಗೆ ₹ 6,000 ನೆರವು ಮತ್ತು 1 ರೂ ಬೆಳೆ ವಿಮಾ ಯೋಜನೆಯನ್ನು ಪ್ರಸ್ತಾಪಿಸಿದೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+