Telangana Election: ‘ಕಮಲ’ ತೊರೆದು ‘ಕೈ’ ಹಿಡಿದ ಲೇಡಿ ಸೂಪರ್ ಸ್ಟಾರ್!

ಕಾಂಗ್ರೆಸ್ ಇನ್ನೇನು ತನ್ನ ಶಕ್ತಿ ಕಳೆದುಕೊಳ್ಳುತ್ತಿದೆ ಅನ್ನುವಾಗ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕ ಅದ್ಧೂರಿ ಗೆಲುವು ಮತ್ತೊಮ್ಮೆ 'ಕೈ' ಪಾಳಯಕ್ಕೆ ಬಲ ತುಂಬಿದೆ. ದೇಶದಲ್ಲಿ ಮತ್ತೊಮ್ಮೆ ಪುಟಿದೆದ್ದು ಸರ್ಕಾರ ರಚಿಸುವ ತಾಕತ್ತು ಕೊಟ್ಟಿದೆ. ಹೀಗಿದ್ದಾಗಲೇ ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದ ಕೇವಲ 6 ತಿಂಗಳ ಒಳಗೆ, 5 ರಾಜ್ಯದ ಚುನಾವಣೆ ಕೂಡ ಬಂದಿದೆ. ಪಂಚರಾಜ್ಯ ಚುನಾವಣೆಯಲ್ಲಿಯೂ ಕಾಂಗ್ರೆಸ್ ಸದ್ದು ಮಾಡುತ್ತಿದೆ.

ಪಂಚರಾಜ್ಯ ಚುನಾವಣೆ ಪೈಕಿ ತೆಲಂಗಾಣದಲ್ಲೂ ಎಲೆಕ್ಷನ್ ನಡೆಯುತ್ತಿದೆ. ಈಗ ಅಧಿಕಾರ ನಡೆಸುತ್ತಿರುವ ಕೆಸಿಆರ್ ನೇತೃತ್ವದ ಬಿಆರ್‌ಎಸ್ ಪಕ್ಷಕ್ಕೂ ಭಾರಿ ಹಿನ್ನಡೆ ಆಗಲಿದೆ ಎನ್ನುವ ವರದಿ ಬೆನ್ನಲ್ಲೇ, ಮತ್ತೊಂದು ಶಾಕ್ ಸಿಕ್ಕಿದೆ. ಇತ್ತೀಚೆಗೆ ಬಿಜೆಪಿ ತೊರೆದಿದ್ದ ನಾಯಕಿ ಈಗ ಕಾಂಗ್ರೆಸ್‌ಗೆ ಬಲ ತುಂಬಲು ಮುಂದಾಗಿದ್ದು ತೆಲಂಗಾಣ ಚುನಾವಣೆಯಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದೆ. ಈ ಮೂಲಕ ತೆಲಂಗಾಣ ಚುನಾವಣೆ ರಂಗೇರಿದ ಸಮಯಕ್ಕೆ, ಮಹತ್ವದ ಬೆಳವಣಿಗೆ ಒಂದು ನಡೆದಿದೆ.

actress-joined-congress-in-telangana

ಕಾಂಗ್ರೆಸ್ ಸೇರಿದ ಲೇಡಿ ಸೂಪರ್ ಸ್ಟಾರ್!

ನಟಿ ವಿಜಯಶಾಂತಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ಒಂದು ಕಾಲದ ಸೌತ್ ಸಿನಿಮಾಗಳ ಸೂಪರ್ ಸ್ಟಾರ್ ಆಗಿ ಮಿಂಚಿದ್ದರು ನಟಿ ವಿಜಯಶಾಂತಿ. ಆದರೆ ಬಣ್ಣದ ಲೋಕದ ಜೊತೆ ರಾಜಕೀಯ ಕ್ಷೇತ್ರದ ಸೆಳೆತ ಅವರನ್ನು ರಾಜಕಾರಣಿ ಆಗಿ ಮಾಡಿತ್ತು. ಹೀಗೆ ವಿಜಯಶಾಂತಿ ಅವರು ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟು ಮಿಂಚಿದ್ದರು. ಆದರೆ ತೆಲಂಗಾಣ ವಿಧಾನಸಭೆಯ ಚುನಾವಣೆಗೆ ಕೆಲ ದಿನ ಬಾಕಿ ಇರುವಂತೆ ಮಾಜಿ ಸಂಸದೆ ಹಾಗೂ ಹಿರಿಯ ನಟಿ ವಿಜಯಶಾಂತಿ ಬಿಜೆಪಿಗೆ ಗುಡ್ ಬೈ ಹೇಳಿದ್ದರು. ಇಷ್ಟೇ ಅಲ್ಲದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಈಗ ಕಾಂಗ್ರೆಸ್‌ಗೆ ಸೇರಿದ್ದಾರೆ.

ವಿಜಯಶಾಂತಿ ರಾಜಕೀಯ ಹಿನ್ನೆಲೆ

2009ರಲ್ಲಿ ಸಕ್ರಿಯ ರಾಜಕೀಯ ಜೀವನ ಆರಂಭಿಸಿದ್ದ ನಟಿ ವಿಜಯಶಾಂತಿ, 2020ರಲ್ಲಿ ಬಿಜೆಪಿ ಸೇರಿದ್ದರು. ಬಿಜೆಪಿ ಹಿರಿಯ ನಾಯಕ ಎಂ. ವೆಂಕಯ್ಯ ನಾಯ್ಡು & ಚ. ವಿದ್ಯಾಸಾಗರ ರಾವ್ ಅವರ ಜತೆ ಪಕ್ಷದಲ್ಲಿ ಸಕ್ರಿಯರಾಗಿದ್ರು. ಅಲ್ಲದೆ ಎಲ್‌.ಕೆ. ಅಡ್ವಾಣಿ ಅವರಿಗೆ ಆಪ್ತರಾಗಿದ್ದರು. ಬಳಿಕ ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟಕ್ಕೂ ಧುಮುಕಿದ ವಿಜಯಶಾಂತಿ ತೆಲಂಗಾಣ ಪಕ್ಷ ಆರಂಭಿಸಿದರು. ಆ ಬಳಿಕ ತೆಲಂಗಾಣ ರಾಷ್ಟ್ರ ಸಮಿತಿ ಸೇರಿ, 2009ರಲ್ಲಿ ಮೇದಕ್‌ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆಗೆ ಕೂಡ ಪ್ರವೇಶಿಸಿದರು. ನಂತರ 2014 ರ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಸೇರಿದ್ದರು.

ಕಾಂಗ್ರೆಸ್ ಸೇರಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರೂ ವಿಜಯಶಾಂತಿ ಸೋತಿದ್ದರು. 2020 ರಲ್ಲಿ ಬಿಜೆಪಿ ಸೇರಿದ್ದರು. ಆದರೆ ಇತ್ತೀಚೆಗೆ ಬಿಜೆಪಿ ಪಕ್ಷವನ್ನೂ ತೊರೆದಿದ್ದ ನಟಿ ವಿಜಯಶಾಂತಿ, ಇದೀಗ ಕಾಂಗ್ರೆಸ್‌ಗೆ ವಾಪಸ್ ಬಂದಿದ್ದಾರೆ. ಅದರಲ್ಲೂ ಎಐಸಿಸಿ ಅಧ್ಯಕ್ಷರ ಸಮ್ಮುಖದಲ್ಲೇ ಕಾಂಗ್ರೆಸ್ ಸೇರ್ಪಡೆ ಮೂಲಕ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಹೀಗೆ ತೆಲಂಗಾಣದಲ್ಲಿ ಮತ್ತೊಮ್ಮೆ ಹವಾ ಎಬ್ಬಿಸಲು ಸಜ್ಜಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+