ಸಿಹಿ ಸುದ್ದಿ: ಒಂದು ಕೋಟಿಗೂ ಹೆಚ್ಚು ಕೇಂದ್ರ ನೌಕರರ ತುಟ್ಟಿಭತ್ಯೆ (DA) ಶೀಘ್ರವೇ ಏರಿಕೆ, ಆದೇಶ
ನವದೆಹಲಿ, ಆಗಸ್ಟ್ 06: ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ (Dearness allowance) ಏರಿಕೆ ಮಾಡುವ ಮೂಲಕ ಆದಷ್ಟು ಶೀಘ್ರವೇ ಸಿಹಿ ಸುದ್ದಿಯೊಂದನ್ನು ನೀಡಲಿದೆ. ಸುಮಾರು ಒಂದು ಕೋಟಿಗೂ ಹೆಚ್ಚಿರುವ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ 3ಪಾಯಿಂಟ್ಸ್ ಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಪಿಟಿಐ ವರದಿ ಮಾಡಿದೆ.
ಒಂದು ಕೋಟಿಗೂ ಅಧಿಕ ಉದ್ಯೋಗಿಗಳಿಗೆ ಹಾಗೂ ಪಿಂಚಣಿದಾರರಿಗೆ ಕೇಂದ್ರ ಬಿಜೆಪಿ ಹಾಲಿ ಇರುವ ಶೇಕಡಾ 42 ತುಟ್ಟಿಭತ್ಯೆಯನ್ನು (ಡಿಎ) ಅನ್ನು ಶೇಕಡಾ 45ಕ್ಕೆ ಹೆಚ್ಚಿಸುವ ನಿರೀಕ್ಷೆಗಳು ಇವೆ. ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (CPI-IW) ಆಧಾರದ ಮೇಲೆ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗುವುದು ಎಂದು ಈ ಹಿಂದೆ ಸರ್ಕಾರ ತಿಳಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಅವರು, ಜೂನ್ 2023ರ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ ಜುಲೈ 31, 2023 ರಂದು ಬಿಡುಗಡೆಯಾಗಿದೆ. ಆದರೆ ಸರ್ಕಾರ ಮೂರು ಪಾಯಿಂಟ್ ಹೆಚ್ಚಲಿದ್ದು, ನಾವು ಶೇಕಡಾ ನಾಲ್ಕು ಪಾಯಿಂಟ್ ಹೆಚ್ಚಳಕ್ಕೆ ಈ ಹಿಂದೆ ಮನವಿಮಾಡಿದ್ದೇವು ಎಂದು ಅವರು ತಿಳಿಸಿದರು.
ಒಟ್ಟು ತುಟ್ಟಿಭತ್ಯೆ ಶೇಕಡಾ 45ಕ್ಕೆ ಹೆಚ್ಚಳ
ಮೂರಕ್ಕಿಂತ ಸ್ವಲ್ಪ ಹೆಚ್ಚು ತುಟ್ಟಿಭತ್ಯೆ ಹೆಚ್ಚಳವು ಕಾರ್ಯರೂಪಕ್ಕೆ ಬಂದರೆ ಅನುಕೂಲವಾಗಲಿದೆ. ಶೇಕಡಾ ಮೂರು ಪಾಯಿಂಡ್ ಹೆಚ್ಚಳದಿಂದ ತುಟ್ಟಿಭತ್ಯೆ ಶೇಕಡಾ 45ಕ್ಕೆ ಏರಿಕೆ ಆಗುತ್ತದೆ ಎಂದು ಅವರು ವಿವರಿಸಿದರು.
ಕೇಂದ್ರ ಹಣಕಾಸು ಸಚಿವಾಲಯವು ಆದಾಯ ಪರಿಣಾಮದೊಂದಿಗೆ ಡಿಎ ಹೆಚ್ಚಳದ ಪ್ರಸ್ತಾವನೆ ರೂಪಿಸುತ್ತದೆ ಹಾಗೂ ಅನುಮೋದನೆಗಾಗಿ ಕೇಂದ್ರ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸುತ್ತದೆ. ಸದ್ಯ ಡಿಎ ಹೆಚ್ಚಳುವ ಕಳೆದ ತಿಂಗಳ ಜುಲೈ 1ಕ್ಕೆ ಅನ್ವಯವಾಗುವಂತೆ ಜಾರಿಗೆ ಬರಲಿದೆ ಎಂದು ತಿಳಿಸಿದರು.

ಒಟ್ಟು ಕೇಂದ್ರ ಸರ್ಕಾರ ವ್ಯಾಪ್ತಿಯ ಒಂದು ಕೋಟಿಗೂ ಹೆಚ್ಚುರಿ ನೌಕರರು ಹಾಗೂ ಪಿಂಚಣಿದಾರರು ಶೇಕಡಾ 42 ಪ್ರತಿಶತ ತುಟ್ಟಿಭತ್ಯೆಯನ್ನು ಪಡೆದಿದ್ದಾರೆ. ತುಟ್ಟಿಭತ್ಯೆ (DA) ಈ ಹಿಂದೆ 2023ರ ಮಾರ್ಚ್ 24 ರಂದು ಪರಿಷ್ಕರಣೆ ಮಾಡಲಾಗಿತ್ತು.
ಕಳೆದ ವರ್ಷ 2022ಕ್ಕೆ ಡಿಸೆಂಬರ್ ಕೊನೆಗೊಂಡ ಅವಧಿಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ 12 ಮಾಸಿಕ ಸರಾಸರಿಯಲ್ಲಿನ ಶೇಕಡಾವಾರು ಹೆಚ್ಚಳದ ಆಧಾರದ ಮೇಲೆ ಕೇಂದ್ರವು 04 ಶೇಕಡಾವಾರು ಪಾಯಿಂಟ್‌ಗಳಿಂದ 42 ಶೇಕಡಾಗೆ ನೌಕರರ ತುಟ್ಟಿಭತ್ಯೆ ಹೆಚ್ಚಿಸಿತ್ತು. ಇದೀಗ ಅದಕ್ಕೆ ಮೂರು ಪಾಯಿಂಟ್ ಏರಿಕೆ ಸೇರ್ಪಡೆಯಾಗಲಿದೆ.












Click it and Unblock the Notifications