Get Updates
Get notified of breaking news, exclusive insights, and must-see stories!

ಪ್ರಧಾನಿ ಮೋದಿ ‘ಮನದ ಮಾತು’ ಕೇಳಿ ಗಣ್ಯರು ಹೇಳಿದ್ದು ಏನು?

ನವದೆಹಲಿ: ಭಾರತದ ಪ್ರಜೆಗಳ ಜೊತೆಗೆ ಪ್ರತಿ ತಿಂಗಳು ದೇಶದ ಪ್ರಮುಖ ಬೆಳವಣಿಗೆ ಬಗ್ಗೆ ಪ್ರಸ್ತಾಪ ಮಾಡಲು. ಈ ಮೂಲಕ ಪ್ರಜೆಗಳಿಗೆ ಮತ್ತಷ್ಟು ಹತ್ತಿರವಾಗಲು ಪ್ರಧಾನಿ ಮೋದಿ ಅವರು 'ಮನ್ ಕೀ ಬಾತ್' ಕಾರ್ಯಕ್ರಮ ಆರಂಭಿಸಿದರು. ಹೀಗೆ ಅಕ್ಟೋಬರ್ 2014 ರಲ್ಲಿ ಶುರುವಾದ ಮನ್ ಕೀ ಬಾತ್ ಕಾರ್ಯಕ್ರಮ ಇದೀಗ 9ನೇ ವರ್ಷ ಪೂರೈಸಿ, 10ನೇ ವರ್ಷಕ್ಕೆ ಕಾಲಿಟ್ಟಿದೆ. ಆದರೆ ಈ ಸಮಯದಲ್ಲೇ ದೇಶದ ಜನರಿಗೆ ಪ್ರಧಾನಿ ಸರ್ಪ್ರೈಸ್ ಕೊಟ್ಟಿದ್ದಾರೆ.

ಹೌದು, ಪ್ರಧಾನಿ ಮೋದಿ ಅವರ 'ಮನ್ ಕೀ ಬಾತ್' ರೇಡಿಯೋ ಕಾರ್ಯಕ್ರಮವು 100 ಕಂತು ಯಶಸ್ವಿಯಾಗಿ ಪೂರೈಸಿ ಮುನ್ನುಗ್ಗಿದೆ. ಈ ಸಮಯದಲ್ಲಿ ವಿಶೇಷ ಉಡುಗೊರೆ ನೀಡಿದ್ದಾರೆ ಪ್ರಧಾನಿ ಮೋದಿ. ಅಂದಹಾಗೆ 100 ಕಂತುಗಳ ಪಯಣವನ್ನ ಒಳಗೊಂಡ 3ನೇ ಪುಸ್ತಕವಾದ 'ಇಗ್ನೈಟಿಂಗ್ ಕಲೆಕ್ಟಿವ್ ಗುಡ್​ನೆಸ್: ಮನ್ ಕೀ ಬಾತ್ @ 100' ಇತ್ತೀಚೆಗೆ ರಿಲೀಸ್ ಆಗಿತ್ತು. ಈ ಬಗ್ಗೆ ದೇಶಾದ್ಯಂತ ಮೆಚ್ಚುಗೆ ಮಾತು ಕೇಳಿಬರುತ್ತಿದೆ. ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ರಿಲೀಸ್ ಮಾಡಿರುವ ಪುಸ್ತಕದ ಬಗ್ಗೆ ಈಗ ಗಣ್ಯ ವ್ಯಕ್ತಿಗಳು ಹೇಳಿದ್ದು ಏನು ಗೊತ್ತಾ?

Explore the Impact of PM Modis Mann Ki Baat on Shaping New India: A New Book

ದೇಶದ ಗಣ್ಯರು ಪ್ರಧಾನಿ ಪುಸ್ತಕದ ಬಗ್ಗೆ...

'ಇಗ್ನೈಟಿಂಗ್ ಕಲೆಕ್ಟಿವ್ ಗುಡ್​ನೆಸ್: ಮನ್ ಕೀ ಬಾತ್ @ 100' ಪುಸ್ತಕದ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್ & ನಿರ್ಮಲಾ ಸೀತಾರಾಮನ್ ಸೇರಿ ಅನೇಕ ಗಣ್ಯರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಗಣ್ಯಾತಿಗಣ್ಯರು ಪೋಸ್ಟ್ ಕೂಡ ಹಾಕಿದ್ದಾರೆ. ಹಾಗಾದ್ರೆ 'ಇಗ್ನೈಟಿಂಗ್ ಕಲೆಕ್ಟಿವ್ ಗುಡ್​ನೆಸ್: ಮನ್ ಕೀ ಬಾತ್ @ 100' ಪುಸ್ತಕ ಕುರಿತು ಕೇಂದ್ರ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್ & ನಿರ್ಮಲಾ ಸೀತಾರಾಮನ್ ಸೇರಿ ಅನೇಕ ಗಣ್ಯರು ಹೇಳಿದ್ದು ಏನು?

ಅಷ್ಟಕ್ಕೂ 2023ರ ಏಪ್ರಿಲ್‌ನಲ್ಲಿ ಮನ್ ಕೀ ಬಾತ್‌ ತನ್ನ 100 ಸಂಚಿಕೆ ಪೂರೈಸಿದೆ. ಈ ಮಧ್ಯೆ ಇದೇ 'ಮನ್ ಕೀ ಬಾತ್' ಸರಣಿಯ ಮೊದಲ ಪುಸ್ತಕ 26ನೇ ಸರಣಿ ಮುಗಿದ ಬಳಿಕ, ಅಂದ್ರೆ 2017ರ ಮೇ ತಿಂಗಳಲ್ಲಿ ಪ್ರಕಟಿಸಲಾಗಿತ್ತು. ಅಂದಿನ ರಾಷ್ಟ್ರಪತಿ, ರಾಮ್ ನಾಥ್ ಕೋವಿಂದ್ ಅವರು ಪುಸ್ತಕ ಬಿಡುಗಡೆ ಮಾಡಿದ್ದರು. ನಂತರದ ಪುಸ್ತಕವು 50ನೇ ಕಂತು ಪೂರ್ಣಗೊಳಿಸಿದ ಬಳಿಕ ರಿಲೀಸ್ ಆಗಿತ್ತು. 2019ರ ಮಾರ್ಚ್‌ನಲ್ಲಿ ಆಗಿನ ಕೇಂದ್ರ ಹಣಕಾಸು ಸಚಿವ, ಅರುಣ್ ಜೇಟ್ಲಿ ಅವರೇ ಪುಸ್ತಕ ಬಿಡುಗಡೆ ಮಾಡಿದ್ದರು.

Explore the Impact of PM Modis Mann Ki Baat on Shaping New India: A New Book

ಕೇಂದ್ರ ಗೃಹಸಚಿವರ ಮನದ ಮಾತು

ಈಗ 'ಮನ್ ಕೀ ಬಾತ್' 100ನೇ ಸಂಚಿಕೆ ಮುಗಿದ ಬಳಿಕ ಇದೇ ಸರಣಿಯ 3ನೇ ಪುಸ್ತಕವೂ ರಿಲೀಸ್ ಆಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಸವನ್ನು ಹಂಚಿಕೊಂಡಿದ್ದಾರೆ. ಈ ಹೊಸ ಪುಸ್ತಕ 'ಇಗ್ನೈಟಿಂಗ್ ಕಲೆಕ್ಟಿವ್ ಗುಡ್​ನೆಸ್: ಮನ್ ಕೀ ಬಾತ್ @ 100' ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ನಮ್ಮ ರಾಷ್ಟ್ರ ಕೈಗೊಂಡ ವಿಶಿಷ್ಟ ಪ್ರಯಾಣದ ಇತಿಹಾಸ ಹೇಳುತ್ತದೆ. ನರೇಂದ್ರ ಮೋದಿ ಅವರು ತಮ್ಮ ಮಾತುಗಳ ಶಕ್ತಿಯಿಂದ ಹೇಗೆ ಇಡೀ ರಾಷ್ಟ್ರವನ್ನ ಒಟ್ಟುಗೂಡಿಸಿದರು ಎಂಬುದರ ಕುರಿತು ಇದು ಹೊಸ ಬೆಳಕನ್ನು ಚೆಲ್ಲುತ್ತದೆ ಎಂದಿದ್ದಾರೆ. ಈ ಸಂದರ್ಭದಲ್ಲೇ ಯುವಕರು ಈ ಪುಸ್ತಕವನ್ನು ಓದಲೇಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಲಹೆ ನೀಡಿದ್ದಾರೆ.

ರಾಜನಾಥ್ ಸಿಂಗ್ ಅವರು ಹೇಳಿದ್ದೇನು?

ಹಾಗೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಬ್ಲೂಕ್ರಾಫ್ಟ್ ಪ್ರಕಟಿಸಿದ ಈ 'ಇಗ್ನೈಟಿಂಗ್ ಕಲೆಕ್ಟಿವ್ ಗುಡ್​ನೆಸ್: ಮನ್ ಕೀ ಬಾತ್ @ 100' ಪುಸ್ತಕದ ಮುಂಗಡ ಪ್ರತಿ ಸ್ವೀಕರಿಸಿದೆ ಅಂತಾ ಸಂತಸ ಹಂಚಿಕೊಂಡಿದ್ದಾರೆ. ಅಲ್ಲದೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ಬಾತ್ ಮೂಲಕ ದೇಶವನ್ನು ಒಗ್ಗೂಡಿಸಿದ ಬಗ್ಗೆ ಅದ್ಭುತವಾಗಿ ಪುಸ್ತಕ ತಿಳಿಸಿದೆ ಎಂದಿದ್ದಾರೆ. ಅಲ್ಲದೆ ಪುಸ್ತಕದಲ್ಲಿ ಇರುವ ಅನೇಕ ಅಂಶಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Explore the Impact of PM Modis Mann Ki Baat on Shaping New India: A New Book

ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?

ಹಾಗೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, 'ಮನ್ ಕೀ ಬಾತ್' ಪುಸ್ತಕದ ಪ್ರತಿ ಪಡೆದೆ ಎಂದು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಮನ್ ಕೀ ಬಾತ್ 2023ರ ಏಪ್ರಿಲ್‌ನಲ್ಲಿ 100 ಸಂಚಿಕೆ ಪೂರೈಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದು, ರಾಷ್ಟ್ರ ನಿರ್ಮಾಣ ವಿಚಾರದಲ್ಲಿ 'ಮನ್ ಕೀ ಬಾತ್' ಪಾತ್ರ ಎಷ್ಟು ಮುಖ್ಯ ಎಂಬುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+