Fact Check: ಗಾಲ್ವಾನ್ ಕಣಿವೆಯಲ್ಲಿ ಇಂದಿರಾಗಾಂಧಿ ಭಾಷಣ ಚಿತ್ರ?
ನವದೆಹಲಿ, ಜೂನ್ 23: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತಮ್ಮ ಆಡಳಿತಾವಧಿಯಲ್ಲಿ ಸೇನೆಯನ್ನು ಉದ್ದೇಶಿಸಿ ಮಾತನಾಡಲು ಕಾಶ್ಮೀರದ ಕಣಿವೆಗೆ ಭೇಟಿ ನೀಡಿದ್ದರು, ಗಾಲ್ವಾನ್ ಕಣಿವೆಯಲ್ಲಿ ಸೈನಿಕರನ್ನು ಹುರಿದುಂಬಿಸಿ ಭಾಷಣ ಮಾಡಿದ್ದರು ಎಂದು ಸುದ್ದಿ ಈಗ ಹರಿದಾಡುತ್ತಿದೆ. ಇದಕ್ಕೆ ಪೂರಕವಾಗಿ ಚಿತ್ರವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.
ಉತ್ತರಪ್ರದೇಶದ ಕಾಂಗ್ರೆಸ್ ಘಟಕ ಸೇರಿದಂತೆ ಅನೇಕ ಮಂದಿ ಟ್ವಿಟ್ಟರ್ ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಗಾಲ್ವಾನ್ ಕಣಿವೆಯಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಚಿತ್ರ ಎಂದು ಹೇಳಲಾಗಿದೆ.
ಚೀನಾಗೆ ಪಾಠ ಕಲಿಸಲು ಓದುಗರೇ ನೀಡಿದ ಸಲಹೆಗಳು ಹೇಗಿವೆ?
ಜೂನ್ 15/16ರಂದು ಲಡಾಕ್ ಪೂರ್ವ ಭಾಗದ ಇದೇ ಗಾಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾದಲ್ಲಿ ಉಭಯ ದೇಶಗಳ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಸಾವು ನೋವುಗಳು ಸಂಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸತ್ಯಾಸತ್ಯತೆ: 1971ರಲ್ಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ತೆಗೆದ ಚಿತ್ರ ಇದಾಗಿದ್ದು, ಗಾಲ್ವಾನ್ ಕಣಿವೆಯಿಂದ ಸುಮಾರು 200ಕ್ಕೂ ಅಧಿಕ ಕಿ. ಮೀ ದೂರದ ಲೆಹ್ ನಲ್ಲಿ ತೆಗೆದ ಚಿತ್ರವಾಗಿದೆ.
ಸಾಮಾಜಿಕ ಜಾಲ ತಾಣಗಳಲ್ಲಿ ಹೇಳಿದಂತೆ ಇದು ಗಾಲ್ವಾನ್ ಕಣಿವೆಯಲ್ಲಿ ತೆಗೆದ ಚಿತ್ರವಲ್ಲ ಎಂದು ಸುದ್ದಿ ಸಂಸ್ಥೆ ಸ್ಪಷ್ಟಪಡಿಸಿದೆ. ಈ ಚಿತ್ರದ ಮೂಲ ಲೇಖನದ ಲಿಂಕ್ ಇಲ್ಲಿದೆ ಗಾಲ್ವಾನ್ ಕಣಿವೆಯಲ್ಲಿನ ಹಳೆ ಚಿತ್ರ, ವಿಡಿಯೋಗಳನ್ನು ಈಗ ಹಂಚಲಾಗುತ್ತಿದ್ದು, ಸತ್ಯಾಸತ್ಯತೆ ಪರಿಶೀಲಿಸದೆ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಳ್ಳಬೇಡಿ ಎಂದು ಪಿಐಬಿ ಕೂಡಾ ಎಚ್ಚರಿಕೆ ನೀಡಿದೆ.