Get Updates
Get notified of breaking news, exclusive insights, and must-see stories!

ಇಡೀ ದೇಶ 6ರಿಂದ 10 ವಾರ ಲಾಕ್ ಡೌನ್ ಆಗಬೇಕು: ಬಿಲ್ ಗೇಟ್ಸ್

ನವದೆಹಲಿ, ಮಾರ್ಚ್ 27: ಜಾಗತಿಕವಾಗಿ ಕೊರೊನಾ ವ್ಯಾಪಿಸಿ, ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇಂಥ ಸನ್ನಿವೇಶದಲ್ಲಿ ಕೊರೊನಾ ಬಗ್ಗೆ ಮೈಕ್ರೋಸಾಫ್ಟ್ ಸಂಸ್ಥಾಪಕ ಹಾಗೂ ದತ್ತಿ ಸಂಸ್ಥೆಗಳನ್ನು ನಡೆಸುವ ಬಿಲ್ ಗೇಟ್ಸ್ TED ಟಾಕ್ಸ್ ನಲ್ಲಿ ಮಾತನಾಡಿದ್ದಾರೆ. ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Entire Country Needs To Shutdown For 6 To 10 Weeks: Bill Gates On Corona

"ಇಲ್ಲಿ ಮಧ್ಯಮ ಪಥ" ಎಂಬುದು ಯಾವುದೂ ಇಲ್ಲ. ಕೊರೊನಾ ವೈರಾಣು ವಿರುದ್ಧ ಹೋರಾಡಲು ಕನಿಷ್ಠ 10 ವಾರಗಳ ಕಾಲ "ಸಂಪುರ್ಣ ಸ್ಥಗಿತ" ಆಗಬೇಕು, ಕೊರೊನಾ ಯುನೈಟೆಡ್ ಸ್ಟೇಟ್ಸ್ ಪೂರ್ತಿ ಹಬ್ಬದಿರಲು ಇದು ಅನಿವಾರ್ಯ ಮತ್ತು ಆ ಮೂಲಕ ದೀರ್ಘಾವಧಿ ಆರ್ಥಿಕ ಪ್ರಭಾವವನ್ನು ಕಡಿಮೆ ಮಾಡಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕೊರೊನಾ ವೈರಾಣುವಿನ ಅಪಾಯ ಏನು ಅಂದರೆ, ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ಸೋಂಕು ತಗುಲುತ್ತದೆ. ಈ ರೀತಿಯಾದ ವೈರಾಣುಗಳು ಬಹಳ ಕೆಟ್ಟ ಸನ್ನಿವೇಶದಲ್ಲಿ ಸೃಷ್ಟಿಯಾಗಿವೆ. "ಯಾವುದಾದರೂ ಮುಂದಿನ ಕೆಲವು ದಶಕಗಳಲ್ಲಿ ಕೋಟಿ ಜನರನ್ನು ಕೊಂದರೆ, ಅದು ತೀವ್ರ ವೇಗದಲ್ಲಿ ಹಬ್ಬುವಂಥ ವೈರಾಣುಗಳೇ ಆಗಿರುತ್ತವೆ ಹೊರತು ಯುದ್ಧವಲ್ಲ. ಕ್ಷಿಪಣಿಗಳಲ್ಲ, ಸೂಕ್ಷ್ಮಾಣುಗಳು" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕೊರೊನಾ ವೈರಾಣು MERS ಹಾಗೂ SARSಗಿಂತಲೂ ಹೆಚ್ಚು ವೇಗವಾಗಿ ಸೋಂಕನ್ನು ಹಬ್ಬಿಸುತ್ತದೆ, ಆದರೆ ಅಷ್ಟು ಅಪಾಯಕಾರಿಯಲ್ಲ ಎಂದಿದ್ದಾರೆ. ಎಬೋಲಾ, ಸೋಂಕು ವಿಪರೀತದ ಹಂತಕ್ಕೆ ತಲುಪುವ ಮುನ್ನ ನಿತ್ರಾಣರಾಗುತ್ತೀರಿ. ಆ ಕಾರಣಕ್ಕೆ ಚರ್ಚ್ ಅಥವಾ ಬಸ್ ಅಥವಾ ಯಾವುದೇ ಮಳಿಗೆಯಲ್ಲಿ ನೀವು ಕಾಣಿಸಿಕೊಳ್ಳಲ್ಲ.

"ಆದರೆ ಫ್ಲೂನಂಥ ಶ್ವಾಸಕೋಶ ಸಮಸ್ಯೆ ಇದ್ದಲ್ಲಿ ಮೊದಲಿಗೆ ಸ್ವಲ್ಪ ಜ್ವರ, ಆಲಸ್ಯ ಕಾಣಿಸಿಕೊಳ್ಳುತ್ತದೆ. ಆಗ ಮಾಮೂಲಿ ಕೆಲಸಗಳಿಗೆ ತೆರಳುತ್ತೀರಿ. ಇತರರಿಗೂ ಸೋಂಕು ತಗುಲುವಂತೆ ಮಾಡುತ್ತೀರಿ. ಮನುಷ್ಯರಿಂದ ಮುಷ್ಯರಿಗೆ ಉಸಿರಾಟದ ಮೂಲಕ ಹರಡುವ ವೈರಸ್ ಗಳು ಮೊದಲಿಗೆ ಯಾವುದೇ ಚಟುವಟಿಕೆಗಳನ್ನು ನಿಲ್ಲಿಸುವಂತೆ ಮಾಡಲ್ಲ. ಅದು ಬಹಳ ಕೆಟ್ಟ ಪರಿಸ್ಥಿತಿ" ಎಂದು ಐದು ವರ್ಷದ ಹಿಂದೆ TED Talksನಲ್ಲಿ ಹೇಳಿದ್ದರು.

ಜನರು ಈಗ ಜಗತ್ತಿನಾದ್ಯಂತ ಸುತ್ತಾಡುತ್ತಾರೆ. ಆದ್ದರಿಂದ ಎಲ್ಲ ಕಡೆ ಇದಕ್ಕೆ ಜನ ಬಲಿಪಶುಗಳಾಗುತ್ತಾರೆ. ನನಗೆ ಗೊತ್ತು, ವೈರಸ್ ನ ನಿಯಂತ್ರಿಸುವುದು ಬಹಳ ಕಷ್ಟ. ಯಾವಾಗ ಇದು ಮನುಷ್ಯರಿಂದ ಮನುಷ್ಯರಿಗೆ ಹಬ್ಬುವ ಕಾಯಿಲೆ ಅಂತ ಗೊತ್ತಾಯಿತೋ, ಅಂದರೆ ಜನವರಿ ಸುಮಾರಿಗೆ ಗೊತ್ತಾಯಿತು. ಆಗಲೇ ಇದರ ನಿಯಂತ್ರಣ ಕಷ್ಟ ಎಂಬುದು ತಿಳಿಯಿತು ಎಂದು ಅವರು ಹೇಳಿದ್ದಾರೆ.

ಈ ಸಂದರ್ಶನವು ಬಿಲ್ ಗೇಟ್ಸ್ ಗೆ ಅಭಿಮಾನಿಗಳಿಗೆ ಮಾತ್ರ ಅಲ್ಲ, ಕೊರೊನಾ ವೈರಾಣು ಬಗ್ಗೆ ಆತಂಕ ಇರುವ ಎಲ್ಲರೂ ನೋಡಬೇಕಾದದ್ದು. ಆ ವಿಡಿಯೋ ಇಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+