EPFOಗೆ ಹೊಸದಾಗಿ ಸೇರ್ಪಡೆಯಾದ ಸದಸ್ಯರಲ್ಲಿ 18-25 ವಯಸ್ಸಿನವರೇ ಅಧಿಕ
ನವದೆಹಲಿ, ಡಿಸೆಂಬರ್ 28: ಉದ್ಯೋಗ ಕ್ಷೇತ್ರದಲ್ಲಿ ಪ್ರಮುಖ ಹಾಗೂ ಜನಪ್ರಿಯ ಉಳಿತಾಯ ಯೋಜನೆಯಾಗಿರುವ ನೌಕರರ ಭವಿಷ್ಯ ನಿಧಿ ಸಂಘಟನೆ ( EPFO)ವನ್ನು ಭಾರತ ಸರ್ಕಾರ ಪರಿಚಯಿಸಿದೆ. ಈ ಭವಿಷ್ಯ ನಿಧಿಗೆ ಈ ವರ್ಷ 25 ವರ್ಷಕ್ಕಿಂತ ಕಡಿಮೆ ಇರುವ ಯುವ ಉದ್ಯೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಹೊಸದಾಗಿ ಸೇರ್ಪಡೆ ಆಗಿದ್ದಾರೆ ಎಂದು ಕಾರ್ಮಿಕ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.
ಪ್ರಸಕ್ತ ವರ್ಷ 2024ರ ಅಕ್ಟೋಬರ್‌ನಲ್ಲಿ ನೌಕರರ ಭವಿಷ್ಯ ನಿಧಿ ಸಂಘಟನೆಗೆ (EPFO) ಒಟ್ಟು 13 ಲಕ್ಷಕ್ಕೂ ಹೆಚ್ಚು ಮಂದಿ ಹೊಸ ಸದಸ್ಯರು ಸೇರ್ಪಡೆಯಾಗಿದೆ. ಅಷ್ಟೇ ಪ್ರಮಾಣದಲ್ಲಿ ಯುಎಎನ್ ಸಂಖ್ಯೆ ಸೃಜನೆಯಾಗಿವೆ. ಈ ಹಿಂದಿನ 2023ಕ್ಕೆ ಹೋಲಿಕೆ ಮಾಡಿದರೆ ಈ ವಷ್ ಹೊಸ ಸದಸ್ಯರ ಸೇರ್ಪಡೆ ಪ್ರಮಾಣ ಶೇಕಡಾ 16ರಷ್ಟು ಹೆಚ್ಚಳವಾಗಿದೆ.

ಕಾರ್ಮಿಕ ಸಚಿವಾಲಯದ ಪ್ರಕಾರ, ಈ ಹೊಸ ಸದಸ್ಯರಲ್ಲಿ ಬಹುಪಾಲು ಮಂದಿ 18ರಿಂದ 25 ವರ್ಷ ವಯೋಮಾನದವರೇ (ಶೇಕಡಾ 58) ಇದ್ದಾರೆ. EPFO ಹೊಸ ಸದಸದ್ಯರಲ್ಲಿ ಬಹುಪಾಲು ಮಂದಿ ಮಹಾರಾಷ್ಟ್ರ ರಾಜ್ಯದವರಾಗಿದ್ದಾರೆ. ಅಂದರೆ ಸೇರ್ಪಡೆಗೊಂಡರವರಲ್ಲಿ ಆ ರಾಜ್ಯದ ಜನರು ಹೆಚ್ಚಿದ್ದಾರೆ.
ಇನ್ನೂ ನಿಖರ ಅಂಕಿ ಸಂಖ್ಯೆಗಳನ್ನು ನೋಡುವುದಾದರೆ 13..41ಲಕ್ಷ ಹೊಸ ಸದಸ್ಯರಲ್ಲಿ 18ರಿಂದ 25 ವರ್ಷದವರ ಸಂಖ್ಯೆ 5.43 ಲಕ್ಷ ಇದೆ. ಒಟ್ಟು ಸದಸ್ಯರರಲ್ಲಿ ಮಹಿಳೆಯರು 2.09 ಲಕ್ಷ ಜನರಿದ್ದಾರೆ ಎಂದು ಸಚಿವಾಲಯರು ಮಾಹಿತಿ ನೀಡಿದೆ.
ಇನ್ನೂ ನಂತರದ ಸ್ಥಾನದಲ್ಲಿ ಕರ್ನಾಟಕ, ಹರಿಯಾಣ, ತೆಲಂಗಾಣ, ದೆಹಲಿ, ಗುಜರಾತ್ ರಾಜ್ಯದವರು ಇದ್ದಾರೆ. ಒಟ್ಟಾರೆ ದೇಶದ ಎಲ್ಲ ರಾಜ್ಯಗಳ ಪೈಕಿ ಈ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು EPFO ಹೊಸ ಸದಸ್ಯರಾಗಿದ್ದಾರೆ ಎಂದು ಅಂಕಿ ಸಂಖ್ಯೆಗಳು ಮಾಹಿತಿ ನೀಡಿವೆ.
ದೇಶದಲ್ಲಿ ಎಲ್ಲ ರಂಗಗಳು ತಮ್ಮದೇ ಆದ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಹೀಗಾಗಿ ಹೊಸ ಹೊಸ ನೇಮಕಾತಿಗಳು, ಉದ್ಯೋಗ ಸೃಷ್ಟಿ ಆಗುತ್ತಿವೆ. ಇದರಿಂದ ನೌಕರರ ಪ್ರಮಾಣ ಹೆಚ್ಚಾಗಿದ್ದು, ವರ್ಷದಿಂದ ವರ್ಷಕ್ಕೆ ನೌಕರರ ಭವಿಷ್ಯ ನಿಧಿ ಸಂಘಟನೆಗೆ (EPFO) ಸೇರುವವರ ಸಂಖ್ಯೆ ಏರಿಕೆ ಆಗುತ್ತಿದೆ.
PF ಹಣ ಎಟಿಎಂ ನಲ್ಲೇ ಪಡೆಯಿರಿ
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಇಪಿಎಫ್‌ಒ ನೌಕರರಿಗೆ ಗುಡ್ ನ್ಯೂಸ್ ನೀಡಿತ್ತು. ಮುಂದಿನ ದಿನಗಳಲ್ಲಿ ಆನ್‌ಲೈನ್ ನಲ್ಲಿ ಪಿಎಫ್ ಹಣಕ್ಕೆ ಕ್ಲೈಮ್ ಮಾಡಿಕೊಂಡ ಬಳಿಕ ಆ ಹಣವನ್ನು ಬ್ಯಾಂಕ್ ಡೆಬಿಟ್ ಕಾರ್ಡ್ ರೀತಿಯಲ್ಲಿ ಎಟಿಎಂ ಕಾಡಿನಲ್ಲೇ ವಿತ್‌ಡ್ರಾ ಮಾಡಲು ಅವಕಾಶ ಕಲ್ಪಿಸಲು ಸಜ್ಜಾಗಿದೆ. ಸದ್ಯ ಇದು ಹೊಸ ವ್ಯವಸ್ಥೆಯ ಜಾರಿ ಹಂತದಲ್ಲಿ, ಹೊಸ ವರ್ಷ 2025ರಲ್ಲಿ ಜಾರಿಯಾಗುವ ಸಾಧ್ಯತೆ ಇದೆ.












Click it and Unblock the Notifications