Fake news: ಮೋದಿಯಿಂದ ಎಲ್ಲಾ ಭಾರತೀಯರಿಗೂ 15 ಸಾವಿರ ರುಪಾಯಿ ಗಿಫ್ಟ್

ನವದೆಹಲಿ, ಏಪ್ರಿಲ್ 14: ಮೋದಿ ಸರ್ಕಾರದಿಂದ ಪ್ರತಿಯೊಬ್ಬರಿಗೂ 15 ಸಾವಿರ ರು ಸಿಗಲಿದೆ. ತಪ್ಪದೇ ಅರ್ಜಿ ತುಂಬಿ ಪಡೆದುಕೊಳ್ಳಿ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.

ಹಿಂದಿಭಾಷೆಯಲ್ಲಿರುವ ಈ ಪೋಸ್ಟರ್ ನಲ್ಲಿ ಪ್ರಧಾನಿ ಮೋದಿ ಭಾವಚಿತ್ರವಿದ್ದು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಬರೆಯಲಾಗಿದೆ. ಮೇಲ್ಭಾಗದಲ್ಲಿ 15000 ರು ಎಂದು ಅಂಕಿಯಲ್ಲಿ ಬರೆದಿದ್ದು, ಪ್ರಧಾನಮಂತ್ರಿ ಯೋಜನಾ 2020 ಎಂದು ಕೆಳಗಡೆ ಬರೆಯಲಾಗಿದೆ. ಜೊತೆಗೆ ಫಾರ್ಮ್ ತುಂಬಿ ನೀವು 15 ಸಾವಿರ ರುಪಾಯಿಯನ್ನು ಪಡೆಯಿರಿ ಎಂದು ಹೇಳಲಾಗಿದೆ.

ಜೊತೆಗೆ ಲಿಂಕ್ ಕೂಡಾ ನೀಡಲಾಗುತ್ತಿದೆ. ಈ ಲಿಂಕ್ ಕ್ಲಿಕ್ ಮಾಡಿದರೆ, ನಿಮ್ಮ ಹೆಸರು, ಫೋನ್ ನಂಬರ್,ವಿಳಾಸ ಹಾಗೂ ಪಿನ್ ನಂಬರ್ ಕೇಳಲಾಗುತ್ತದೆ. ಈ ಅರ್ಜಿ ತುಂಬಿ 15000 ರು ಪಡೆಯಿರಿ ಎಂದು ಟಿಕ್ಕರ್ ನಲ್ಲಿ ಹೇಳಲಾಗುತ್ತದೆ. ಈಗಾಗಲೇ ಲಕ್ಷಾಂತರ ಮಂದಿ ಈ ಯೋಜನೆ ಫಲಾನುಭವಿಗಳಾಗಿದ್ದಾರೆ ಎಂದು ಹೇಳಲಾಗುತ್ತದೆ. ಈ ಲಿಂಕ್ ಸಕ್ರಿಯವಾಗಿರುವ ಬ್ಲಾಗ್ (pm15000rs.blogspot.com.).

Fake: PM Modi is not giving Rs 15,000 to all Indians

ಸತ್ಯಾಸತ್ಯತೆ: ಈ ರೀತಿ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿಲ್ಲ. ಮಂಗಳವಾರದಂದು ಪ್ರಧಾನಿ ಮೋದಿ ಅವರು ಲಾಕ್ಡೌನ್ ಅವಧಿಯನ್ನು ಮೇ3ರ ತನಕ ವಿಸ್ತರಿಸಿದ್ದಾರೆ. ಯಾವುದೇ ರೀತಿ ಹಣ ರವಾನೆ, ಹಣ ಪಾವತಿ ಬಗ್ಗೆ ಮೋದಿ ತಿಳಿಸಿಲ್ಲ. ಹೀಗಾಗಿ ಈ ಪೋಸ್ಟರ್, ಅರ್ಜಿ ತುಂಬುವುದು, ಹಣ ಗಳಿಸಿ, ಬ್ಲಾಗ್ ಲಿಂಕ್ ಕ್ಲಿಕ್ ಮಾಡಿ ಎಂದು ಬಂದರೆ ತಕ್ಷಣವೇ ಪೊಲೀಸರಿಗೆ ತಿಳಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+