ಪ್ರಧಾನಿ ಮೋದಿ & ಅಮಿತ್ ಶಾ ಇಲ್ಲದ ವೇಳೆ ಲೋಕಸಭೆಗೆ ನುಗ್ಗಿದ ಆಗಂತುಕರು: ಭಯದಲ್ಲೇ ನಿಂತ ರಾಹುಲ್ ಗಾಂಧಿ
Parliament Security Breach: ಭಾರತದ ಸಂಸತ್ ಭವನ ಮೇಲೆ ಭೀಕರ ದಾಳಿ ನಡೆದು 22 ವರ್ಷ ಕಳೆದ ದಿನವೇ ಮತ್ತೊಮ್ಮೆ ಸಂಸತ್ ಭವನಕ್ಕೆ ಆಗಂತುಕರು ನುಗ್ಗಿದ್ದಾರೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಲ್ಲದ ವೇಳೆ, ಸಂಸತ್ ಭವನದಲ್ಲಿ ಆತಂಕಕಾರಿ ಘಟನೆ ನಡೆದಿದೆ. ಹಾಗಾದರೆ ಇಂದು ಭಾರತದ ಶಕ್ತಿ ಕೇಂದ್ರವಾದ ಸಂಸತ್ ಭವನದೊಳಗೆ ನಡೆದ ಭೀಕರ ಘಟನೆ ಎಂತಹದ್ದು? ರಾಹುಲ್ ಗಾಂಧಿ ಹೆದರಿ ನಿಂತಿದ್ದು ಏಕೆ?
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ, ಇಂತಹ ಬೃಹತ್ ದೇಶದ ಸಂಸತ್‌ನಲ್ಲಿ ಇಂದು ನಡೆಯಬಾರದ ಘಟನೆ ನಡೆದು ಹೋಗಿದೆ. 2001ರ ಡಿಸೆಂಬರ್ 13 ರಂದು ಭಾರತ ಸಂಸತ್‌ಗೆ ನುಗ್ಗಿದ್ದ ಉಗ್ರರು ದಾಳಿ ನಡೆಸಿ, ಒಟ್ಟು 9 ಜನ ಮೃತಪಟ್ಟಿದ್ದರು. ಇಂದು ಇದೇ ಭೀಕರ ಘಟನೆಗೆ ಬರೋಬ್ಬರಿ 22 ವರ್ಷ ತುಂಬಿದ ಸಮಯದಲ್ಲೇ, ಮತ್ತೆ ಸಂಸತ್ ಒಳಗಡೆಗೆ ಆಗಂತುಕರು ನುಗ್ಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಧ್ಯಪ್ರದೇಶಕ್ಕೆ ತೆರಳಿದ ಸಮಯದಲ್ಲೇ ಇಂತಹ ಘಟನೆ ನಡೆದಿದೆ.

ಹೆದರಿ ನಿಂತಿದ್ದ ರಾಹುಲ್ ಗಾಂಧಿ?
ಸಂಸತ್ ಭವನದಲ್ಲಿ ಇಂದು ಭೀಕರ ಘಟನೆ ನಡೆದು ಹೋಗಿರುವ ವಿಚಾರ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಅದರಲ್ಲೂ ಅಪರಿಚಿತರು ಸಂಸತ್ ಭನದ ಒಳಗೆ ನುಗ್ಗಿ, ಅನುಮಾನಾಸ್ಪದ ವಸ್ತು ತೂರಿ ಹೊಗೆ ಹಬ್ಬಿಸಿದ ನಂತರ ಸಂಸದರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಈ ವೇಳೆ, ಕಾಂಗ್ರೆಸ್ ವರಿಷ್ಠ & ಸಂಸದ ರಾಹುಲ್ ಗಾಂಧಿ ಅಲ್ಲಿನ ಪರಿಸ್ಥಿತಿ ನೋಡುತ್ತಾ ನಿಂತಿದ್ದರು. ಈ ವೇಳೆ ರಾಹುಲ್ ಗಾಂಧಿ ಅವರು ಆತಂಕ ಅಥವಾ ಭಯದಲ್ಲಿ ನಿಂತಿದ್ದಂತೆ ಕಾಣುತ್ತಿದೆ. ಇನ್ನೂ ಹಲವು ಹಿರಿಯ ಸಂಸದರು ಈ ವೇಳೆ ಸಂಸತ್ ಭವನ ಬಿಟ್ಟು ಓಡಿದ್ದಾರೆ.
ಪ್ರಧಾನಿ ಮೋದಿ ಎಲ್ಲಿ ಹೋಗಿದ್ದರು?
ಇಂದು ಪ್ರಧಾನಿ ಮೋದಿ ಅವರು ಹಾಗೂ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಸಂಸತ್‌ಗೆ ಬಂದಿರಲಿಲ್ಲ. ಬೇರೆ ಕೆಲಸದ ಹಿನ್ನೆಲೆ ಇಬ್ಬರೂ ಇಂದು ಗೈರಾಗಿದ್ದರು. ಇದೇ ವೇಳೆ ಅಪರಿಚಿತರು ನುಗ್ಗಿದ್ದಾರೆ. ಅಕಸ್ಮಾತ್ ಪ್ರಧಾನಿ ಮೋದಿ ಅವರು ಕೂಡ ಇಂದು ಸಂಸತ್‌ನ ಕಲಾಪದಲ್ಲಿ ಭಾಗಿ ಆಗಿದ್ದರೆ, ದೊಡ್ಡ ಭದ್ರತಾ ಲೋಪ ಆಗುತ್ತಿತ್ತು. ಇನ್ನೂ ಘಟನೆ ಬಗ್ಗೆ ಪಕ್ಷಾತೀತವಾಗಿ ಸಂಸದರು ಖಂಡಿಸಿದ್ದಾರೆ. ಹಾಗೇ ಕೇಂದ್ರ ಸರ್ಕಾರ ಕೂಡ ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಶುರುವಾಗಿದೆ.
ಒಟ್ನಲ್ಲಿ ಇಂತಹ ಘಟನೆಗಳು ಆತಂಕಕಾರಿ, ಹೀಗಾಗಿ ಯಾರೇ ಇಂತಹ ಕೃತ್ಯ ಎಸಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಅಗತ್ಯ ಎಂಬ ಒತ್ತಾಯ ಕೇಳಿಬರುತ್ತಿದೆ. ಇನ್ನ ಸೋಷಿಯಲ್ ಮೀಡಿಯಾ ಕೂಡ ಈ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಸೋಷಿಯಲ್ ಮೀಡಿಯಾ ಬಳಕೆದಾರರು ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೆ ಸಂಸತ್‌ಗೆ ಭದ್ರತೆಯನ್ನು ಇದೀಗ ಮತ್ತಷ್ಟು ಹೆಚ್ಚಿಸಿ ಎಲ್ಲೆಲ್ಲೂ ಹದ್ದಿನ ಕಣ್ಣಿಡಲಾಗಿದೆ.












Click it and Unblock the Notifications