ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ 2019: ಇಂದಿನ ಮತದಾರರ ಮನವೊಲಿಸಿದ ಫ್ಲಿಪ್ ಕಾರ್ಟ್

|
Google Oneindia Kannada News

ಬೆಂಗಳೂರು, ಏಪ್ರಿಲ್ 17: ಭಾರತದ ಪ್ರಗತಿಪರ ಕಥೆಗಳನ್ನು ಹೇಳುತ್ತಾ ಮನರಂಜನೆ ನೀಡುವುದರಲ್ಲಿ ಚಾಂಪಿಯನ್ ಎಂದೆನಿಸಿಕೊಂಡಿರುವ ಫ್ಲಿಪ್ ಕಾರ್ಟ್, ಈಗ ಸಾಂಪ್ರದಾಯಿಕವಾಗಿ ವೈವಿಧ್ಯಮಯವಾದ ಪ್ರೇಕ್ಷಕರನ್ನು ಒಗ್ಗೂಡಿಸುವ ಕೆಲಸವೊಂದಕ್ಕೆ ಕೈಹಾಕಿದೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಭಾರತವು ಶಾಪಿಂಗ್ ಮಾಡುತ್ತಿದ್ದ ಬಗೆಯನ್ನೇ ಬದಲಿಸಿರುವಂಥ ಬ್ರಾಂಡ್, ಇದೀಗ ನಾವು ಚುನಾವಣೆಗಳನ್ನು ನೋಡುವ ದೃಷ್ಟಿಯನ್ನೇ ಬದಲಿಸಲು ಹೊರಟಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿರುವ ಭಾರತದಲ್ಲಿ ಇದೀಗ, ಇಡೀ ದೇಶವೇ "ನಾವು ವರ್ಸಸ್ ಅವರು'' ಎಂಬ ವಿಭಜನೆಯೊಂದು ಕಾಣುತ್ತಿದೆ.

ಗುರುವಾರ 2 ನೇ ಹಂತದ ಮತದಾನ, ತಿಳಿಯಲೇಬೇಕಾದ ಸಂಗತಿಗಳು ಗುರುವಾರ 2 ನೇ ಹಂತದ ಮತದಾನ, ತಿಳಿಯಲೇಬೇಕಾದ ಸಂಗತಿಗಳು

ಫ್ಲಿಪ್ ಕಾರ್ಟ್ ತನ್ನ ಹೊಸ ವೀಡಿಯೋದಲ್ಲಿ, ಹೊಸ ತಲೆಮಾರಿನ ಮತದಾರರ ಮನಸ್ಥಿತಿಯನ್ನು ಬದಲಿಸುತ್ತಿದೆ ಮಾತ್ರವಲ್ಲ, ನೀವು ಮತ ಚಲಾಯಿಸಿದ ಬಳಿಕ ಏನೇನಾಗುತ್ತದೆ ಎಂಬುದರ ಪ್ರಜ್ಞೆಯನ್ನೂ ವೀಕ್ಷಕರಿಗೆ ನೀಡಲಿದೆ.

Elections 2019: Lets change the way we show our vote this #EqualsDay

ಪ್ರತಿಯೊಬ್ಬರ ಮತದಾನದ ಮೌಲ್ಯವೂ ಒಂದೇ ಆಗಿರುವ ಕಾರಣ, ಯಾವುದೇ ವ್ಯಕ್ತಿಗಳ ನಡುವೆ ಯಾವ ಭಿನ್ನತೆಯೂ ಕಾಣದಂಥ ಏಕೈಕ ದಿನವೆಂದರೆ ಅದು ಚುನಾವಣೆಯ ದಿನ ಎಂಬುದನ್ನು ಫ್ಲಿಪ್ ಕಾರ್ಟ್ ಒತ್ತಿ ಹೇಳುತ್ತದೆ. ಈ ವೀಡಿಯೋವು ಹಲವರ ಮನ ಗೆದ್ದಿದ್ದು, ಇದು ಭಾರತದಲ್ಲಿನ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತಿದೆ ಮಾತ್ರವಲ್ಲ, ಸಮಾನರ ದಿನ ಇನ್ನೂ ಜೀವಂತವಾಗಿದೆ ಎಂಬ ತತ್ವವನ್ನು ಸಂಕೇತಿಸುತ್ತದೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಹುಡುಕಿರಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಹುಡುಕಿರಿ

ಸಮಾನರ ದಿನದ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿ ಮಾತನಾಡಿದ ಅಪೂರ್ವ ಸೇಥಿ(ಫ್ಲಿಪ್ ಕಾರ್ಟ್ ಬ್ರಾಂಡ್ ಮಾರ್ಕೆಟಿಂಗ್ ನಿರ್ದೇಶಕರು), "ಫ್ಲಿಪ್ ಕಾರ್ಟ್ ನಲ್ಲಿ ನಮಗೆ ಯಾವತ್ತೂ ಸಾಮಾಜಿಕವಾಗಿ ಪ್ರಾಮುಖ್ಯತೆ ಹೊಂದಿರುವ ಪ್ರಭಾವಶಾಲಿ ಸಂವಾದವನ್ನು ಸೃಷ್ಟಿಸುವಂತೆ ಉತ್ತೇಜನ ನೀಡಲಾಗುತ್ತದೆ.

ಈ ಹಿಂದೆ, ನಾವು ಲಿಂಗ ಸಮಾನತೆಯ ಕೂಗಿಗೆ ಧ್ವನಿಯಾದರೆ, ಈ ವರ್ಷ ನಾವು ದೇಶದ ಪ್ರಜಾಪ್ರಭುತ್ವದೊಳಗೆ ಸಮ್ಮಿಳಿತವಾಗಿರುವ ಸಮಾನತೆಯ ಆಶಯದ ಎಳೆಗಳನ್ನು ನೇಯಲು ಮುಂದಾಗಿದ್ದೇವೆ. ಈ ಅಭಿಯಾನದ ಮೂಲಕವಾಗಿ, ನಾವು ನಮ್ಮ ಗ್ರಾಹಕರೊಂದಿಗೆ ಸಂಪರ್ಕ ಹೊಂದುವ ಅಗತ್ಯತೆಯನ್ನು ಮನಗಂಡಿದ್ದೇವೆ. ಅಲ್ಲದೆ, ಚುನಾವಣೆಯನ್ನು ನಾವೆಲ್ಲರೂ ನಮ್ಮ ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗುವಂಥ ಪವಿತ್ರ ಸಮಯವೆಂಬಂತೆ ನೋಡಬೇಕೆಂದು ಪ್ರೇರೇಪಿಸುತ್ತಿದ್ದೇವೆ'' ಎಂದರು.

English summary
Elections 2019: Whoever you are, whatever you do, and however different your political beliefs are, the vote counts us as equals. Let's change the way we show our vote to celebrate elections for the festival it is... A festival of equality. #EqualsDay #WeAreEqual #NayeIndiaKeSaath
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X