Fake: ಭಾರತೀಯ ರೈಲ್ವೆ ಸಿಬ್ಬಂದಿ ಸಂಬಳ ಕಡಿತವಾಗಲ್ಲ

ನವದೆಹಲಿ, ಏಪ್ರಿಲ್ 21: ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಅಗತ್ಯವಾದ ಧನ ಸಹಾಯವನ್ನು ದೇಶದ ಎಲ್ಲೆಡೆಯಿಂದ ಪಡೆಯಲಾಗುತ್ತಿದೆ. ಸಂಸದರ ಸಂಬಳದಲ್ಲಿ ಶೇ 30ರಷ್ಟು ಕಡಿತಗೊಳಿಸಲಾಗಿದೆ. ಆದರೆ, ಸರ್ಕಾರದ ಈ ಆದೇಶದ ಬೆನ್ನಲ್ಲೇ ಕೇಂದ್ರ ಸರ್ಕಾರಿ ನೌಕರರ ಸಂಬಳ, ಪಿಂಚಣಿ ಮೊತ್ತ ಕೂಡಾ ಇದೇ ಪ್ರಮಾಣದಲ್ಲಿ ಪಡೆಯಲಾಗುತ್ತದೆ ಎಂಬ ಆದೇಶವೊಂದು ಬಂದಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಇದರ ಜೊತೆಗೆ ಭಾರತೀಯ ರೈಲ್ವೆ ಸಿಬ್ಬಂದಿಯ ಸಂಬಳ ಕಡಿತ ಸುದ್ದಿಯೂ ಹರಿದಾಡುತ್ತಿದೆ.

ಈ ಸುದ್ದಿಯನ್ನು ನಂಬಿಕೊಂಡ ಅನೇಕ ರೈಲ್ವೆ ಸಿಬ್ಬಂದಿ ಗಾಬರಿಗೊಂಡು ಸುದ್ದಿಯ ಸತ್ಯಾಸತ್ಯತೆ ಬಗ್ಗೆ ವಿಚಾರಿಸತೊಡಗಿದ್ದಾರೆ. ಈ ಬಗ್ಗೆ ಪಿಐಬಿ ಹಾಗೂ ರೈಲ್ವೆ ಇಲಾಖೆಯಿಂದ ಸ್ಪಷ್ಟನೆ ಸಿಕ್ಕಿದ್ದು, ಯಾವುದೇ ವರ್ಗದ ಸಿಬ್ಬಂದಿಯ ಸಂಬಳ ಕಡಿತವಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ಸರ್ಕಾರಿ ನೌಕರರ ಸಂಬಳ ಹಾಗೂ ಪಿಂಚಣಿ ಮೊತ್ತ ಎಂದಿನಂತೆ ಸಿಗಲಿದೆ, ಸರ್ಕಾರಿ ನೌಕರರ ಸಂಬಳದಲ್ಲಿ ಇಂತಿಷ್ಟು ಪಿಎಂ ಕೇರ್ಸ್ ಫಂಡ್ ಸೇರಲಿದೆ ಎಂಬುದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಲಾಗಿದೆ.

Fake news: No proposal to cut salary for railway employees

ಕೇಂದ್ರ ಸರ್ಕಾರಿ ನೌಕರರ ಪಿಂಚಣಿಯಲ್ಲಿ ಶೇ 20ರಷ್ಟು ಕಡಿತವಾಗಲಿದೆ ಎಂದು ಇತ್ತೀಚೆಗೆ ವಾಟ್ಸಾಪ್ ಹಂಚಿಕೆಯಾಗಿತ್ತು. ಆದರೆ, ಇದೆಲ್ಲವೂ ಸುಳ್ಳು ಸುದ್ದಿ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕೊರೊನಾವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಲ್ಲಾ ಸಿಬ್ಬಂದಿಗೂ ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+