Viral Video: ರಸ್ತೆಯಲ್ಲೇ ವಾಹನ ಉರುಳಿಸಿದ ದೈತ್ಯ ಕಾಡಾನೆ, ಮುಂದೇನಾಯ್ತು?
ಕರ್ನಾಟಕದ ಬಂಡೀಪುರ ಅರಣ್ಯದಲ್ಲಿ ಕಾಡಿನ ರಸ್ತೆ ಮಧ್ಯೆ ನಿಂತು ಆನೆ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ಮಾಡಿತ್ತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ವ್ಯಕ್ತಿ ಪಾರಾಗಿದ್ದ. ಇದೀಗ ಬೇರೊಂದು ಕಡೆ ರಸ್ತೆ ಮಧ್ಯದಲ್ಲಿ ಮಿನಿ ಟ್ರಕ್ ಅನ್ನು ಸೊಂಡಿಲಿನಿಂದ ದೂಡಿ ಉರಳಿಸುತ್ತಿರುವ ಆನೆಯ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರಣ್ಯ ಸಂಪತ್ತು ಒತ್ತುವರಿ ಮಾಡಿಕೊಳ್ಳುವ ಮಾನವನಿಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂದೆಲ್ಲ ಚರ್ಚೆ ಶುರುವಾಗಿದೆ.
ವೈರಲ್ ಆದ ಆನೆ ದಾಳಿ ವೀಡಿಯೋಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ವನ್ಯಜೀವಿಗಳಿಗೆ ಮೀಸಲಾದ ಪ್ರದೇಶದಲ್ಲಿ ಮಾನವನ ಗುರುತು ಇಂದು ಸಂಘರ್ಷಕ್ಕೆ ಕಾರಣವಾಗಿದೆ. ಪ್ರಾಣಿಗಳಿಗೆ ಅರ್ಹವಾದ ಸ್ಥಳ ಮತ್ತು ಅರಣ್ಯ ಬಗ್ಗೆ ಯೋಚಿಸಬೇಕಿದೆ. ದಟ್ಟ ಹಸಿರಿನ ಮಧ್ಯ ಶಾಂತ ರಸ್ತೆಯಲ್ಲಿ ಈ ದಾಳಿ ನಡೆದಿರುವುದು ಕಾಣಿಸುತ್ತದೆ. ಈ ವಿಡಿಯೋ ಅನ್ನು ನಿವೃತ್ತ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ (@susantananda3) ಅವರು ಹಂಚಿಕೊಂಡಿದ್ದಾರೆ.

ಆನೆಯು ತನ್ನ ಅಗಾಧ ಶಕ್ತಿಯಿಂದ ನೋಡ ನೋಡುತ್ತಲೇ ವಾಹನವನ್ನು ಉರುಳಿಸಿ ಬಿಡುತ್ತದೆ. ಈ ಮೂಲಕ ಸಂಚಾರಕ್ಕೆ ಅಡ್ಡಿಪಡಿಸಿದೆ. ರಸ್ತೆಯಿಂದ ಪಕ್ಕಕ್ಕೆ ತಳ್ಳುತ್ತಲೇ ಮಿನಿ ಟ್ರಕ್ ಅನ್ನು ಕೆಡವುವ ದೃಶ್ಯ ಕಾಣಿಸುತ್ತದೆ. ಸದ್ಯ ಅಷ್ಟಕ್ಕೆ ಸುಮ್ಮನಾದ ಆನೆಯಿಂದ ಪ್ರಾಣ ಹಾನಿಯಾಗಿಲ್ಲ ಎನ್ನಲಾಗಿದೆ. ಆನೆಯ ಈ ಕ್ರಿಯೆಯು ಕೇವಲ ಅದರ ಶಕ್ತಿ ಮಾತ್ರವಲ್ಲದೇ ಆನೆಯ ಒತ್ತಡ ಸಹ ತೋರ್ಪಡಿಸುತ್ತದೆ. ವನ್ಯಜೀವಿಗಳು ಮನರಂಜನೆಯಲ್ಲ. ಅವುಗಳಿಗೆ ಯಾವ ತೊಂದರೆ ಇಲ್ಲದಂತೆ ಬದುಕಲು ಮುಕ್ತ ಅವಕಾಶ ನೀಡಬೇಕು. ಆದಷ್ಟು ಮನುಷ್ಯರು ವನ್ಯಜೀವಿಗಳಿಂದ ದೂರವೇ ಇರಬೇಕೆಂದು ಅವರು ವಿಡಿಯೋ ಜೊತೆಗೆ ಶಿರ್ಷಿಕೆ ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಬಗ್ಗೆ ಮಿಶ್ರ ಪ್ರತಿಕ್ರಿಯೆ
ವಾಹನದ ಮೇಲೆ ಆನೆ ದಾಳಿಯ ವಿಡಿಯೋ ಸುಮಾರು 13ಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ವಿಡಿಯೋಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಾಹನ ಮಾಲೀಕರ ಬಗ್ಗೆ ಮರುಗಿದ್ದಾರೆ. ಮತ್ತೆ ಹಲವರು ಅರಣ್ಯ ಪ್ರದೇಶಗಳ ಒತ್ತುವರಿ, ವನ್ಯಜೀವಿಗಳಿಗೆ ಮನುಷ್ಯನಿಂದಾಗುವ ತೊಂದರೆ ಕುರಿತು ವಿಷಾಧಿಸಿದ್ದಾರೆ.
ಮನುಷ್ಯರ ವಾಸಸ್ತಾನ, ಚಟುವಟಿಕೆ ಅರಣ್ಯ ಪ್ರದೇಶಗಳಿಗೆ ವಿಸ್ತರಿಸಿದೆ. ಹೀಗಾಗಿ ಆಗಾಗ ಮಾನವ ಮತ್ತು ಕಾಡು ಪ್ರಾಣಿಗಳ ಮಧ್ಯ ಸಂಘರ್ಷ ಉಂಟಾಗುತ್ತಲೇ ಇದೆ. ಈ ಬಗ್ಗೆ ಪರಿಸರವಾದಿಗಳು, ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಒಮ್ಮೆ ಡೆಹ್ರಾಡೂನ್‌ಗೆ ಹೋಗುವ ವೇಳೆ ಹೆದ್ದಾರಿಯಲ್ಲಿ ಆನೆಗಳ ಹಿಂಡು ನೋಡಿದೆ. ನಮ್ಮ ಟ್ಯಾಕ್ಸಿ ಚಾಲಕ ವಾಹನವನ್ನು ಅವುಗಳಿಂದ ದೂರದಲ್ಲಿ ನಿಲ್ಲಿಸಿದೆವು. ಅವುಗಳಿಗೆ ತೊಂದರೆಯಾಗಬಾರದು ಎಂದು ಸಲಹೆ ನೀಡಿದರು. ಸುಮಾರು ಒಂದು ಗಂಟೆ ಕಾಲ ನಿಂತುಕೊಂಡು ನಂತರ ಮುಂದೆ ಸಾಗಿದೆವು ಎಂದು ನೆಟ್ಟಿಗರೊಬ್ಬರು ತಮ್ಮ ಅನುಭವವನ್ನು ಕಾಮೆಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ಸದರಿ ಈ ಮೇಲಿನ ವಿಡಿಯೋ ಎಲ್ಲಿ ನಡೆದಿದೆ ಎಂಬುದರ ಸ್ಥಳದ ಬಗ್ಗೆ ಸ್ಪಷ್ಟತೆ ಇಲ್ಲ.












Click it and Unblock the Notifications